PLEASE LOGIN TO KANNADANET.COM FOR REGULAR NEWS-UPDATES


ಕಾತರಕಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಪ್ರಯುಕ್ತ ಯುಗಾದಿ ಹಬ್ಬದ ಪಾಢ್ಯದ ದಿನ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಗ್ರಾಮದ ರೈತರು ಗ್ರಾಮದ ಸುತ್ತೆಲ್ಲ ಹಾಲು ಎರೆದರು.
ಶ್ರೀ ಮಾರುತೇಶ್ವರ ಜಾತ್ರೆ ಮತ್ತು ಅವಿನಾಳೇಶ್ವರ ಓಕಳಿ
ಕೊಪ್ಪಳ: ದಿನಾಂಕ ೧೫-೦೪-೨೦೧೩ ರಿಂದ ಮೂರು ದಿನಗಳಕಾಲ ತಾಲೂಕಿನ ಕಾತರಕಿ ಗ್ರಾಮದಲ್ಲಿ  ಶ್ರೀ  ಮಾರುತೇಶ್ವರ ಜಾತ್ರೆ ಮತ್ತು ಅವಿನಾಳೇಶ್ವರ ಓಕಳಿ ಜರುಗುವದು. ದಿನಾಂಕ ೧೫-೦೪-೨೦೧೩ ಸೂಮವಾರದಂದು ಅವಿನಾಳೇಶ್ವರ ಓಕಳಿ, ಸಾಯಂಕಾಲ ಬ್ಯಾಟಿ ಗಿಡ (ಮುಳ್ಳಿನ ಗಿಡದ ಮೆಲೆ ಹಾರುವುದು) ರಾತ್ರಿ ೮:೩೦ ಕ್ಕೆ ಲಘು ರಥೋತ್ಸವ ಜರುಗುವದು. ೧೬-೦೪-೨೦೧೩ ಮಂಗಳವಾರ ಬೆಳಗ್ಗೆ ೬ ಗಂಟೆಯಿಂದ ಶ್ರೀ ಮಾರುತೇಶ್ವರನಿಗೆ ರುದ್ರಾಭಿಷೇಕ ನೆರವೇರುವುದು. ಸಾಯಂಕಾಲ ೫:೩೦ ಕ್ಕೆ ರಥೋತ್ಸವವು ಡೊಳ್ಳು, ಬಾಜಾ ಭಜೆಂತ್ರಿಯೊಂದಿಗೆ ವಿಜ್ರಂಬಣೆಯಿಂದ ಜರುಗುವದು. ಅದೇ ರಾತ್ರಿ ೧೦:೦೦ ಗಂಟೆಗೆ ಶ್ರೀ ಕಾಳಮ್ಮ ದೇವಿ ನಾಟ್ಯ ಸಂಘದವರಿಂದ 'ಊರಿಗೆ ಕಾಲಿಟ್ಟ ಹುಲಿ' ಅರ್ಥಾತ ಸೇಡು ಸಾದಿಸಿದ ಸಿಂಹ ಜೋಡಿ ಎಂಬ ಕ್ರಾಂತಿಕಾರಿ ನಾಟಕ ಆಯೋಜಿಸಲಾಗಿದೆ. ಬುಧವಾರ ೧೭-೦೪-೨೦೧೩ ರಂದು ಬೆಳಗ್ಗೆ ೧೦:೦೦ ರಿಂದ ಹೊಂಡಕ್ಕೆ ನೀರು ಹೊರುವುದು, ೧೨ ಗಂಟೆಯಿಂದ ಶ್ರೀ ಮಾರುತೇಶ್ವರ ಬ್ಯಾಟಿ ಗಿಡ, ಸಾಯಂಕಾಲ ೪ ಗಂಟಯಿಂದ ಮುಳ್ಳು ಪಲ್ಲಕ್ಕಿ ಉತ್ಸವ, ಅಗ್ನಿ ಕೊಂಡ, ನೀರು ಕೊಂಡ, ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಮತ್ತು ರಾತ್ರಿ ೯:೩೦ ಗಂಟೆಗೆ ಶ್ರೀ ದುರ್ಗಾ ದೇವಿ ಬೈಲಾಟ ಸಂಘದವರಿಂದ 'ಕಡ್ಲಿ ಮಟ್ಟಿ ಸ್ಟೇಶನ್ ಮಾಸ್ಟರ್' ಅರ್ಥಾತ ಶೀಲಕ್ಕಾಗಿ ಶಿಶು ಹತ್ಯೆ ಎಂಬ ಮೂಡಲಪಾಯ ಭಯಲಾಟ ಪ್ರದರ್ಶಿಸಲಾಗುವದು.

Advertisement

0 comments:

Post a Comment

 
Top