ಯಮನಪ್ಪ ಕಬ್ಬೇರ, ಮಾಜಿ ಜಿಲ್ಲಾ ಪಂಚಾಯತ್ ಉಪಾದ್ಯಕ್ಷರು
ಕೊಪ್ಪಳ : ೧೦ ರಂದು ಪತ್ರಿಕೆಗಳಲ್ಲಿ ಯಮನಪ್ಪ ಕಬ್ಬೇರ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆಂದು ತಪ್ಪು ಸಂದೇಶವನ್ನು ರವಾನಿಸಲಾಗಿತ್ತು. ಕಾಂಗ್ರೆಸ ಪಕ್ಷದಲ್ಲಿರುವ ನಾನು ಯಾವತ್ತು ಪಕ್ಷವನನು ಬಿಟ್ಟಿರುವುದಿಲ್ಲ. ಮೊನ್ನೆ ಈ ಕ್ಷೇತ್ರದ ಶಾಸಕರು ನಮ್ಮ ಮನೆಗೆ ಬಂದಾಗ ಮಾನವೀಯ ದೃಷ್ಠಿಕೋನದಿಂದ ಅವರನ್ನು ನಮ್ಮ ಮನೆಯಲ್ಲಿ ಅಥಿತಿ ಸತ್ಕಾರ ಮಾಡಿದ್ದೆನೆ ವಿನಹ ಬಿಜೆಪಿ ಪಕ್ಷ ಸೆರುವ ಬಗ್ಗೆ ಅಥವಾ ಅದರ ಪ್ರಾತಮಿಕ ಸದಸ್ಯತ್ವ ಪಡೆಯುವ ಬಗ್ಗೆ ನಾನು ಶಾಸಕರ ಜೊತೆಗಾಗಲಿ ಅಥವಾ ಬಿಜೆಪಿ ಜಿಲ್ಲಾ ಅಧ್ಯಕ್ಷರ ಜೊತೆಗಾಗಲಿ ಪ್ರಸ್ತಾಪಿಸಿಲ್ಲ. ದಯಮಾಡಿ ಯಾರು ಇಂತಹ ಸುಳ್ಳು ವದಂತಿಗಳ ಬಗ್ಗೆ ಕಿವಿಗೊಡಬಾಡದು. ನಾನು ಹಳೇ ಕಾಂಗ್ರೆಸಿಗನಾಗಿದ್ದು ಯಾವತ್ತು ಪಕ್ಷದ್ರೋಹ ಚಟುವಟಿಕೆಗಳಲ್ಲಾಗಲಿ ನಾನು ಪಕ್ಷ ಬಿಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಯಮನಪ್ಪ ಕಬ್ಬೇರ ತಿಳಿಸಿದ್ದಾರೆ.
0 comments:
Post a Comment