ಜಿಲ್ಲಾ ಮಹಿಳಾ ಕದಳಿ ವೇದಿಕೆಯಿಂದ
ಕೊಪ್ಪಳದ ಗಾಂಧಿನಗರದ ಸಮುದಾಯ ಭವನದಲ್ಲಿ ಜಿಲ್ಲಾ ಮಹಿಳಾ ಕದಳಿ ವೇದಿಕೆಯಿಂದ ಬಸವಜಯಂತಿ ಶತಮಾನೋತ್ಸವ ಹಾಗೂ ಮಹಿಳಾ ದಿನಾಚರಣೆ ನಿಮಿತ್ಯವಾಗಿ ಶರಣರ ಸಂಸ್ಕೃತಿ ಹಾಗೂ ಮಹಿಳಾ ಸ್ವಾಭಿಮಾನ ಬದುಕಿನ ಬಗ್ಗೆ ಉಪನ್ಯಾಸ ಮತ್ತು ಶರಣ ಕ್ಷೇತ್ರದರ್ಶನದ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಸಮಾರಂಭದ ಉದ್ಘಾಟನೆಯನ್ನು ಕೊಪ್ಪಳದ ಶಾಸಕರಾದ ಸಂಗಣ್ಣ ಕರಡಿ ಉದ್ಘಾಟಿಸಿದರು ಉಪನ್ಯಾಸಕರಾಗಿ ಶ್ರೀಮತಿ ಗೌರಮ್ಮ ದೇಸಾಯಿ ನ್ಯಾಯವಾದಿಗಳು ಆಗಮಿಸಿದ್ದರು ಈ ಸಂದರ್ಭದಲ್ಲಿ ಸಂಧ್ಯಾ ಮಾದಿನೂರು,ಡಾ||ಕವಿತಾ ಶ್ರೀನಿವಾಸ ಜನ್ನುಬಾಯಿ ನಾಮದೇವ ಮಾತನಾಡಿದರು.
ಶ್ರೀಮತಿ ಸ್ನೇಹಲತಾ ಜೋಷಿ ಅವರಿಗೆ ಕಿತ್ತೂರ ಚನ್ನಮ್ಮ ಪ್ರಶಸ್ತಿ ಬಂದದ್ದಕ್ಕಾಗಿ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು, ಶಾಸಕರಾದ ಸಂಗಣ್ಣ ಕರಡಿ ಅವರನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ಶ್ರೀಮತಿ ನಿರ್ಮಲಾ ಬಳ್ಳೂಳ್ಳಿ ವಹಿಸಿದ್ದರು ಕಾರ್ಯಕ್ರಮವನ್ನು ಶ್ರೀಮತಿ ಅರುಣಾ ನರೇಂದ್ರ ಪ್ರಧಾನಕಾರ್ಯದರ್ಶಿಗಳು ಕದಳಿವೇದಿಕೆ ಇವರು ನಿರೂಪಿಸಿದರು ಪ್ರಾರ್ಥನೆಯನ್ನು ಅಂಬಿಕಾ ಮತ್ತು ರೇಖಾ ಹಾಡಿದರು ಸ್ವಾಗತ ಮತ್ತು ಪ್ರಾಸ್ತವಿಕವಾಗಿ ಹೇಮಲತಾ ಮಾತನಾಡಿದರು.ಈ ಸಂದರ್ಭದಲ್ಲಿ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎಸ್ ಪಾಟೀಲ್ ಹಾಗೂ ಡಾ|| ವಿ.ಬಿ.ರಡ್ಡೇರ್ ಡಾ||ಸಿದ್ದಲಿಂಗಯ್ಯ ಕೋಟ್ನೆಕಲ್,ಜಿ.ಎಸ್ ಗೋನಾಳ,ಅನಿಕೇತ ಅಗಡಿ,ಸರ್ವಮಂಗಳಾ ಪಾಟೀಲ್ ಗಾಳೆಪ್ಪ ಪಾಚಾಂಗಿ ಹಾಗೂ ಗಾಂಧಿನಗರದ ಹಿರಿಯರು ಭಾಗವಹಿಸಿದ್ದರು ನಂತರ ಶರಣ ಕ್ಷೇತ್ರಗಳ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು ಶ್ರೀಮತಿ ಅರುಣಾ ನರೇಂದ್ರ ತಿಳಿಸಿದ್ದಾರೆ...
0 comments:
Post a Comment