PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ :- ಹೆಣ್ಣು ಶೂದ್ರಳು ಅವಳು ದೀಕ್ಷೆ ಧಾರ್ಮಿಕ ಸ್ವಾತಂತ್ರ ಅರ್ಹತೆ ಇಲ್ಲ ಎಂಬ ಆ ಕಾಲದಲ್ಲಿಯೇ ಮಹಿಳೆಗೆ ಇಷ್ಠಲಿಂಗ ದೀಕ್ಷೆ ಕೊಟ್ಟ ಜಗತ್ತಿನ ಮೊದಲ ಪ್ರವಾದಿ ಬಸವಣ್ಣನವರಾಗಿದ್ದಾರೆ ಎಂದು ಸಿಂದನೂರಿನ ಶರಣ  ವೀರಭದ್ರಗೌಡರು ಕುರಕುಂದಿ ಹೇಳಿದರು. 
ದಿನಾಂಕ ೧೨ ರಂದು ಸಂಜೆ ೭ ಗಂಟೆಗೆ ಕೊಪ್ಪಳ ನಗರದ ಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ವಚನ ಶ್ರಾವಣ ಕಾರ್ಯಕ್ರಮದಲ್ಲಿ  ಧರ್ಮದಲ್ಲಿ ಬಸವಣ್ಣನವರ ಅವಶ್ಯಕತೆ ಎಂಬ ವಿಷಯ ಕುರಿತು. ಉಪನ್ಯಾಸ ನೀಡಿದ ಅವರು ಮೇಲಿನಂತೆ ಹೇಳಿದರು. 
ಮುಂದುವರೆದು ಮಾತನಾಡಿದ ಅವರು ಜಗತ್ತು ಎಷ್ಠು ಮುಂದುವರೆದರು ಇನ್ನೂ ಜಗತ್ತಿನ ಅರ್ಧದಷ್ಠು ರಾಷ್ಟ್ರಗಳಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಸಮಾನತೆ ಇಲ್ಲ ಆದರೆ ಬಸವಾದಿ ಶರಣರು ಹೆಣ್ಣು ಮಾಯೆ ಅಲ್ಲ ಮನಸ್ಸಿನ ಆಸೆಯೆ ಮಾಯೆ ಎಂದು   ಮಹಿಳೆಗೆ ಸರ್ವ ಸಮಾನತೆ ನೀಡಿದ್ದರು. ಸರ್ವ ಸುಂದರ ಸಮಾಜವು ಹೇಗಿರಬೇಕೆಂದು ಬಸವಾದಿ ಶರಣರು ಬದುಕು ತೋರಿಸಿ ಅದರ ಸಾಕ್ಷಿಯಾಗಿ ವಚನ ಸಾಹಿತ್ಯ ಕೊಟ್ಟು ಹೋಗಿದ್ದಾರೆ. ಅದಕ್ಕೆ ವಚನ ಸಾಹಿತ್ಯ ಅನುಭಾವ ಸಾಹಿತ್ಯವಾಗಿದೆ. ಎಂದು ಹೇಳಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಪಂಪಣ್ಣ ವಾರದ ವಹಿಸಿದ್ದರು, ಶರಣ ಗವಿಸಿದ್ದಪ್ಪ ಪಲ್ಲೇದ, ಶರಣ ಕಳಕಪ್ಪ ವಿವೇಕಿ ಉಪಸ್ಥಿತರಿದ್ದರು. ಕುಮಾರಿ ವರ್ಷಿಣಿ ಸಂಕ್ಲಾಪೂರ ವಚನ ಪ್ರಾರ್ಥನೆ ಗೈದರು. ಶರಣ ರೇವಣ್ಣ ಬೂತಣ್ಣನವರ ನಿರೂಪಿಸದರು. ಕವಿತಕ್ಕಾ ಉಮಚಗಿ, ಸ್ವಾಗತಿಸಿದರು, ದಾನಪ್ಪ ಶೆಟ್ಟರ ಶರಣು ಸಮರ್ಪಿಸಿದರು. 

Advertisement

0 comments:

Post a Comment

 
Top