PLEASE LOGIN TO KANNADANET.COM FOR REGULAR NEWS-UPDATES


ಬಸಾಪುರ, ೨೦ : ಬಿ.ಜೆ.ಪಿ.ಯ ಅಭ್ಯರ್ಥಿ ಸಂಗಣ್ಣ ಕರಡಿಯವರು ಬಸಾಪುರ ಗ್ರಾಮದಲ್ಲಿ ಮತ ಯಾಚನೆ ಮಾಡಿ, ಈ ಸಲವೂ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ತಮ್ಮ ಅವಧಿಯಲ್ಲಿನ ಜನಪರ ಕಾರ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು, ಮುಂದೆಯೂ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಸಮಗ್ರ ಅಭಿವೃದ್ಧಿಯ ಆದ್ಯತೆ ಪರಿಗಣಿಸಿ ತಮ್ಮ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಬೃಹತ್ ಸಂಖ್ಯೆಯ ಗ್ರಾಮಸ್ಥರು, ಊರಿನ ಹಿರಿಯರು, ಯುವ ಮುಖಂಡರು, ಕಾರ್ಯಕರ್ತರು ಈ ಮತಯಾಚನಾ ಸಮಾರಂಭದಲ್ಲಿ ಭಾಗಿಯಾಗಿ ಧನಾತ್ಮಕ ರೀತಿಯಲ್ಲಿ ಸ್ಪಂದಿಸಿ, ಕರಡಿ ಸಂಗಣ್ಣನವರಿಗೆ ಮತ ಹಾಕುವ ಭರವಸೆ ನೀಡಿದರು ಎಂದು ಪಕ್ಷದ ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.

Advertisement

0 comments:

Post a Comment

 
Top