ಕೊಪ್ಪಳ, ಆ. ೧೪ : ಹಾಲುಮತ ಸಮುದಾಯವು ವಿಶಿಷ್ಟ ಆಚರಣೆ, ನಂಬಿಕೆ ಹಾಗೂ ಸಂಪ್ರದಾಯಗಳಿಂದ ಸಾಮಾಜಿಕ ಪ್ರಜ್ಞೆಗೆ ಪ್ರತಿನಿಧಿ ಎನ್ನುವಂತೆ ಬೆಳೆದು ಬಂದಿದೆ. ಈ ಹಿನ್ನೆಲೆಯಲ್ಲಿ ಹಾಲುಮತ ಸಮುದಾಯದ ಚರಿತ್ರೆ ನಿರ್ಮಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಾಗಿದೆ ಎಂದು ಇರಕಲ್ಲಗಡ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಹುಲಿಗೆಮ್ಮ ಬಿ. ಅವರು ಹೇಳಿದಾರೆ.

ಹಾಲುಮತ ಅಧ್ಯಯನ ಆಕರಗಳು, ಹಾಲುಮತ ಗುರು ಪರಂಪರೆ, ಒಳಪಂಗಡಳು ಅಲ್ಲದೆ ಹಾಲುಮತ ಗೀತ ಸಾಹಿತ್ಯ, ಕಾವ್ಯ ಸಾಹಿತ್ಯ ಇತ್ಯಾದಿ ಮೂಲಗಳಿಂದ ಹಾಲುಮತ ಸಮಾಜದ ಇತಿಹಾಸ, ಪ್ರಾಚೀನತೆ ಹಾಗೂ ಸಾಧನೆಗಳ ಕುರಿತು ಅಧ್ಯಯನಗಳು ನಡೆಯುತ್ತಿವೆ. ಹಾಲುಮತಸ್ಥರು ಪಶುಪಾಲನ ಸಂಸ್ಕೃತಿಯಿಂದ ತಮ್ಮ ಬದುಕನ್ನು ರೂಪಿಸಿಕೊಂಡು ಪ್ರಾಚೀನ ಭಾರತದ ಆದಿವಾಸಿಗಳ ಹಾಗೆ ಅತ್ಯಂತ ಪ್ರಾಚೀನ ಇತಿಹಾಸಯುಳ್ಳವರಾಗಿದ್ದಾರೆ. ಹಾಲುಮತದ ಚಾರಿತ್ರಿಕ ವ್ಯಕ್ತಿಗಳನ್ನು ಪುರಾಣದ ಪುಣ್ಯ ಪುರುಷರಂತೆ ಚಿತ್ರಿಸಿರುವುದು ವಿಷಾಧನೀಯ. ಅನೇಕ ರೀತಿಯ ವೈವಿಧ್ಯತೆಗಳಿವೆ. ಈ ವರೆಗೆ ಹತ್ತು ಹಾಲುಮತ ಪುರಾಣಗಳು ಲಭ್ಯವಿವೆ. ಈ ಹಿನ್ನೆಲೆಯಲ್ಲಿ ಭಾರತಿಯ ಸಂಸ್ಕೃತಿಯಲ್ಲಿ ಹಾಲುಮತ ಸಮುದಾಯದ ಚರಿತ್ರೆ ಗುರುತಿಸಿ ರೂಪಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಾಗಿದೆ ಎಂದು ಸಹಾಯಕ ಪ್ರಾದ್ಯಾಪಕಿ ಡಾ. ಹುಲಿಗೆಮ್ಮ ಬಿ. ಅವರು ಅಭಿಪ್ರಾಯಪಟ್ಟರು.
ಜೆಸ್ಕಾಂ ನಿವೃತ್ತ ಹಿರಿಯ ಲೆಕ್ಕಪರಿಶೋಧಕ ಬಸವರಾಜ ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸಿದರು. ಕುರುಬರ ಜಗತ್ತು ಪತ್ರಿಕೆ ಸಂಪಾದಕ ವಾಯ್. ಬಿ. ಡೊಳ್ಳಿನ, ಜೆಸ್ಕಾಂ ಶಾಖಾಧಿಕಾರಿ ಶರಣಬಸವರಾಜ ಕುರಿ, ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಜಿ. ಎಚ್. ಮಲ್ಲಾಪೂರ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸಿ. ವಾಯ್. ಮೇವುಂಡಿ, ಹರ್ಲಾಪುರ ಗ್ರಾ. ಪಂ. ಸದಸ್ಯ ಜಗದೀಶಗೌಡ, ಸ್ತ್ರೀರೋಗ ತಜ್ಞೆ ಡಾ|| ಚಂದ್ರಕಲಾ ನರಹಟ್ಟಿ, ಸರೋಜಾ ಗೌಡರ ಮುಖ್ಯ ಅತಿಥಿಳಾಗಿ ಭಾಗವಹಿಸಿದ್ದರು. ನಿಂಗಪ್ಪ ಹಿರೇಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ನವಲಗುಂದ ತಾಲೂಕಿನ ಬಳೂಟಗಿ ಗ್ರಾಮದ ದುರುಗಪ್ಪ ಮಜ್ಜಿಗಿ ಹಾಗೂ ಸಂಗಡಿಗರು ಡೊಳ್ಳಿನ ಹಾಡುಗಳನ್ನು ಹಾಡಿದರು.
ಪ್ರ್ರಾರಂಭದಲ್ಲಿ ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ ಸ್ವಾಗತಿಸಿದರು. ನ್ಯಾಯವಾದಿ ಲಂಕೇಶ ಡೊಳ್ಳಿನ ಅಥಿತಿಗಳನ್ನು ಪರಿಚಯಿಸಿದರು. ಕನಕ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಸವರಾಜ ಆಕಳವಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ವೈ. ಬಿ. ಜೂಡಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಪ್ಪ ಗಟ್ಟಿ ವಂದಿಸಿದರು.
0 comments:
Post a Comment