PLEASE LOGIN TO KANNADANET.COM FOR REGULAR NEWS-UPDATES


 ಪ್ರಸ್ತುತವಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇದ್ದು, ಉಳಿದ ಹಿಂಗಾರು ಹಂಗಾಮಿಗೆ ಇನ್ನೂ ಹೆಚ್ಚಿನ ನೀರಿನ ಕೊರತೆ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಈಗಿನ ಪರಸ್ಥಿತಿಯು ಇನ್ನೂ ಗಂಭಿರವಾಗಿದ್ದು, ಮುಂದಿನ ದಿನಗಳಲ್ಲಿ ವಿತರಣಾ ಕಾಲುವೆಗಳ ಹತ್ತಿರ ರೈತರು ಗುಂಪು ಗುಂಪಾಗಿ ಬಂದು ವಿತರಣಾ ಕಾಲುವೆಯ ಗೇಟುಗಳನ್ನು ಮನಬಂದಂತೆ ಎತ್ತಿ ನೀರನ್ನು ಹರಿಸಿಕೊಳ್ಳುವ ಹಾಗೂ ವಿತರಣಾ ಕಾಲುವೆ ತೂಬುಗಳಿಗೆ ಹಾನಿಯುಂಟು ಮಾಡುವ ಸಂಭವಿದ್ದು, ಈ ಹಿನ್ನಲೆಯಲ್ಲಿ ತುಂಗಭದ್ರ ಎಡದಂಡೆ ಮುಖ್ಯಕಾಲುವೆ ಕಿ.ಮೀ. ೦.೦೦ ರಿಂದ ೬೯.೦೦ ರವರೆಗೆ ಭಾರತೀಯ ದಂಡ ಪ್ರಕ್ರೀಯೆ ಸಂಹಿತೆ ೧೯೮೩ ರ ಕಲಂ ೧೪೪ ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
ಈ ನಿಟ್ಟಿನಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಇಲಾಖೆಯ ಸಿಬ್ಬಂದಿಯವರಿಗೆ ರಕ್ಷಣೆ ನೀಡಲು ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಕಿ.ಮೀ.೦.೦೦ ರಿಂದ ೬೯.೦೦ ರವರೆಗಿನ ಮುಖ್ಯ ಕಾಲುವೆಯ ಎಡ ಮತ್ತು ಬಲ ದಡಗಳಿಂದ ೧೦೦.೦೦ ಮೀ.ಅಂತರದ ವ್ಯಾಪ್ತಿಯಲ್ಲಿ ಮಾ. ೧೮ ರಿಂದ ೩೧ ರವರೆಗೆ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.  ಅಲ್ಲದೆ ಮೈಲ್ ೨೪ ದಾಸನಾಳ ಗ್ರಾಮದ ಹತ್ತಿರ ಮತ್ತು ಮೈಲ್ ೩೬ ಎಸ್ಕೇಪ್ ಡಂಕನಕಲ್ ಗ್ರಾಮದ ಹತ್ತಿರ  ಒಂದೊಂದು ಕೆ.ಎಸ್.ಆರ್.ಪಿ. ತುಕಡಿಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ.
ವಿತರಣಾ ಕಾಲುವೆ ಹಾಗೂ ಎಸ್ಕೇಪ್‌ಗಳಿಗೆ ಹಗಲು, ರಾತ್ರಿ ಪಾಳಿಯ ಪ್ರಕಾರ ದಿನದ ೨೪ ಗಂಟೆ ಪ್ರತಿ ಗೇಟ್‌ಗೆ ತಲಾ ಇಬ್ಬರಂತೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ನಿಷೇಧಾಜ್ಞೆ ಅನ್ವಯ ತುಂಗಭದ್ರಾ ಮುಖ್ಯ ಕಾಲುವೆ ದಡದಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಎರಡು ಅಥವಾ ಮೂರು ಜನಕ್ಕಿಂತ ಹೆಚ್ಚಾಗಿ ಓಡಾಡುವುದು, ತುಂಗಭದ್ರಾ ಮುಖ್ಯ ಕಾಲುವೆ ದಡದ ಪ್ರದೇಶದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

Advertisement

0 comments:

Post a Comment

 
Top