ಕೊಪ್ಪಳ,ಏ.೧೫: ಬಿಜೆಪಿ ದುರಾಢಳಿತ ಹಾಗೂ ದುರ್ವರ್ತನೆಯಿಂದ ಬೇಸತ್ತ ಕಾಸನಕಂಡಿ ಗ್ರಾಮದ ಮಾಜಿ ಜಿ.ಪಂ. ಸದಸ್ಯರಾದ ಹೆಚ್. ಮೋತಿಲಾಲ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ರವಿವಾರ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಹೆಚ್. ಮೋತಿಲಾಲ್ ಮಾತನಾಡಿ, ಬಿಜೆಪಿಯ ರಾಜ್ಯ ರಾಜಕಾರಣ ತುಂಬಾ ಹದಗೆಟ್ಟಿದ್ದು ಅಲ್ಲದೇ ಕ್ಷೇತ್ರದ ರಾಜಕಾರಣವು ಅದಕ್ಕೆ ಹೊರತಾಗಿಲ್ಲ, ಪಕ್ಷ ಅಸ್ತವ್ಯಸ್ತತೆಯಿಂದ ಬೇಸರ ತಂದಿದ್ದು ಇದರಿಂದ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿರುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿರುಪಾಕ್ಷಪ್ಪ ಅಗಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ತಾಲೂಕಾಧ್ಯಕ್ಷ ಅಂದಪ್ಪ ಮರೆಬಾಳ, ಜಿಲ್ಲಾ ಯುವ ಘಟಕದ ಆಧ್ಯಕ್ಷ ಹೆಚ್. ರಮೇಶ ಓಣಬಳ್ಳಾರಿ, ಜಿಲ್ಲಾ ಎಸ್.ಟಿ. ಘಟಕದ ಅಧ್ಯಕ್ಷ ಮಲ್ಲಪ್ಪ ಫ.ಬೇಲೇರಿ, ಹಿರಿಯ ಮುಖಂಡ ವಿರೇಶ ಮಹಾಂತಯ್ಯನಮಠ, ಕೋಟ್ರಪ್ಪ ಕೊರ್ಲಳ್ಳಿ ಸೇರಿದಂತೆ ಅನೇಕ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
0 comments:
Post a Comment