ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ಘೋಷಣೆಯಾಗಿರುವುದರಿಂದ ಚುನಾವಣೆಗೆ ಸಂಬಂಧಿಸಿದ ದೂರುಗಳು ಹಾಗೂ ಅಹವಾಲುಗಳನ್ನು ಸ್ವೀಕರಿಸಲು ದೂರವಾಣಿ ಸಂಖ್ಯೆ: ೦೮೫೩೯-೨೨೫೦೦೨ (ಡಿ.ಡಿ.ಎಲ್.ಆರ್.ಶಾಖೆ) ಸ್ಥಾಪಿಸಲಾಗಿದ್ದು, ಈ ಕಂಟ್ರೋಲ್ ರೂಂ ದಿನದ ೨೪ ತಾಸು ಕಾರ್ಯ ನಿರ್ವಹಿಸಲಿದೆ.
ಕಂಟ್ರೋಲ್ ರೂಂ ನಲ್ಲಿ ದಿನದ ೨೪ ತಾಸು ಕಾರ್ಯ ನಿರ್ವಹಣೆಗಾಗಿ ಸುಮಾರು ೦೯ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಈ ಸಿಬ್ಬಂದಿಗಳು ದಿನಂಪ್ರತಿ ಸರದಿಯಂತೆ ಕಾರ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆ ೦೬ ರಿಂದ ೧೦-೩೦ ಗೆ ಒಂದು ಸರದಿ, ನಂತರ ಬೆ. ೧೦-೩೦ ರಿಂದ ಮ. ೨, ಮ. ೨ ರಿಂದ ಸಂ. ೫-೩೦, ಸಂ. ೫-೩೦ ರಿಂದ ರಾ. ೧೦ ನಂತರ ರಾತ್ರಿ ೧೦ ರಿಂದ ಬೆಳಿಗ್ಗೆ ೬ ಗಂಟೆಯವರೆಗೆ ಸರದಿಯಂತೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಕಂಟ್ರೋಲ್ ರೂಂಗೆ ಸಾರ್ವಜನಿಕರಿಂದ ಬಂದ ದೂರುಗಳನ್ನು, ದೂರು ವಹಿಯಲ್ಲಿ ದಾಖಲಿಸಿ ಸಂಬಂಧಿಸಿದ ತಾಲೂಕಿನ ಚುನಾವಣಾಧಿಕಾರಿಗಳಿಗೆ, ಸೆಕ್ಟರ್ ಆಫೀಸರ್, ಎಂ.ಸಿ.ಸಿ. ಟೀಮ್ ಮುಖ್ಯಸ್ಥರಿಗೆ ಮಾಹಿತಿ ನೀಡುವುದು ಹಾಗೂ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ನಿಯೋಜಿತ ಸಿಬ್ಬಂದಿಗಳು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ತಮಗೆ ನಿಗಧಿಪಡಿಸಿದ ಸಮಯಕ್ಕೆ ಹಾಜರಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ ಅಂತಹವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment