ಈ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಮೂರ್ತಿ ಅವರಿಗೆ ಭಾರತ ಜ್ಯೋತಿ ಪ್ರಶಸ್ತಿ ಪ್ರದಾನ
ಕೊಪ್ಪಳ ಫೆ. ೦೬ ಈ.ಕ.ರ.ಸಾ.ಸಂಸ್ಥೆ, ಗುಲಬರ್ಗಾದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜಿ.ಎನ್. ಶಿವಮೂರ್ತಿ ಅಸಾಧಾರಣ ಸೇವೆಯನ್ನು ಪರಿಗಣಿಸಿ ಇಂಟರ್ ನ್ಯಾಷನಲ್ ಇಂಟಿಗ್ರಿಟಿ ಪೀಸ್ ಆಂಡ್ ಫ್ರೆಂಡ್‌ಷಿಪ್ ಸೊಸೈಟಿಯು ಪ್ರತಿಷ್ಠಿತ 'ಭಾರತ ಜ್ಯೋತಿ ಪ್ರಶಸ್ತಿ' ಪ್ರಧಾನ ಮಾಡಿ ಗೌರವಿಸಿದೆ.
ಸರ್ಕಾರದ ಪ್ರಗತಿಪರ ಕೆಲಸಗಳಲ್ಲಿ ಉತ್ತಮ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜ ಅಭಿವೃದ್ಧಿಯಲ್ಲೂ ಸಹಭಾಗಿತ್ವ ಹೊಂದಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತ ಬಂದಿದೆ. ರಾಷ್ಟ್ರದ ಭಾವಕ್ಯತೆ ಮತ್ತು ಶಾಂತಿ ಕಾಪಾಡುವ ಸೇವಾ ಹಿತಾಸಕ್ತಿಯಿಂದ ಶಿಕ್ಷಣ, ವೈದ್ಯಕೀಯ, ಉದ್ಯಮ, ವಿಜ್ಞಾನ, ಕ್ರೀಡೆ ಮತ್ತು ಸಮಾಜ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುರುಷ ಮತ್ತು ಮಹಿಳೆಯರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಂಸ್ಥೆಯಾಗಿದೆ. ಈ ಸಂಸ್ಥೆಯ ಧ್ಯೇಯಗಳೆಂದರೆ, ಅಂತರ್ ರಾಷ್ಟ್ರೀಯ ಶಾಂತಿ, ಸಹಕಾರ, ಭಾವೈಕ್ಯತೆ, ಪ್ರತಿಭಾವಂತ ವಿದ್ಯಾರ್ಥಿಗಳ ಗುರುತಿಸುವಿಕೆ ಮತ್ತು ಸಹಕಾರ, ವಿಶ್ವದಲ್ಲಿ ಶಾಂತಿ ಕಾಪಾಡುವುದು. ಹಲವಾರು ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವುದು ಇಂತಹ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದವರನ್ನು ಗುರುತಿಸಿ ಪುರಸ್ಕರಿಸಿ ಪ್ರೋತ್ಸಾಹಿಸುವುದು ಮುಖ್ಯ ಉದ್ದೇಶವಾಗಿದೆ. ಈ.ಕ.ರ.ಸಾ.ಸಂಸ್ಥೆ, ಗುಲಬರ್ಗಾದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಜಿ.ಎನ್. ಶಿವಮೂರ್ತಿ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ಅನೇಕ ಜನಸ್ನೇಹಿ ಉಪಯುಕ್ತ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳ ಮೂಲಕ ಉತ್ತಮ, ದಕ್ಷ ಆಡಳಿತಗಾರರೆಂಬ ಪ್ರಶಂಸೆಯನ್ನು ಪಡೆದಿದ್ದು, ಇದೀಗ ಇವರು ಪ್ರಶಸ್ತಿಯನ್ನು ಪಡೆದಿರುವುದು ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೂ ಹೆಮ್ಮೆಯ ವಿಷಯವಾಗಿದೆ.
0 comments:
Post a Comment