ದಿನಾಂಕ: ೨೯-೦೪-೨೦೧೩ರಂದು ನಗರದ ಗಾಂಧಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿದ ಜಾರ್ಖಂಡನ ಬಗೋದರ್ ಕ್ಷೇತ್ರದ ಶಾಸಕ ಕಾ|| ವಿನೋದ್ ಸಿಂಗ್ ಸಿಪಿಐಎಂಎಲ್ ಪಕ್ಷದ ಅಭ್ಯರ್ಥಿ ಜೆ. ಭಾರದ್ವಾಜ್‌ರ ಪರ ಪ್ರಚಾರ ಮಾಡಿದರು ಎಂದು ಪ್ರಕಟಣೆಯಲ್ಲಿ ಟಿ.ರಾಘವೇಂದ್ರ ಕ್ರಾಂತಿಕಾರಿ ಯುವಜನ ಸಂಘದ ಜಿಲ್ಲಾ ಸಂಚಾಲಕ ತಿಳಿಸಿದ್ದಾರೆ.
ಸಿಪಿಐಎಂಎಲ್ ಪಕ್ಷದ ಶ್ರಮಿಕ ವರ್ಗ, ಕಾರ್ಮಿಕ ವಗದ ಪರವಾಗಿ ನಿಂತಿರುವ ಪಕ್ಷವಾಗಿದ್ದರಿಂದ ಕಾರ್ಮಿಕ ಬಂದುಗಳು ಮತ ಹಾಕಿ ಭಾರದ್ವಾಜ್‌ರನ್ನು ಆರ್ಶೀವದಿಸಬೇಕೆಂಬುದು ಅವರ ಮಾತಾಗಿತ್ತು. ಶ್ರಮಿಕ ವರ್ಗದವರು ಶಾಸಕ ಕಾ|| ವಿನೋದ್ ಸಿಂಗ್‌ರ ಮಾತುಗಳಿಗೆ ಮನ್ನಣೆ ನೀಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಏಕೈಕ ಕಾರ್ಮಿಕ ಧ್ವನಿಯಾಗಿ ರುವ ಜೆ. ಭಾರದ್ವಾಜ್‌ರ "ಮೇಣದ ಬತ್ತಿ" ಗುರುತಿಗೆ ಮತ ಯಂತ್ರದ ಗುಂಡಿಯನ್ನು ಒತ್ತುವ ಮೂಲಕ ಈ ಭಾರಿ ಗಂಗಾವತಿ ಕ್ಷೇತ್ರದಲ್ಲಿ ಬದಲಾವಣೆಯ ಕಾಲ ಬಂದಿದೆ ಎನ್ನುವುದನ್ನು ತೋರಿಸುತ್ತೇವೆ ಎಂದು ಎಲ್ಲಾ ಕಾರ್ಮಿಕ ವರ್ಗದವರು ಒಮ್ಮತದ ಅಭಿಪ್ರಾಯಕ್ಕೆ ಬಂದರು.
0 comments:
Post a Comment