PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಉದಯ ವಾಣಿ ವರದಿಗಾರ ಬಸವರಾಜ ಕರುಗಲ್ ಅವರ ತಂದೆ ಶಿವಪ್ಪ ಕರುಗಲ್ (೬೫) ಮಂಗಳವಾರ ರಾತ್ರಿ ಕೊಪ್ಪಳದಲ್ಲಿ ನಿಧನರಾಗಿದ್ದು, ಮೃತರು ಪತ್ನಿ, ೨ ಗಂಡು ಮಕ್ಕಳು ಸೊಸೆಯದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ಜರುಗಿತು ಎಂದು ಕುಟುಂಬ ಮೂಲ ತಿಳಿಸಿದೆ. 

ಕಂಬನಿ ಮಿಡಿದವರು: ಸಂಸದ ಶಿವರಾಮೇಗೌಡ, ಶಾಸಕರಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕರಾದ ಸಂಗಣ್ಣ್ಣ ಕರಡಿ, ಕೆ. ಬಸವರಾಜ ಹಿಟ್ನಾಳ, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಹೆಚ್.ಎಸ್. ಪಾಟೀಲ, ಮಾಹಂತೇಶ ಮಲ್ಲನಗೌಡರ, ವಿಠಪ್ಪ ಗೊರಂಟ್ಲಿ, ಶಿ.ಕಾ. ಬಡಿಗೇರ, ಹನಮಂತಪ್ಪ ಅಂಡಗಿ, ಇನ್ನಿತರರು. 


ಶಿವಪ್ಪ ಬಸಪ್ಪ ಕರುಗಲ್ ನಿಧನ : ಸಂತಾಪ

ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಆಂಡ್ ವರ್ಕರ್‍ಸ್ ಯೂನಿಯನಿಗೆ ಕೊಪ್ಪಳ ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾಗಿ ೧೯೮೭ ರಿಂದ ೨೦೦೬ರವರೆಗೆ ಸೇವೆ ಸಲ್ಲಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಆಂಡ್ ವರ್ಕರ್‍ಸ್ ಯೂನಿಯನಿಗೆ ಕೊಪ್ಪಳದಿಂದ ನಿರ್ವಾಹಕರಾಗಿ ಪ್ರಥಮ ಬಾರಿಗೆ ಸಂಘಟನೆಗೆ ಎ. ಹಮೀದ್‌ಸಾಬ, ಎ.ಬಿ. ದಿಂಡೂರ್ ಜೊತೆಯಲ್ಲಿ ಎಸ್.ಬಿ. ಕರುಗಲ್ ಸೇರಿದರು. ಆಗ ಸಂಘಟನೆಯಲ್ಲಿ ನಿರ್ವಾಹಕರನ್ನು ಸೇರ್ಪಡೆ ಮಾಡುವಲ್ಲಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಚಾಲಕರು, ತಾಂತ್ರಿಕರು ಮಾತ್ರ ಹೆಚ್ಚು ಸಂಖ್ಯೆಯಲ್ಲಿದ್ದರು ನಂತರ ಇವರ ಸೇರ್ಪಡೆಯಿಂದ ನಿರ್ವಾಹಕರ ಸಂಖ್ಯೆ ಹೆಚ್ಚಾಯಿತು ಎಂದು ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಮತ್ತು ವರ್ಕರ್‍ಸ್ ಯೂನಿಯನ್ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಎ.ಬಿ. ದಿಂಡೂರ ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಮತ್ತು ವರ್ಕರ್‍ಸ್ ಯೂನಿಯನ್ ಮಾಜಿ ಅಧ್ಯಕ್ಷ ಬಾಸುರಾವ್ ಆನಂದಕರ್, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಬಿಸರಳ್ಳಿ,  ಅಖಿಲ ಭಾರತ ಸಂಘಟನೆ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್, ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ರಾಜಾಭಕ್ಷಿ ಹೆಚ್.ವಿ., ಮಲ್ಲಯ್ಯ ಆಫ್‌ಸೆಟ್ ಪ್ರಿಂಟರ್‍ಸ್ ಮಾಲಿಕ ಹೆಚ್.ಕೆ. ಸುಭಾಸ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ, ಲಾಚನಕೇರಿ ಗ್ರಾಮ ಘಟಕ ಪ್ರಧಾನ ಕಾರ್ಯದರ್ಶಿ ನಾಗರಾಜ ಭೋವಿ, ಜಾಫರ್‌ಅಲಿ ದಫೇದಾರ, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಮತ್ತಿತರರು  ಸಂತಾಪ ಸೂಚಿಸಿದರು.

Advertisement

0 comments:

Post a Comment

 
Top