PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :- ತುಂಗಾಭದ್ರ ಜಲಾಶಯದ ನೀರಿನಲ್ಲಿ ಆಂಧ್ರ ಪ್ರದೇಶದ ಪಾಲಿನ ಬಲದಂಡೆ ಕಾಲುವೆಯ ನೀರನ್ನು ಬಳಸಬೇಕಾದ ಸಂದರ್ಭದಲ್ಲಿ ಬಳಸಿಕೊಳ್ಳದೆ ಹಾಗೆಯೇ ಉಳಿಸಿಕೊಂಡು ಜಲಾಶಯದಲ್ಲಿ ನೀರು ಕಡಿಮೆಯಾದಾಗ ಮಾರ್ಚ ತಿಂಗಳಲ್ಲಿ ಅದನ್ನು ಬಳಸತೊಡಗುವುದರಿಂದ ಆಗ ಎಡದಂಡೆ ಕಾಲುವೆಯ ಆಶ್ರೀತ ಬೆಳೆಗಳಿಗೆ ನೀರಿಲ್ಲದಂತಾಗಿ ಒಳಗುವ ಪರಸ್ಥಿತಿ ಉಂಟಾಗುತ್ತದೆ ಇದರಿಂದ ಸಾವಿರಾರು ರೈತರು ಬಿದಿ ಪಾಲಾಗಬೇಕಾಗುತ್ತದೆ.   
ಪ್ರಸ್ತುತ ಬಲದಂಡೆ ಕಾಲುವೆಗೆ ೬ ಕ್ಯೂಸೆಕ್ಸ್ ನೀರು ಬಿಟ್ಟರೆ ಅದರಿಂದ ಶಿರಗುಪ್ಪ ಭಾಗದ ಟೈಲಾಂಡ ಜಮೀನಿಗೆ ನಿರೂದಗುತ್ತದೆ ಅದಕ್ಕೆ ಆಂದ್ರದ ಪಾಲಿನ ನೀರು ಹರಿಸಿದರೆ ಮಾತ್ರ ಸಾಧ್ಯ ಆದರೆ ಆಂಧ್ರ ಅದಕ್ಕೆ ಅವಕಾಶ ಕೊಡದೆ  ಈಗ ಸುಮ್ಮನಿದ್ದು ಮಾರ್ಚನಲ್ಲಿ ಆ ನೀರನ್ನು ಬಳಸಿಕೊಳ್ಳಲು ಮುಂದಾಗುವುದರಿಂದ  ಪ್ರಸ್ತುತ ಶಿರಗುಪ್ಪ ಭಾಗದ ಜಮೀನಿಗೆ ಮತ್ತು ಮಾರ್ಚನಲ್ಲಿ ಎಡದಂಡೆ ಭಾಗದ ಜಮೀನಿಗೂ ನೀರಿಲ್ಲದಂತಾಗಿ ಕರ್ನಾಟಕ ನೀರಿದ್ದು ಬಾಯಾರಿ ಸತ್ತಂತ ಸ್ಥಿತಿ ಅನುಭವಿಸಿದಂತಾಗುತ್ತದೆ. ಈ ತಂತ್ರವನ್ನು ತುಂಗಾಭದ್ರ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಖಂಡಿಸುತ್ತದೆ. ಮತ್ತು ಎಡದಂಡೆ ಕಾಲುವೆಯ ನೀರಿನ ಪಾಲಿಗೆ ಕೊರತೆಯಾದರೆ ಶೀಘ್ರವಾದ ಹೋರಾಟಕ್ಕೆ ಮುಂದಾಗುತ್ತದೆ ಎಂದು ಮುಖಂಡರಾದ ಜೆ.ಭಾರದ್ವಜ, ವಿಠ್ಠಪ್ಪ ಗೋರಂಟ್ಲಿ, ಡಿ.ಹೆಚ್.ಪೂಜಾರ, ಎಮ್.ಆರ್. ವೆಂಕಟೇಶ ಎಚ್ಚರಿಸಿದ್ದಾರೆ. 

Advertisement

0 comments:

Post a Comment

 
Top