PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,ಏ.೨೮: ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ದಿಗಾಗಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಮಾರು ಕೋಟಿ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಆ ಹಣ ಎಲ್ಲಿ ಹೋಯಿತು, ಯಾರ ಜೇಬಿಗೆ ಸೇರಿತು ಎಂಬುವುದೇ ತಿಳಿಯದಂತಾಗಿದೆ. ಆದರೆ ಅಭಿವೃದ್ದಿ ಮಾತ್ರ ಮರೆಚಿಕೆಯಾಗಿದಂತಾಗಿದೆ. ಅದನ್ನು ಈ ಭಾಗದ ಪವಿತ್ರ ಶ್ರೀ ಹುಲಿಗೆಮ್ಮ ದೇವಿಯೇ ನೋಡಿಕೊಳ್ಳಲಿ ಮತ್ತು ಅಂತವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದರ ಮೂಲಕ ತಪ್ಪಿತಸ್ಥರಿಗೆ ಶಿಕ್ಷಿಸಲಿ ಎಂದು ಕೆಜೆಪಿ ಪಕ್ಷದ ಯುವ ನಾಯಕ ವಾಗ್ಮಿ ಮೆಹಬೂಬ್ ಮುಲ್ಲಾ ಹನುಮಸಾಗರ ಅವರು ಹೇಳಿದರು.
ಅವರು ತಾಲೂಕಿನ ಇತಿಹಾಸ ಪ್ರಸಿದ್ಧ ಹುಲಗಿ ಗ್ರಾಮದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರ ಪರ ಏರ್ಪಡಿಸಿದ ಬಹಿರಂಗ ಮತಯಾಚನೆ ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಉಪಚುನಾವಣೆಯ ಮುನ್ನ ಮತ್ತು ನಂತರ ಬಿಡುಗಡೆಗೊಂಡ ಸರಕಾರದ ಅನುದಾನದಲ್ಲಿ ಬಹುತೇಕವಾಗಿ ಸದುಪಯೋಗವಾಗದೇ ದುರುಪಯೋಗವೇ ಜಾಸ್ತಿ ಎಂದು ಆರೋಪಿಸಿದ ಅವರು, ಈಗ ಕೊಪ್ಪಳದಲ್ಲಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಅಧಿಕಾರವಿಲ್ಲದೇ ಜನರ ಸೇವೆ ಮಾಡುತ್ತ ಬಂದಿರುವ ಕೆ.ಎಂ.ಸಯ್ಯದ್‌ರವರಿಗೆ ಈ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಇನ್ನು ಹೆಚ್ಚಿನ ರೀತಿಯಲ್ಲಿ ಜನರ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದ ಅವರು, ವಿಶ್ವ ಮಾನವ ಮಹಾ ಮಾನವತಾವಾದಿ ಬಸವಣ್ಣನವರ ಕನಸು ನನಸಾಗಿಸಲು ಯಡಿಯೂರಪ್ಪನವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆ.ಎಂ.ಸಯ್ಯದ್‌ರವರನ್ನು ಕೊಪ್ಪಳ ಕ್ಷೇತ್ರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಾಮಾಜಿಕ ನ್ಯಾಯ ಡಾ.ಬಿ.ಆರ್.ಅಂಬೇಡ್ಕರರವರ ತತ್ವ ಪಾಲಿಸುವುದರ ಜೊತೆಗೆ ಶ್ರಮಿಸಲು  ಯುವ ಶಕ್ತಿಗೆ ಅಧಿಕಾರ ನೀಡಬೇಕು ಎಂದರು. ನಮ್ಮ ಕೆಜೆಪಿ ಪಕ್ಷದ ಗುರುತು ತೆಂಗಿನಕಾಯಿ ಪೂಜೆಗೆ ಬಹಳ ಶ್ರೇಷ್ಠವಾಗಿದೆ ಮತದಾನವೆಂದರೆ ಅತ್ಯಂತ ಪವಿತ್ರವಾಗಿದ್ದು, ಅದು ಕನ್ಯಾದಾನಕ್ಕೆ ಸಮಾನ ಅದಕ್ಕಾಗಿ ಯೋಚಿಸಿ ಅರ್ಹ ವ್ಯಕ್ತಿಗೆ ಮತ ನೀಡಬೇಕು ಮತದಾನ ಮಾರಾಟಕಲ್ಲ. ಅದನ್ನು ಅರಿತುಕೊಂಡು ಮತದಾನ ಮಾಡಬೇಕು. ಕೊಪ್ಪಳದ ಜನರು ಬುದ್ದಿ ಜೀವಿಗಳು, ಚಾಣಾಕ್ಷತದಿಂದ ಈ ಬಾರಿ ಮತ ನೀಡಿ ಅರ್ಹ ವ್ಯಕ್ತಿಗೆ ಆಯ್ಕೆ ಮಾಡಲು ಮುಂದಾಗಬೇಕೆಂದು ಕೆಜೆಪಿ ಪಕ್ಷದ ಯುವ ನಾಯಕ ವಾಗ್ಮಿ ಮೆಹಬೂಬ್ ಮುಲ್ಲಾ ಹನುಮಸಾಗರ ಹೇಳಿದರು.
ಈ ಸಂದರ್ಭದಲ್ಲಿ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಮಾತನಾಡಿ, ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತಮ್ಮನ್ನು ಬೆಂಬಲಿಸುವಂತೆ ಜನತೆಗೆ ಮನವಿ ಮಾಡಿಕೊಂಡರು. ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಹುರಕಡ್ಲಿ, ಪ್ರಚಾರ ಸಮೀತಿ ಅಧ್ಯಕ್ಷ ನೇಮರಾಜ ಪಾಟೀಲ್, ಮುಖಂಡರಾದ ಈಶ್ವರ ಎನ್., ಶ್ಯಾಮೀದ್‌ಸಾಬ ಕಿಲ್ಲೇದಾರ, ಸಿ.ಎಸ್.ಡಂಬಳ, ಮಾರುತಿ ಮಾಗಳದ, ಮೆಹಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ವದಗನಾಳ, ಬಸವರಾಜ ಬಳ್ಳಾರಿ ಅಳವಂಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. 

Advertisement

0 comments:

Post a Comment

 
Top