ಹಾಗೂ ನೂತನ ನಗರಸಭಾ ಸದಸ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ
ಕೊಪ್ಪಳ :- ನಗರದ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ದಿನಾಂಕ ೨೨-೦೩-೨೦೧೩ ಶಕ್ರವಾರದಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಹಾಗೂ ನೂತನ ನಗರಸಭಾ ಸದಸ್ಯರಿಗೆ ಸನ್ಮಾನ ಸಮಾರಂಭ ನೆರವೆರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಂತಹ ಸೋಮಪ್ಪ ಗಜ್ಜಿ ಪಿ.ಎಲ್.ಡಿ. ಬ್ಯಾಂಕ ಸದಸ್ಯರು ಕೊಪ್ಪಳ ಇವರು ಸೋಲು ಗೆಲವು ಸಾಮನ್ಯವಾದುದು ಸೋಲನ್ನು ಮೆಟ್ಟಿ ನಿಂತು ಮುನ್ನಡೆದರೆ ಮಾತ್ರ ನೀವು ಗೆಲವು ಸಾಧಿಸಲಿಕ್ಕೆ ಸಾಧ್ಯ ವ್ಯಕ್ತಿಯ ಯಾವುದೇ ಸಂಪತ್ತಿನಿಂದ ಪರಿಪೂರ್ಣಗೊಳ್ಳುವುದಿಲ್ಲ ಆವ್ಯಕ್ತಿಯ ಸ್ವಭಾವದಲ್ಲಿ ಪರಿಪೂರ್ಣತೆ ಅಡಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಕಾರ್ಯಕ್ರಮದ ಮುಖ್ಯ ಅತಿಥಿ ಮಹೇಂದ್ರಕುಮಾರ ಎಮ್ ಚೋಪ್ರಾ ನೂತನ ನಗರಸಭಾ ಸದಸ್ಯರ ಕೊಪ್ಪಳ ಇವರು ಯಾರು ಕದಿಯಲಾರದ ಸಂಪತ್ತು ವಿದ್ಯೆಯಾಗಿದೆ ಆದ್ದರಿಂದ ಗುರುಗಳ ಮೇಲೆ ಭಕ್ತಿಯಿಟ್ಟು ಬುದ್ದಿಯ ಮೇಲೆ ಹಿಡಿತ ಸಾಧಿಸಿ ಶ್ರದ್ದೆಯಿಂದ ವಿದ್ಯೆಯನ್ನು ಸಂಪಾದಿಸಿಕೊಳ್ಳಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅಥೀತಿ ಎಸ್. ಅಮ್ಚದ್ ಪಟೇಲ ನೂತನ ನಗರಸಭಾ ಸದಸ್ಯರು ಕೊಪಪ್ಳ ಇವರು ವಿದ್ಯಾರ್ಥಿಗಳ ಶ್ರಯೋಭಿವೃದ್ದಿಗಾಗಿ ಸಂಸ್ಥೆಯವರು ಹಗಲಿರುಳು ಶ್ರಮಿಸುತ್ತಿದ್ದಾರೆ ಪ್ರತಿಯೊಂದು ಮಗುವಿಗೂ. ಇಷ್ಟೊಂದು ವ್ಯಯಕ್ತಿಯ ಕಾಳಜಿವಹಿಸುತ್ತಿರುವುದರಿಂದ ಇತಹ ಸಂಸ್ಥೆಯನ್ನು ಇನ್ನೊವರೆಗೂ ನಾನು ನೋಡಿಲ್ಲ ಸಂಸ್ಥೆಯದ ಪರಿಶ್ರಮಕ್ಕೆ ಫಲ ದೊರೆಯಬೇಕಾದರೆ ಈ ಸಂಸ್ಥೆಯ ಕೀರ್ತಿಯನ್ನು ಈ ದೇಶದಲ್ಲಿ ಪ್ರಥಮ ಸ್ಥಾನದಲ್ಲಿ ಮಿಂಚಿಸಿಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಿದರು. ಇನ್ನೋರ್ವ ಮುಖ್ಯ ಅತಿಥಿ ಖಾಜಾವಲಿ ಬನ್ನಿಕೊಪ್ಪ ನೂತನ ನಗರಸಭಾ ಸದಸ್ಯರು ಕೊಪ್ಪಳ ಇವರು ಕಷ್ಟಪಟ್ಟು ಒಳ್ಳೆಯ ಸ್ಥಾನಮಾನ ಸಂಪತ್ತು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವಾಗಲೂ ಫಲದಿಂದ ಪರಿಶ್ರಮದಿಂದ ಪರಿಶ್ರಮದ ಪ್ರಯತ್ನದಲ್ಲಿ ಮುನ್ನುಗಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕ ಮರೇಗೌಡ್ರ ಶಿಕ್ಷಕರು ಸರಕಾರಿ ಪ್ರೌಢಶಾಲೆ ಕೊಳೂರು ಇವರು ಭಾವನೆಗಳ ಮುಂದೆ ಭಾಷೆ ಮೌನವಾಗುತ್ತದೆ. ಈ ಒಂದು ಶಾಲೆಯೂ ಚಿಕ್ಕದಾದ ಚೊಕ್ಕದಾದ ಕುಟುಂಬದಂತೆ ಗೀಜುಗನ ಗೂಡಿನಂತೆ ಜೇನುಗುಡಿನಂತೆ ಇದೆ. ಜ್ಞಾನ ಜೇನಿನಂತೆ ನಿಂತ ನೀರು ಕೊಳೆಯುತ್ತದೆ. ಅದರಂತೆ ನಿಮ್ಮ ಜ್ಞಾನ ಕಲಿಕೆಯಾಗಬಾರದು ಎಂದಿದೆಗೂ ಅಳಸಲಾರದ ಅನ್ನ ಜ್ಞಾನವಾಗಿದೆ. ಅಂದ ಆನಂದವನ್ನು ನೀಡುತ್ತದೆ. ಒಳ್ಳೆಯ ಜ್ಞಾನ ಮಹತ್ವರನ್ನಾಗಿ ಮಾಡುತ್ತದೆ. ಅಂತಹ ಜ್ಞಾನವನ್ನು ಬೆಳಸಿಕೊಂಡು ಒಳ್ಳೆಯ ಮಾನವರಾಗಿ ಬಾಳರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ವಿಶೆಷ ಉಪನ್ಯಾಸಕ ಬಿ.ಎಂ ಸವದತ್ತಿ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹೊರತಟ್ನಾಳ ಇವರು ಮನಸ್ಸು ಎಂಬ ವಲದಲ್ಲಿ ವಿದ್ಯೆಯೆಂಬ ಬಿಜ ಭಿತ್ತುವಾಗ ಕಳೆಬರುತ್ತಲೆ ಇರುತ್ತದೆ. ಅದನ್ನು ಕಿತ್ತು ಹಾಕಿ ಫಲಿತಾಂಶ ವೆಂಬ ಉತ್ತಮವಾದಬೆಳೆ ತೆಗೆದುಕೊಳ್ಳಬೇಕು. ಪ್ರಪಂಚ ಒಂದು ಕನ್ನಡಯಿದ್ದಂತೆ ಯಾರು ಹೇಗಿರುತ್ತಾರೆ. ಆಗೆಯೇ ಕಾನಿಸುತ್ತಾರೆ ಉತ್ಸಾಹದಿಂದ ಕೆಲಸ ಮಾಡಿದರೆ ಒಳ್ಳೆಯ ಗುರಿ ಮುಟ್ಟಲಿಕ್ಕೆ ಸಾಧ್ಯ ಎಂದು ವಿದ್ಯಾರ್ತಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಹೆಚ್.