ನಗರದ ಎಸ್ ಕೆ ಎಸ್ ಜಿ ಸರಕಾರಿ ಪದವಿ ಕಾಲೇಜ್‌ನ ಪತ್ರಿಕೋದ್ಯಮ ವಿಭಾಗ ಇಂದು ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಮತ್ತು ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಸಮಯದೊಂದಿಗೆ ಓಡುವ ಗುಣ ಮತ್ತು ಸಾಹಸ ಮನೋಭಾವ ಹೊಂದಿದವರು ಯಶಸ್ವಿ ಪತ್ರಿಕಾ ಛಾಯಾಗ್ರಾಹಕರಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಸಾವಿರಾರು ಫೋಟೋಗ್ರಾಫರ್ ಗಳಲ್ಲಿ ಕೌಶಲ್ಯತೆ, ನೈಪುಣ್ಯತೆಯಿಂದ ಫೊಟೋ ತೆಗೆಯುವ ಛಾಯಾಗ್ರಾಹಕ ಮಾತ್ರ ಖ್ಯಾತಿಗಳಿಸುತ್ತಾನೆ. ಫೋಟೋ ವಿಶ್ವ ಭಾಷೆ. ವಿಶ್ವದ ಯಾವುದೇ ಭಾಷಿಕನಿಗೂ ಫೋಟೋ ಅರ್ಥವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯ ಹಸನ್ಮಿಯಾ ಅವರು ಮಾತನಾಡಿ ಜೀವನದಲ್ಲಿ ಏನಾನ್ನಾದರೂ ಸಾಧಿಸಲು ಛಲ ಇರಬೇಕು. ವಿನಯ ಶೀಲತೆ, ಗುರು ಹಿರಿಯರಲ್ಲಿ ಗೌರವ ಭಾವನೆ ಇರುವ ವ್ಯಕ್ತಿ ಜೀವನದಲ್ಲಿ ಮುಂದೆ ಬರುತ್ತಾನೆ ಎಂದು ತಿಳಿಸಿದರು.
ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ವಿಶೇಷ ಆಸಕ್ತಿ, ಶ್ರದ್ಧೆಯಿಂದ ಯಾವುದೇ ಹೊಸ ವಿದ್ಯೆಯನ್ನು ಕಲಿಯಲು ಸಾಧ್ಯ. ವಿದ್ಯಾರ್ಥಿಗಳು ನಿಷ್ಠೆ, ಶ್ರಮ, ಶ್ರದ್ಧೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಾದ ರಾಘವೇಂದ್ರ, ಹನುಮೇಶ್, ಅವಿನಾಶ್ ಮಾತನಾಡಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ರಾಜು ಬಿ ಆರ್ ಸ್ವಾಗತಿಸಿದರು. ಉಪನ್ಯಾಸಕ ಸಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಯನ್ನು ಪರಿಚಯಿಸಿದರು. ಮತ್ತೋರ್ವ ಉಪನ್ಯಾಸಕ ಕೆ ಎಸ್ ಗಡಾದ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment