PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,೩೦ : ನಗರದ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ
 ಇತಿಹಾಸ ವಿಭಾಗದ ಪ್ರೊ.ಎಂ.ಎಂ. ಕಂಬಾಳಿಮಠ ಅವರ ನಿವೃತ್ತಿಯ ನಿಮಿತ್ಯ ಬೀಳ್ಕೊಡಿಗೆ ಕಾರ್ಯಕ್ರಮ ಸಭಾಭವನದಲ್ಲಿ  ಹಮ್ಮಿಕೊಳ್ಳಕಾಗಿತ್ತು. ಬೀಳ್ಕೊಡಿಗೆ ಕಾರ್ಯಕ್ರಮವನ್ನು ಉದ್ಧೇಶಿಸಿ  ಮಾತನಾಡಿದ  ಪ್ರೊ.ಎಂ.ಎಂ. ಕಂಬಾಳಿಮಠ  ನಾನು ಜೀವನದಲ್ಲಿ ಹಲವಾರು ನೋವುಗಳನ್ನು ಅನುಭವಿಸಿದ್ಧೇನೆ. ಹೀಗಾಗಿ ನನಗೆ ನಿವೃತ್ತಿಯ ಈ  ದಿನದಲ್ಲಿ ನಾನು ಸಹಜವಾಗಿ ಯಾವುದೇ ಭಾವೋದ್ವೇಗಕ್ಕೆ ಒಳಗಾಗುವದಿಲ್ಲ. ಸತತ ಆಧ್ಯಯನ ಹಾಗು  ಪರಿಶ್ರಮದಿಂದಾಗಿ  ಸುಧೀರ್ಘ ಸೇವೆ ಸಲ್ಲಿಸಿದ್ಧೇನೆ. ವಿದ್ಯಾರ್ಥಿಗಳ  ಭವಿಷ್ಯವನ್ನು  ಕಟ್ಟುವಸಲುವಾಗಿ ಪ್ರಾಮಾಣಿಕವಾಗಿ ಸೇವೆಸಲ್ಲಿಸಿರುತ್ತೇನೆ. ಸಹಕರಿಸಿದ ಎಲ್ಲರನ್ನು ನಾನು  ಈ ದಿನ ಸ್ಮರಿಸುತ್ತೇನೆ ಎಂದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ ಮಾತನಾಡಿ ಪ್ರೊ.ಎಂ.ಎಂ. ಕಂಬಾಳಿಮಠ ವಿದ್ಯಾರ್ಥಿಗಳ ಪಾಲಿಗೆ ನೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಕರ್ತವ್ಯ ನಿಷ್ಟೆ, ಅಪಾರ ಪಾಂಡಿತ್ಯ,ಮತ್ತು ಭೋಧನೆಯಲ್ಲಿ ಪರಿಣಿತಿ ಪಡೆದವರಾಗಿ ಅಖಂಡ ೩೧ ವರ್ಷ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಪಾಲಿಗೆ ನೆಚ್ಚಿನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು ಎಂದರು. ವೇದಿಕೆಯಲ್ಲಿ ಪ.ಪೂ ಕಾಲೇಜಿನ  ಪ್ರಾಚಾರ್ಯ ಪರಿಕ್ಷೀತರಾಜ, ನಿವೃತ್ತ ಪ್ರಾಧ್ಯಾಪಕ ಎಂ.ಎಂ. ಇಂಡಿ ಉಪಸ್ಥಿತರಿದ್ದರು. ನಿರೂಪಣೆ ಡಾ.ಜೆ.ಎಸ್. ಪಾಟೀಲ ಪ್ರಾಧ್ಯಾಪಕರು ನೆರವೇರಿಸಿದರು. ಕಾಲೇಜಿನ ಸಮಸ್ತ ಸಿಬ್ಭಂಧಿ ಭಾಗವಹಿಸಿದ್ದರೆಂದು ಉಪನ್ಯಾಸಕ ಡಾ.ಪ್ರಕಾಶಬಳ್ಳಾರಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top