ಕೊಪ್ಪಳ, ೨೮ : ಕೊಪ್ಪಳ ಜಿಲ್ಲೆಯು ಶೈಕ್ಷಣಿಕವಾಗಿ ಅತ್ಯಂದ ಹಿಂದುಳಿದ ಪ್ರದೇಶವಾಗಿತ್ತು. ಅದನ್ನು ಹೋಗಲಾಡಿಸಲು ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಅಟಲ್ ಬಿಹಾರಿ ವಾಜಪೇಯಿ ಮದಿ ವಸತಿ ಶಾಲೆಗಳನ್ನು ತಂದು ಉನ್ನತ ಶಿಕ್ಷಣವು ನಮ್ಮ ಮನೆಯ ಅಂಗಳದಲ್ಲಿ ದೊರೆಯುವಂತೆ ಮಾಡಿದ ಕೀರ್ತಿ ಸಂಗಣ್ಣ ಕರಡಿ ಇವರಿಗೆ ಸಲ್ಲುತ್ತದೆ. ಅಲ್ಲದೇ ಕ್ಷೇತ್ರದ ಜನತೆಯ ಚಾಕರಿ ಮಾಡುವ ಸಮರ್ಥ ವ್ಯಕ್ತಿಯಾದ ಕರಡಿ ಸಂಗಣ್ಣನವರಿಗೆ ಮತ ಹಾಕುವುದರ ಮೂಲಕ ಬಾಕರಿ ಕೊಡಬೇಕೆಂದು ನಗರಸಭೆಯ ಮಾಜಿ ಅಧ್ಯಕ್ಷರಾದ ಗವಿಸಿದ್ಧಪ್ಪ ಕಂಚಾರಿ ಹೇಳಿದರು.
ಅವರು ದಿ. ೨೮.೦೪.೧೩ ರಂದು ಕಲಕೇರಿ ಗ್ರಾಮದಲ್ಲಿ ಜರುಗಿದ ಸಾರ್ವತ್ರಿಕ ಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತ, ಕ್ಷೇತ್ರದರೈತರಿಗೆ ವರದಾನವಾಗಲಿರುವ ಸಿಂಗಟಾಲೂರು ಏತ ನೀರಾವರಿ, ಕೃಷ್ಣಾ ಬಿ ಸ್ಕೀಂ, ಬಹಾದ್ಧೂರ ಬಂಡಿ ಏತ ನೀರಾವರಿ, ಬೆಟಗೇರಿ ಏತ ನೀರಾವರಿಯಂತಹ ಯೋಜನೆಗಳು ಆರ್ಥಿಕ ಸಬಲತೆಗೆ ನಾಂದಿಯಾಗಿವೆ. ಅಲ್ಲದೇ ದಲಿತರ ಬಾಳು ಬೆಳಗಿಸುವಂತಹ ಗಂಗಾ ಕಲ್ಯಾಣ, ಸಮೂಹಿತ ನೀರಾವರಿಗಳ ಯೋಜನೆಗಳ ಮೂಲಕ ೮೦೦ ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಅಭಿವೃದ್ಧಿ ಪರವಾಗಿರುವ ಬಿ.ಜೆ.ಪಿ. ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಹೇಳಿದರು.
ತಾಲೂಕಾ ಪಂಚಾಯತ್ ಸದಸ್ಯರಾದ ಉಮೇಶ ಚಿಲವಾಡಗಿ ಮಾತನಾಡಿ ಬಿ.ಜೆ.ಪಿ. ಸರಕಾರವು ನಾಯಕ ಸಮುದಾಯದವರಿಗಾಗಿ ೧ ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ, ಪರಿಶಿಷ್ಟ ಪಂಗಡಗಳ ಬಹುತೇಕ ಎಲ್ಲಾ ಕಾಲೊನಿಗಳಲ್ಲಿ ಸಿ.ಸಿ. ರಸ್ತೆ, ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕರಡಿ ಸಂಗಣ್ಣನವರು ಜಾತ್ಯಾತೀತ ನಾಯಕರಾಗಿದ್ದು ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವ ಜಾಣ್ಮೆಯನ್ನು ಹೊಂದಿದ್ದಾರೆಂದು, ಇವರಿಗೇ ಮತ ಹಾಕಿ ಗೆಲ್ಲಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೊಪ್ಪಳ ಭಾರತೀಯ ಜನತಾ ಪಕ್ಷದ ನಿಯೋಜಿತ ಅಭ್ಯರ್ಥಿ ಕರಡಿ ಸಂಗಣ್ಣ, ಪೀರಾಹುಸೇನ ಹೊಸಳ್ಳಿ, ಶಾಮಲಾ ಕೋನಾಪುರ, ಬಾಬಾ ಆರಗಂಜಿ, ಪುಟ್ಟರಾಜ ಬೇವಿನಹಳ್ಳಿ, ದೌಲತ್ ಚಿಕ್ಕಲಗಾರ, ವಿರೂಪಾಕ್ಷಗೌಡ ಕಲಕೇರಿ, ಶಿವಣ್ಣ ಒಂಟೆತ್ತಿನವರ, ಮನ್ನೇಸಾಬ್, ಭರಮಪ್ಪ ಮುದ್ದಾಬಳ್ಳಿ, ಕೀಮಪ್ಪ ಲಮಾಣಿ, ಹೇಮಲತಾ ನಾಯಕ್, ಬೀರಪ್ಪ ಅಂಗಡಿ, ರಾಮಣ್ಣ ವಡ್ಡರ್, ಮತ್ತಿತರರು ಉಪಸ್ಥಿತರಿದ್ದರು.
0 comments:
Post a Comment