PLEASE LOGIN TO KANNADANET.COM FOR REGULAR NEWS-UPDATES

ಮಹಾರಾಷ್ಟ್ರ-ಪುಣೆಯ ಸುಪ್ರಸಿದ್ಧ ವಿಚಾರವಾದಿ ಡಾ: ನರೇಂದ್ರ ಧಬೋಲ್ಕರ್‌ರವರನ್ನು ಕೆಲವು ದುಷ್ಕರ್ಮಿಗಳು ಪುಣೆಯಲ್ಲಿ ಗುಂಡಿಕ್ಕಿ ಕೊಂದಿರುವುದು ಹ್ಯೇಯ ಕೃತ್ಯವೆಂದು ಕ್ರಾಂತಿಕಾರಿ ಯುವಜನ ಸಂಘದ ಜಿಲ್ಲಾ ಸಂಚಾಲಕರಾದ ರಾಘವೇಂದ್ರ  ಉಗ್ರವಾಗಿ ಖಂಡಿಸಿದಾರೆ. 
ಡಾ: ನರೇಂದ್ರರವರ ಹತ್ಯೆ ವ್ಯವಸ್ಥಿತವಾಗಿದ, ಹತ್ಯಾ ಸ್ಥಳದ ಪಕ್ಕದಲ್ಲೇ ಪೋಲೀಸ್ ನಾಕಾಬಂದಿ ಇದ್ದರೂ ಸಹ ಆರೋಪಿಗಳು ಪರಾರಿಯಾಗುವುದರಲ್ಲಿ ಸಫಲರಾಗಿದ್ದಾರ. ಡಾ: ನರೇಂದ್ರರವರು ಎಂ.ಬಿ.ಬಿ.ಎಸ್. ಪದವಿ ನಂತರ ಮಹಾರಾಷ್ಟ್ರದಾದ್ಯಂತ ದೂರ ದೂರದ ಪ್ರದೇಶಗಳಿಗೆ ಭೇಟಿ ನೀಡಿ, ಮೂಡನಂಬಿಕೆಗಳನ್ನು ಕಂದಾಚಾರಗಳನ್ನು ತ್ಯಜಿಸಬೇಕೆಂಬ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಜನರಲ್ಲಿ ವೈಜ್ಞಾನಿಕ ಜೀವನ-ವಿಧಾನವನ್ನು ಪಾಲಿಸಬೇಕೆಂದು ಪ್ರೆರೇಪಿಸುತ್ತಿದ್ದರು. ಹಾಗೂ ತಮ್ಮ ಪರಿವರ್ತನಾ ಸಂಸ್ಥೆಯ ಮುಖಾಂತರ ಮಧ್ಯಪಾನ ವ್ಯಸನಿಗಳ ಬಿಡುಗಡೆಗಾಗಿ ಪ್ರಯತ್ನಿಸುತ್ತಿದ್ದರು. ತಮ್ಮ ನಾಲ್ಕು ದಶಕಗಳ ಹೋರಾಟದಲ್ಲಿ ಅಮಾನವೀಯ ಕಂದಾಚಾರಗಳು ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಟಗಳ ಮುಖಾಂತರ ಅನೇಕ ಪಟ್ಟಭಧ್ರರ ವಿರೋಧವನ್ನು ಸಹ ಕಟ್ಟಿಕೊಂಡಿದ್ದರು. ಇತ್ತೀಚೆಗೆ ಅವರು ಮಹಾರಾಷ್ಟ್ರದ ಜಾತಿ ಪಂಚಾಯಿತಿ ವಿರುದ್ಧ  ಹೋರಾಟವನ್ನು ಸಹ ಮಾಡಿದ್ದರು.
ಇವರ ಹೋರಾಟಗಳನ್ನು ಅನೇಕ ಬಾರಿ ಹಿಂದುತ್ವವಾದಿ ಮತ್ತು ಪಟ್ಟಭದ್ರ ಹಿತಾಶಕ್ತಿಗಳು ವಿರೋಧಿಸುತ್ತಿದ್ದವು. ಇವರ ಅಗಲಿಕೆ ದೇಶದ ವಿಚಾರವಾದಿ ಚಳುವಳಿಗೆ ದೊಡ್ಡಪೆಟ್ಟಾಗಿದ್ದು, ವೈಜ್ಞಾನಿಕ ಮನೋಭಾವದ ಚಳುವಳಿಗಳಿಗೆ ತುಂಬಲಾರದ ನಷ್ಟವಾಗಿದೆ. ಡಾ: ನರೇಂದ್ರ ಧಬೋಲ್ಕರ್‌ರವರಂತಹ ವೈಜ್ಞಾನಿಕ ದೃಷ್ಠಿಕೋನ ಬೆಳೆಸುವ ಹೋರಾಟಗಾರರಿಗೆ ಸಮಾಜ ಮತ್ತು ಸರ್ಕಾರಗಳು ರಕ್ಷಣೆ ಒಗದಿಸಬೇಕೆಂದು ಆರ್.ವೈ.ಎ. ಒತ್ತಾಯಿಸುತ್ತದೆ.

Advertisement

0 comments:

Post a Comment

 
Top