PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ: ಅಕ್ಬರ್‌ನು ಸರ್ವಧರ್ಮಿಯರಲ್ಲಿ ಉತ್ತಮ ಸಂಬಂಧ  ಇಟ್ಟುಕೊಂಡಿದ್ದನು. ಸಕಲ ಜೀವರಾಶಿಗಳ ಒಳಿತಿಗಾಗಿ ದೀನ್ ಇಲಾಹಿ ಸ್ಥಾಪಿಸುವದರ ಮೂಲಕ ಮಾನವ ಕಲ್ಯಾಣ ಮಾಡಿದನು. ಎಂದು ಪ್ರಾಧ್ಯಾಪಕ ಎಂ.ಎಂ. ಕಂಬಾಳಿಮಠ ನುಡಿದರು. ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗಾಗಿ ಆಂತರಿಕ ಗುಣಮಟ್ಟ ಭರವಸೆ ಕೋಶ ವಿಶೇಷ ಉಪನ್ಯಾಸ ಮಾಲಿಕೆಯಡಿಯಲ್ಲಿ  ಮೊದಲನೆಯದಾಗಿ ಅಕ್ಬರನ  ಧರ್ಮ ಸಿದ್ದಾಂತ ಮತ್ತು ದೀನ್ ಇಲಾಹಿ ಎಂಬ ವಿಷಯ ಕುರಿತು ಸಂಪನ್ಮೂಲ ವ್ಯಕ್ತಯಾಗಿ ಮೇಲಿನಂತೆ ಮಾತನಾಡಿದರು. ಅವರು ಮುಂದುವರಿದು ಮಾತನಾಡುತ್ತಾ   ಅಕ್ಬರನು  ದೀನ್ ಇಲಾಹಿ ಧರ್ಮ ಸಿದ್ಧಾಂತದಲ್ಲಿ  ವಿವಿಧ ಧರ್ಮಗಳ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದನು.  ಈ ತತ್ವ ಸಿದ್ಧಾಂತಗಳು ವ್ಯಕ್ತಿತ್ವ ವಿಕಾಸಕ್ಕೆ ಸದಾ ಕಾಲ ಮಾರ್ಗದರ್ಶಕವಾಗಿವೆ. ಸರ್ವ ಧರ್ಮ ಸಹಿಷ್ಣುತಾವಾದಿಯಾಗಿ ಪಾರಮಾರ್ಥಿಕ ಜಗತ್ತನಲ್ಲಿ ಉತ್ತಮ ಯಶಸ್ಸು ಕಂಡನು. ಹತ್ತು ಹಲವು ಧರ್ಮಗಳನ್ನು ಗೌರವಿಸುವದರ ಮೂಲಕ  ಮನುಕುಲದೊಂದಿಗೆ ಉತ್ತಮ ಭಾಂಧವ್ಯ ಹೊಂದಿ ಜಗತ್ತಿನ ಅದ್ವಿತೀಯ ವ್ಯಕ್ತಿಯಾಗಿ ಇತಿಹಾಸದಲ್ಲಿ ಮಿಂಚಿ ಮರೆಯಾದನು ಎಂದರು. ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಶ್ರೀತಿಮ್ಮಾರೆಡ್ಡಿ ಮೇಟಿ ಮಾತನಾಡಿ ಇತಿಹಾಸ ನಮ್ಮ ಬದುಕಿಗೆ ಪ್ರೇರಣೆ ನೀಡುತ್ತದೆ. ಅಕ್ಬರನಂತಹ ಮುತ್ಸದ್ದಿ ರಾಜನ ಕುರಿತು ತಿಳಿದಿಕೊಳ್ಳುವ ಕುತುಹಲ ವಿದ್ಯಾರ್ಥಿಗಳಿಗೆ ಇರಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಾರ್ಥಕವಾಗುತ್ತವೆಎಂದರು. ಎರಡನೇ ಗೋಷ್ಟಿಯಲ್ಲಿ ಯೋಗ ಹಾಗೂ ದೈಹಿಕ ಶಿಕ್ಷಣದ ಮಹತ್ವ ಕುರಿತು ಇರಕಲ್‌ಗಡಾ ಸ.ಪ್ರ.ಕಾಲೇಜಿನ ದೈಹಿಕ ನಿದೇಶಕರಾದ ಶ್ರೀ ಪ್ರದೀಪಕುಮಾರ ಉಪನ್ಯಾಸ ನೀಡುತ್ತಾ  ಈ ಶಿಕ್ಷಣ ಪ್ರತಿ ಮಗುವಿನ ಹುಟ್ಟಿನ ಜೊತೆಗೆ ಬಂದಿರುವಂತಹದ್ದಾಗಿದೆ. ನಂತರದ ದಿನಗಳಲ್ಲಿ ದೈಹಿಕ ಚಟುವಟಿಕೆಗಳ ಕಲಿಕೆಗಾಗಿ ದೈಹಿಕ ಶಿಕ್ಷಣ ರೂಪಿತಗೊಂಡಿದೆ. ಆರೋಗ್ಯ ಪೂರ್ಣ ಮನಸ್ಸಿಗಾಗಿ ಯೋಗದ ಅವಶ್ಯಕತೆ ಇರುವಂತೆ ಸದೃಡ ಶರೀರ ಮತ್ತು ದೇಹ ದಂಡನೆಗಾಗಿ ದೈಹಿಕ ಶಿಕ್ಷಣದ ಅವಶ್ಯಕತೆ ಇದೆ ಎಂದರು. ಅಧ್ಯಕ್ಷತೆಯನ್ನು ವ್ಯವಸ್ಥಾಪಕ ಆದಿಬಾಬು ವಹಿಸಿ ಮಾತನಾಡಿದರು.  ಇದಕ್ಕೂ ಮುನ್ನಾ ಪ್ರ್ರಾಚಾರ್ಯ ಶ್ರೀತಿಮ್ಮಾರೆಡ್ಡಿ ಮೇಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆ ಮೇಲೆ ನ್ಯಾಕ್ ಸಂಚಾಲಕ ಸುರೇಶ ಸೊನ್ನದ, ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ.ಡಿ.ಎಚ್.ನಾಯಕ್, ಪ್ರಾದ್ಯಾಪಕರಾದ ಪ್ರಭುರಾಜ ನಾಯಕ, ದ್ವಾರಕಾಸ್ವಾಮಿ, ಶ್ರೀಮತಿ ನಂದಾ, ಉಪಸ್ಥಿತರಿದ್ದರು. ನಿರೂಪಣೆ ಗಾಯತ್ರಿ ಭಾವಿಕಟ್ಟಿ ನೆರವೇರಿಸಿದರು.

Advertisement

0 comments:

Post a Comment

 
Top