ಕೊಪ್ಪಳ ಅಗಷ್ಟ ೨೪, ಮಂಡ್ಯ ಮತ್ತು ಬೆಂಗಳೂರ ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಹೀನಾಯ ಸೋಲುಂಡ ಜೆಡಿಎಸ್ ಪಕ್ಷವು ನಮ್ಮ ರಾಜ್ಯದಲ್ಲಿ ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡಿದೆ, ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದ ಹಾಗೆ ಜೆಡಿಎಸ್ ಪಕ್ಷದ ಹೀನಾಯ ಸ್ಥಿತಿಯಾಗಿದೆ. ಕೋಮುವಾದಿ ಬಿಜೆಪಿ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೇಸ ಪಕ್ಷವನ್ನು ಸೋಲಿಸುವುದೆ ನಮ್ಮ ಗುರಿಎಂದು ಹೇಳುತ್ತಿದ್ದ ತಂದೆ ಮಕ್ಕಳು ಇಂದು ಈ ಫಲಿತಾಂಶದಿಂದ ರಾಜಕೀಯ ನಿವೃತ್ತಿಯಾಗುವುದು ಒಳಿತು, ಕರ್ನಾಟಕದಲ್ಲಿ ಆಡಳಿತ ನಡೆಸುತಿರುವ ಜನಪ್ರೀಯ ಕಾಂಗ್ರೆಸ ಸರಕಾರವು ನುಡಿದಂತೆ ನಡೆಯುತ್ತಿದೆ. ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ರಾಮಯ್ಯನವರ ಜನಪ್ರೀಯ ಕಾರ್ಯಕ್ರಮಗಳು ದೀನ, ದಲಿತರ, ಅಲ್ಪ ಸಂಖ್ಯಾತರ, ಸಮಾಜದ ಎಲ್ಲ ಅವರ್ಗಗಳ ಜನತೆಗೆ ತಲುಪುತ್ತಿವೆ, ಹೀಗಾಗಿ ಬ್ರಷ್ಟ ಬಿಜೆಪಿಯ ಯಾವುದೇ ರಾಜಕೀಯ ತಂತ್ರಗಾರಿಕೆ ಉಪ ಚುನಾವಣೆಯಲ್ಲಿ ನಡೆಯಲಿಲ್ಲ, ೨೦೧೪ ರಲ್ಲಿಯೂ ಇವರ ನರೇದ್ರ ಮೋದಿಯ ಜಪವನ್ನು ರಾಜ್ಯದ ಜನತೆ ದಿಕ್ಕರಿಸಿ. ಎಲ್ಲಾ ೨೮ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ ಪಕ್ಷವು ಜಯಬೇರಿ ಬಾರಿಸಲಿದೆ ಎಂದು ಕಾಂಗ್ರೆಸ ಪ್ರಕದ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರದ ಕೆ. ರಾಘವೇಂದ್ರ ಹಿಟ್ನಾಳ, ಎಸ್. ಬಿ ನಾಗರಳ್ಳಿ, ಜಿಲ್ಲುಖಾದರಿ, ದ್ಯಾಮಣ್ಣ ಚಿಲವಾಡಗಿ, ಪ್ರಸನ್ನ ಗಡಾದ, ರಾಜು ನಾಲ್ವಾಡ, ಗಾಳೆಪ್ಪ ಪೂಜಾರ, ಕೃಷ್ಣಾ ಇಟ್ಟಂಗಿ, ಕಾಟನ್ ಪಾಷಾ, ಅನಿಕೇತ ಅಗಡಿ, ಮಲ್ಲಪ್ಪ ಕವಲೂರ, ಮುತ್ತುರಾಜ ಕುಷ್ಟಗಿ, ಮೌಲಾಹುಸೇನ್ ಜಮಾದಾರ, ರಾಮಣ್ಣ ಹದ್ದಿನ್, ರಾಮಣ್ಣ ಹಳ್ಳಿಗಡಿ, ಜುಬೇರ್ ಹುಸೇನಿ, ಅರ್ಜುನಸಾ ಕಾಟವಾ, ಶಿವಾನಂದ ಹುದ್ಲೂರ, ಮಾನ್ವಿ ಪಾಷಾ, ಯಮನೂರಪ್ಪ ನಾಯಕ, ಸುರೇಶ್ ದಾಸರಡ್ಡಿ, ಇಂದಿರಾ ಭಾವಿಕಟ್ಟಿ, ನವಾಜ್ ಹುಸೇನಿ, ಗೌಸ ಹುಸೇನಿ, ನೂರಜಾ ಬೇಗಂ, ನಾಗರಾಜ ಬಳ್ಳಾರಿ, ವೈಜನಾತ ದಿವಟರ್, ಪ್ರಶಾಂತ ರಾಯ್ಕರ, ಅನುಸುಯಮ್ಮ ವಾಲ್ಮಿಕಿ, ಡಿ. ಲಂಕೇಶ ವಕೀಲರು, ಹಾಜಿ ಹುಸೇನಿ, ಮುನೀರ ಸಿದ್ದಿಕಿ ಇನ್ನು ಅನೇಕರು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ್ ತಿಳಿಸಿದ್ದಾರೆ.
0 comments:
Post a Comment