ಕೊಪ್ಪಳ : ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಎಂಬುವದನ್ನು ಪಟ್ಟಣಿಗರಿಕ್ಕಿಂತ ಗ್ರಾಮೀಣ ಪ್ರದೇಶದ ಜನರು ಹೆಚ್ಚು ಅರಿತುಕೊಂಡಿದ್ದಾರೆ ಅದಕ್ಕೋಸ್ಕರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಾಟಕ, ಜನಪದ ಕಲೆಗಳನ್ನು ಹಳ್ಳಿಯ ಜನರು ಸಂರಕ್ಷಿಸಿ ಕೊಂಡು ಬಂದಿದ್ದಾರೆ. ಆದ್ದರಿಂದ ಭಾಷೆಯ ಉಳಿವಿಗೆ ಗ್ರಾಮೀಣ ಪ್ರದೇಶದ ಜನರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವೀರಣ್ಣ ನಿಂಗೋಜಿ ಹೇಳಿದರು.
ಜಿಲ್ಲೆಯ ಯಲಬುರ್ಗಾ ಪಟ್ಟಣದ ಎಸ್.ಎ.ನಿಂಗೋಜಿ ಬಿ.ಎಡ್ ಕಾಲೇಜಿನಲ್ಲಿ ಆಯೋಜಿಸಿದ ಕನ್ನಡ ಭಾಷಾ ವಿಷಯದಲ್ಲಿ ಪ್ರಾಯೋಗಿಕ ಕಾರ್ಯ ಹಾಗೂ ಕೊಪ್ಪಳ ಜಿಲ್ಲಾ ೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಪ್ರಶಿಕ್ಷಣಾರ್ಥಿಯೊಂದಿಗೆ ನೇರ ಸಂವಾದದಲ್ಲಿ ಮಾತನಾಡುತ್ತಿದ್ದ ಅವರು ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳ ತವರುರಾಗಿರುವ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದನ್ನು ಸಮರ್ಥಿಸಿಕೊಂಡರು.
ಇದೇ ಸಂದರ್ಭದಲ್ಲಿ ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆಯ ಪ್ರಭಾವ ಕುರಿತು ಚರ್ಚಾ ಸ್ಪರ್ಧೆ ಹಾಗೂ ಕನ್ನಡ ವಿಷಯದಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳು ಜರುಗಿದವು. ಪ್ರಾಚಾರ್ಯರರಾದ ಆರ್.ಎ.ನಿಂಗೋಜಿ, ಉಪನ್ಯಾಸಕರಾದ ಎನ್.ಎನ್.ಸೊಂಪೂರ, ವ್ಹಿ.ವ್ಹಿ.ಪತ್ತಾರ, ಎಮ್.ಎಮ್.ಮ್ಯಾಗೇರಿ, ಡಿ.ಬಿ.ದೇಸಾಯಿ ಇನ್ನಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಲ್ಲಾ ಪ್ರಶಿಕ್ಷಣಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಎನ್.ಎನ್.ಸೊಂಪೂರ, ಕಾರ್ಯಕ್ರಮವನ್ನು ನಿರೂಪಿಸದರು ಪ್ರಾಚಾರ್ಯರರಾದ ಆರ್.ಎ.ನಿಂಗೋಜಿ ಸ್ವಾಗತಿಸಿದರು. ವ್ಹಿ.ವ್ಹಿ.ಪತ್ತಾರ ವಂದಿಸಿದರು.
0 comments:
Post a Comment