PLEASE LOGIN TO KANNADANET.COM FOR REGULAR NEWS-UPDATES


 ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ಒಟ್ಟು ೯೬ ಸದಸ್ಯ ಸ್ಥಾನಗಳಿಗಾಗಿ ಸಲ್ಲಿಕೆಯಾಗಿದ್ದ ಒಟ್ಟು ೭೬೨ ನಾಮಪತ್ರಗಳ ಪೈಕಿ ೧೨೩ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ೫೯೯ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
  ಕೊಪ್ಪಳ ನಗರಸಭೆಯ ೩೧ ಸದಸ್ಯ ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ ಒಟ್ಟು ೨೩೬ ನಾಮಪತ್ರಗಳ ಪೈಕಿ ೩೩ ನಾಮಪತ್ರ ತಿರಸ್ಕೃತಗೊಂಡಿದ್ದು, ೧೯೪ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವೆನಿಸಿಕೊಂಡಿವೆ.  ಗಂಗಾವತಿ ನಗರಸಭೆಯ ೩೧ ಸದಸ್ಯ ಸ್ಥಾನಗಳಿಗೆ ಸಲ್ಲಿಸಲಾಗಿದ್ದ ೨೪೯ ನಾಮಪತ್ರಗಳ ಪೈಕಿ ೨೯ ನಾಮಪತ್ರಗಳು ತಿರಸ್ಕೃತಗೊಂಡಿವೆ.  ೨೧೫ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, ಗಂಗಾವತಿ ನಗರಸಭೆಯ ವಾರ್ಡ್ ಸಂಖ್ಯೆ ೧೬ ಕ್ಕೆ ಸಂಬಂಧಿಸಿದಂತೆ ಓರ್ವ ಅಭ್ಯರ್ಥಿಯ ನಾಮಪತ್ರದ ಪರಿಶೀಲನೆಯನ್ನು ಫೆ. ೨೬ಕ್ಕೆ ಮುಂದೂಡಲಾಗಿದೆ.  ಕುಷ್ಟಗಿ ಪುರಸಭೆಯ ೨೩ ಸದಸ್ಯ ಸ್ಥಾನಗಳಿಗೆ ಸಲ್ಲಿಸಲಾಗಿರುವ ೧೭೭ ನಾಮಪತ್ರಗಳ ಪೈಕಿ ೫೨ ನಾಮಪತ್ರಗಳು ತಿರಸ್ಕೃತಗೊಂಡಿದ್ದು,  ೧೨೫ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ.  ಯಲಬುರ್ಗ ಪಟ್ಟಣ ಪಂಚಾಯತಿಯ ೧೧ ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ ೧೦೦ ನಾಮಪತ್ರಗಳ ಪೈಕಿ ೯ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ೬೫ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top