PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ೨೧: ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಅಭಿನಂದನನಾ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಕ್ಷೇತ್ರ ಬಹುದಿನಗಳ ಕನಸಾದ ಬಹಾದ್ದೂರಬಂಡಿ, ಬೆಟಗೇರಿ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸಂಭಂದ ಪಟ್ಟ ಎಲ್ಲಾ ಇಂಜಿನೀಯರ್‌ಗಳನ್ನು ಮುಖ್ಯಮಂತ್ರಿಗಳ ಸಮಕ್ಷಮ ಯೋಜನಾ ಪಟ್ಟಿಯನ್ನು ಸಿದ್ದಪಡಿಸಿ ಅಗತ್ಯವಾದ ಹಣವನ್ನು ಮಂಜೂರು ಮಾಡಿಸಲು ಪ್ರಾಮಾಣಿಕ ಮಾಡುತ್ತೆನೆ. ೪೧ ಸಾವಿರ ಎಕೆರೆಗೆ ಭೂಮಿಗೆ ನೀರು ಒದಗಿಸುವ ಸಿಂಗಟಾಲೂರು ಏತ ನೀರಾವರಿಯ ಕಾಲುವೆ ಕಾಮಗಾರಿಯನ್ನು ಶೀಘ್ರವೆ ಪ್ರಾರಂಭ ಗೊಳಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಜಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸುವರಾಜ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಜುಲ್ಲು ಖಾದ್ರಿ, ಹೆಚ್.ಎಲ್.ಹಿರೇಗೌಡ್ರು, ಶರಣಪ್ಪ ಸಜ್ಜನ, ಗೋಳಪ್ಪ ಹಲಗೇರಿ, ಮರ್ದಾನಪ್ಪ ಬಿಸರಳ್ಳಿ, ಸುರೇಶ ಮಾದನೂರು, ಸಿದ್ದಮ್ಮ ಪೂಜಾರ, ಸಿದ್ದಪ್ಪ ಕಲಾಲ್, ಗೋವಿಂದ ರೆಡ್ಡಿ, ಪ್ರಕಾಶ ಹಾಲವರ್ತಿ, ಶರಣಪ್ಪ ಹಳ್ಳಿಗುಡಿ, ವೀರಣ್ಣ ಸುರೇಂದ್ರ ಗೌಡ, ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಹಾಗೂ ಗುತ್ತಿಗೇದಾರರಾದ ಮಹಾದೇವಪ್ಪ ಪತ್ತಾರ ಉಪಸ್ಥಿತರಿದ್ದರು

Advertisement

0 comments:

Post a Comment

 
Top