ಅತ್ತನೂರು ಅವರು ಸಾಧಿಸುವಲ ಫಲ ಗೆಲ್ಲುವ ಹಂಬಲ ಜೊತೆಗೆ ಪ್ರಯತ್ನ ಪ್ರರಿಶ್ರಮದ ಛಲವಿದ್ದರೆ ಎನುಬೇಕಾದರು ಸಾಧಿಸಬಹುದು ಆದ್ದರಿಂದ ಗೆಲ್ಲುವ ಛಲ ನಿಮ್ಮದಾಗಲಿ ಆಕಸ್ಮಿಕ ಅನಿವಾರ್‍ಯದ ನಡುವೆ ನಿಮ್ಮ ಬಿಳ್ಕೊಡಿಗೆ ಅನಿವಾರ್ಯವಾಗಿದೆ. ನಿವು ಸಮಯವನ್ನು ಹಾಳು ಮಾಡಿದರೆ ಸಮಯವು ನಿಮ್ಮನ್ನು ಹಾಳು ಮಾಡುತ್ತದೆ. ನಿಮ್ಮೆಲರ ಕನಸು ನನಸಾಗಲಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿಜಯ ಸಿದ್ದಲಿಂಗಯ್ಯ ಹಿರೇಮಠ ನೂತನ ನಗರಸಭಾ ಸದಸ್ಯರು ಕೊಪ್ಪಳ ಇವರು ಕಾರ್ಯಕ್ರಮದ ಮೊದಲಿಗೆ ವಿದ್ಯಾದೆವತೆಯಾದಂತಹ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರು ಶಿಷ್ಯರ ಸಂಭದ ಅಗಾಧವಾದುದ್ದು ಆ ಒಂದು ಸನ್ನಿವೇಶವನ್ನು ನಾನು ಇಲ್ಲಿ ಕಂಡುಕೊಂಡೆ ನೀರಿನ ಹತ್ತಿರ ಕುದರೆಯನ್ನು ಕರೆದುಕೊಂಡು ಹೋಹಬಹುದು ನೀರನ್ನು ಕುಡಿಯುವ ಕೆಲಸ ಕುದರಿಯದಾಗಿದೆ. ಹಾಗೆಯೇ ಶಿಕ್ಷಕರು ನೀರನ್ನು ತೋರಿಸುವ ಕೆಲಸ ನಿರ್ವಹಿತ್ತುತ್ತಾರೆ. ಆದರೆ ನೀರು ಕುಡಿಯುವ ಜವಾಬ್ಧಾರಿ ವಿಧ್ಯಾರ್ಥಿಗಳದ್ದಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬಿಳ್ಕೊಡಿಗೆ ಸಮಾರಂಭದಲ್ಲಿ ಕೊಪ್ಪಳ ನೂತನ ನಗರ ಸಭಾ ಸದಸ್ಯ ಮಲ್ಲಪ್ಪ ವೀರಪ್ಪ ಕವಲೂರು ಎಸ್.ಅಮ್ಜಾದ ಪಟೇಲ ಪಹೇಂದ್ರ ಕುಮಾರ ಎಮ್. ಚೋಪ್ರಾ, ಶರಣಪ್ಪ, ವೀಠಪ್ಪ ಚಂದನಕಟ್ಟಿ, ಖಾಜಾವಲಿ ಬನ್ನಿಕೊಪ್ಪ, ಶ್ರೀಮತಿ ವಿಜಯ ಸಿದ್ದಲಿಂಗಯ್ಯ ಹಿರೇಮಠ, ಪಾರಮ್ಮ ವೀರನಗೌಡ ನೂತನ ನಗರಸಭಾ ಸದಸ್ಯರನ್ನು ಸನ್ಮಾನಿಸಲಾಯಿತು. ಶಾಲೆಯ ಮುಖ್ಯೋಪಾಧ್ಯರಾದ ಶ್ರೀಮತಿ ರೇಣುಕಾ ಅತ್ತನೂರ ಶಾಲಾ ಶಿಕ್ಷಕ ವೃಂದ ಮಕ್ಕಳು, ಪಾಲಕರು ಉಪಸ್ಥಿತರಿದ್ದರು. ಮಾರುತಿ.ಕೆ.ಹೆಚ್ ನಿರೂಪಿಸದರು ಆಶಾ ದೊಡ್ಡಮನಿ ಸ್ವಾಗತಿಸಿದರು ಸತಿದೇವಿ ದೊಡ್ಡಮನಿಯವರು ವಂಧಿಸಿದರು.
0 comments:
Post a Comment