PLEASE LOGIN TO KANNADANET.COM FOR REGULAR NEWS-UPDATES





ಕೊಪ್ಪಳ : ಕಿನ್ನಾಳದಲ್ಲಿ  ಸೇವಾ ವಿದ್ಯಾಲಯದ ನೂತನ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್‍ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ವೆಂಕಟರಾವ್ ದೇಸಾಯಿಯವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಇಂಗ್ಲೀಷ್ ಸಂಸ್ಕೃತಿ ಬೇಡ ಬೇಕಾಗಿರುವುದು ಇಂಗ್ಲೀಷ್ ಭಾಷೆ ಮಾತ್ರ. ಇದರಿಂದ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬದುಕಲು ಸಾಧ್ಯ. ನಿರಂತರ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು. 
ಅಡಿಗಲ್ಲು ಸಮಾರಂಭದ ಶಿಲಾನ್ಯಾಸವನ್ನು ಗವಿಸಿದ್ದೇಶ್ವರ ಮಹಾಸ್ವಾಮಿಗಳು ನೆರವೇರಿಸಿ " ಸಂಸ್ಥೆಯ ಅಧ್ಯಕ್ಷರಾದ ರಾಜಾಬಕ್ಷಿ ಎಚ್.ವಿಯವರ ಸಾಹಸ ಮೆಚ್ಚುವಂಥಹದ್ದು. ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರಾಜಾಬಕ್ಷಿ ನಿರಂತರ ಪರಿಶ್ರಮ ಜೀವಿ. ಅವರ ನಿರಂತರ ಶ್ರಮದಿಂದ ಸಂಸ್ಥೆಯು ಇಂದು ಈ ಹಂತ ತಲುಪಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಾಣಲಿ ಅದಕ್ಕೆ ಗವಿಸಿದ್ದೇಶ್ವರನ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದರು 
ಸಂಸ್ಥೆಯ ವೆಬ್ ಸೈಟ್ ಗೆ ಚಾಲನೆ ನೀಡಿದ ವಾಣಿಜ್ಯೋಧ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ ಇಂತಹ ಹಿಂದುಳಿದ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ  ನೀಡುವ ನಿಟ್ಟಿನಲ್ಲಿ ಸಂಸ್ಥೆಯ ಕಾರ್‍ಯ ಶ್ಲಾಘನೀಯ. ಎಲ್ಲ ಕೆಲಸಗಳನ್ನು ಸರಕಾರವೇ ಮಾಡಲಿಕ್ಕೆ ಸಾಧ್ಯವಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುವುದರ ಮೂಲಕ ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸುತ್ತಿವೆ. ಸೇವಾ ಸಂಸ್ಥೆಯ ನಿರಂತರ ಶ್ರಮಕ್ಕೆ ತಮ್ಮ ಬೆಂಬಲ ಪ್ರೋತ್ಸಾಹ ಯಾವತ್ತೂ ಇದೆ ಎಂದರು. ವೇದಮೂರ್ತಿ ಷಡಕ್ಷರಯ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ರಾಜಾಬಕ್ಷಿ ಎಚ್. ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾದ ಫಹಿಂ ಬಾಷಾ, ರಾಘವೇಂದ್ರ ಪಾನಘಂಟಿ,ಜಾಕೀರ ಕುಕನೂರ,ಮುಸ್ತಫಾ ಕಮಾಲ್ ಮಾತನಾಡಿದರು. ಅಧ್ಯಕ್ಷತೆಯನ್ನು  ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಭದ್ರಪ್ಪ ಗಂಜಿ ವಹಿಸಿಕೊಂಡಿದ್ದರು. 
ಜಾಕೀರ ಕುಕನೂರ,ವೀರಭದ್ರಪ್ಪ ಗಂಜಿ,ಫಹಿಂ ಬಾಷಾ ಹಾಗೂ ಗಣರಾಜ್ಯೋತ್ಸವದ ಪರೇಡ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಕಿನ್ನಾಳ ಚಿತ್ರಗಾರ ಸಮಾಜದ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. 
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್‍ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು,ಕರಾಟೆ ಪ್ರದರ್ಶನ ನಡೆಯಿತು. ಕಾರ್‍ಯಕ್ರಮದ ನಿರೂಪಣೆಯನ್ನು  ಬಸವರಾಶ ಯರಾಶಿ,ಸ್ವಾಗತವನ್ನು ಕಾಮಾಕ್ಷಿ ಮಾಡಿದರೆ ವಂದನಾರ್ಪಣೆಯನ್ನು ಶರಣ್ ರಡ್ಡಿ ಮಾಡಿದರು. 

Advertisement

0 comments:

Post a Comment

 
Top