ಕೊಪ್ಪಳ. ತಾಲೂಕಿನ ಭಾಗ್ಯನಗರ ಗ್ರಾಮದ ಕೆಎಚ್‌ಡಿಸಿ ಕಾಲೋನಿಯ ಸುಮಾರು ೬೦ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಕೆಎಚ್‌ಡಿಸಿ ಕಾಲೋನಿಯ ಮುಖಂಡರಾದ ಲಿಂಗರಾಜ ಹ್ಯಾಟಿ, ನಗರಸಭೆ ಮಾಜಿ ಸದಸ್ಯ ಮಲ್ಲಪ್ಪ ಮುರಡಿ, ಸಿದ್ದಪ್ಪ ಸಾಲಮನಿ, ಕೊಟ್ರೇಶ ಹುಲ್ಲತ್ತಿ, ಈರಣ್ಣ ಗಣಪ, ಯಂಕಪ್ಪ ಹಳೆಪೇಟೆ, ವೆಂಕಟೇಶ ತಳಕಲ್, ಗವಿಸಿದ್ದಪ್ಪ ತಟ್ಟಿ, ಪುಟ್ಟು ಬಸ್ಮಿ, ಮೌಲಾಸಾಬ ಹಣಗಿ, ಅಮರೇಶ ಹಣಗಿ, ಶರಣಪ್ಪ ಮಗಿಮಾವಿನಹಳ್ಳಿ, ದೇವೇಂದ್ರಸಾ ಭಾವಿಕಟ್ಟಿ ಮತ್ತಿತರರು ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ಬಾಳಪ್ಪ ಬಾರಕೇರ, ರಾಮಣ್ಣ ಹದ್ದಿನ ಮುಖಂಡರಾದ ಗವಿಸಿದ್ದಪ್ಪ ಮುದಗಲ್, ಸುರೇಶ ಮುಂಡರಗಿ, ಯಮನೂರಪ್ಪ ನಾಯಕ್, ಚನ್ನಪ್ಪ ತಟ್ಟಿ, ಗ್ರಾ.ಪಂ.ಅಧ್ಯಕ್ಷ ಹೊನ್ನೂರಸಾಬ ಬೈರಾಪೂರ ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಸಮ್ಮುಖದಲ್ಲಿ ಬಿಜೆಪಿ ನಾಮನಿರ್ದೇಶಿತ ಸದಸ್ಯ ಹೇಮಂತ ತುಪ್ಪದ, ಬಿಸರಹಳ್ಳಿಯ ವಂಕಾರಪ್ಪ ಗಂಡಾಳಿ, ರಾಜಶೇಖರ ಹಿರೇಮಠ ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸುರೇಶ ದೇಸಾ
ಯಿ, ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್, ನಗರಸಭೆ ಸದಸ್ಯರಾದ ಬಾಳಪ್ಪ ಬಾರಕೇರ, ಮುತ್ತುರಾಜ ಕುಷ್ಟಗಿ, ಮಾಜಿ ಸದಸ್ಯ ಕಾಟನ್ ಪಾಷಾ, ಮುಖಂಡರಾದ ಮಹೇಂದ್ರ ಕೊಂಡಿಕೊಪ್ಪಮಠ, ಚಂದ್ರಪ್ಪ ಹುಲ್ಲತ್ತಿ, ಶೇಖಪ್ಪ ಕವಲೂರ, ಜಾಫರ ಸಂಗಟಿ ಮತ್ತಿತರು ಉಪಸ್ಥಿತರಿದ್ದರು.
0 comments:
Post a Comment