ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆ
ಅವರನ್ನು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಮಾಜಿ ಸಚಿವ ವಿರುಪಾಕ್ಷಪ್ಪ
ಅಗಡಿ, ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್, ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ ಅತ್ಯಂತ ಆತ್ಮೀಯವಾಗಿ ಸ್ವಾಗಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ನಿಲಕಂಠಯ್ಯ ಹಿರೇಮಠ ತಮ್ಮ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆ
ಕೊಪ್ಪಳ,ಏ,೧೮: ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನೀಲಕಂಠಯ್ಯ ಹಿರೇಮಠ ತಮ್ಮ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಅವರನ್ನು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್, ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ ಅತ್ಯಂತ ಆತ್ಮೀಯವಾಗಿ ಸ್ವಾಗಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಭಾಗ್ಯನಗರ: ಜೆಡಿಎಸ್ ಸೇರ್ಪಡೆ
ಕೊಪ್ಪಳ, ಏ.೧೮: ಸಮೀಪದ ಭಾಗ್ಯನಗರ ಗ್ರಾಮದ ಶಾಂತಾಬಾಯಿಯವರ ನಿವಾಸದಲ್ಲಿ ನಡೆದ ಸೌಹಾರ್ದಯುತ ಭೇಟಿ ವೇಳೆ ಶಾಂತಾಬಾಯಿ ಹಾಗೂ ತಮ್ಮ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ನೂರಾರು ಮಹಿಳೆಯರೊಂದಿಗೆ ಬುಧವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಇದೇ ವೇಳೆ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ನೆರೆದ ಮಹಿಳೆಯರನ್ನುದ್ದೇಶಿಸಿ ಮಾತನಾಡಿ, ಪಕ್ಷಕ್ಕೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಬಂದು ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ಮತ್ತಷ್ಟು ಆನೆ ಬಂದಂತಾಗುತ್ತಿದೆ. ಮಾಜಿ ಪ್ರಧಾನಿ ಪ್ರಧಾನಿ ಹೆಚ್.ಡಿ. ದೇವಗೌಡರ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜ್ಯಕ್ಕೆ ನೀಡಿರುವ ಜನಪರ ಕಾರ್ಯಗಳಿಗೆ ಮೆಚ್ಚಿ ಜನತೆ ಪಕ್ಷಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ ಎಂದು ತಿಳಿಸಿದ ಅವರು, ಮುಂದೆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕೆಳವರ್ಗದ ಜನತೆಯನ್ನು ಮೇಲೆತ್ತುವ ಅನೇಕ ಜನಪರ ಯೋಜನೆಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದ್ದು ಅದರಂತೆ ಅವುಗಳನ್ನು ಜಾರಿಗೊಳಿಸಲಿದೆ ಎಂದು ಅವರಿಲ್ಲಿ ತಿಳಿಸಿದರು.
0 comments:
Post a Comment