ಬ್ಲಾಗ್ ಮತ್ತು ವೆಬ್ ಸೈಟ್ ಗಳ ಕುರಿತು ನಮ್ಮ ಹೈದ್ರಾಬಾದ ಕರ್ನಾಟಕ,ಉತ್ತರ ಕರ್ನಾಟಕದ ಜನತೆಗೆ ಮಾಹಿತಿಯ ಕೊರತೆ ಇದೆ ಎನಿಸಿತ್ತು. ಆದರೆ ಇತ್ತೀಚಿಗೆ ನಡೆದ ಮಾಧ್ಯಮ ಚಿಂತನೆಯಲ್ಲಿ ಭಾಗವಹಿಸಿದ ನಂತರ ಬೆಂಗಳೂರು ಭಾಗದ ಜನತೆಗೂ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎನ್ನುವುದು ತಿಳಿಯಿತು.
ಬ್ಲಾಗ್ ಮತ್ತು ವೆಬ್ ಸೈಟ್ ಗಳ ಬಗ್ಗೆ ಎಷ್ಟೇ ಲೇಖನಗಳು ಪತ್ರಿಕೆಗಳಲ್ಲಿ ಬಂದರೂ ಸಹ ಸರಳವಾಗಿ ಬ್ಲಾಗ್ ಎಂದರೇನು,ಪೋಸ್ಟ್ ಅಂದರೇನು , ಇದನ್ನು ರಚಿಸುವುದು -ಉಪಯೋಗಿಸುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ಜನಸಾಮಾನ್ಯರಿಗೂ ಸಿಗಬೇಕಿದೆ.ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಲ್ಲಿ ಫೇಸ್ ಬುಕ್ ಮತ್ತು ಬ್ಲಾಗ್ ಉಪಯೋಗ ಹೆಚ್ಚಾಗಿದೆ. ಕನ್ನಡದಲ್ಲಿ ಬ್ಲಾಗ್ ಮತ್ತು ಸೈಟ್ ಬಗ್ಗೆ ಮಾಹಿತಿ ನೀಡಬೇಕಿದೆ
0 comments:
Post a Comment