- ಶಂಕ್ರಯ್ಯ ಅಬ್ಬಿಗೇರಿಮಠ
ಕೊಪ್ಪಳ ಜ.೧೯ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಗಳು ಇಂದಿನ ಯುವಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತದೆ ಎಂದು ಉಪನ್ಯಾಸಕ ಶಂಕ್ರಯ್ಯ ಅಬ್ಬಿಗೇರಿಮಠ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ ಅವರು ಮಾತನಾಡಿ, ಇಂದಿನ ಯುವಕರು ದೇಶಭಕ್ತಿ, ಆತ್ಮಾಭಿಮಾನ ಬೆಳೆಸಿಕೊಳ್ಳುವುದರ ಬದಲಿಗೆ ಮೋಜು ನಡೆಸುವುದರಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮೋಟಾರು ವಾಹನಗಳ ಅಪಘಾತ ಪ್ರಕರಣಗಳಲ್ಲಿ ಯುವಜನತೆಯೇ ಹೆಚ್ಚು ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರಲ್ಲದೆ, ರಸ್ತೆ ಸುರಕ್ಷತಾ ನಿಯಮಗಳು, ಅಪಘಾತ ಸಂಭವಿಸಿದಾಗ ಸಾರ್ವಜನಿಕರ ಪ್ರಥಮ ಕರ್ತವ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕೊಪ್ಪಳ ಗ್ರಾಮೀಣ ಠಾಣೆಯ ಆರಕ್ಷಕ ನಿರೀಕ್ಷಕರಾದ ಮಹಾಂತೇಶ್ ಸಜ್ಜನ್ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು, ಯುವಜನರಿಗೆ ಆದರ್ಶಪ್ರಾಯ. ಎನ್.ಎಸ್.ಎಸ್. ಶಿಬಿರಗಳು ಯುವಜನತೆಯ ಸಂಘಟನೆಗೆ ಹಾಗೂ ಶ್ರಮದಾನಕ್ಕೆ ಸಹಕಾರಿಯಾಗಲಿವೆ. ದೇಶದಲ್ಲಿ ಜರುಗುವ ಅಪರಾಧಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇವಲ ಶೇ. ೪ ರಿಂದ ೫ ರಷ್ಟು ಪ್ರಕರಣಗಳಿಗೆ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತವೆ. ಉಳಿದಂತೆ ಸಾಕ್ಷಿಗಳ ವ್ಯತಿರಿಕ್ತ ಹೇಳಿಕೆಗಳ ಪರಿಣಾಮವಾಗಿ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಯುವಕರು ಕಾನೂನಿನ ಮಹತ್ವವನ್ನು ಅರಿತು, ನಡೆದಲ್ಲಿ ಅಪರಾಧ ಸಂಖ್ಯೆಯನ್ನು ಕಡಿಮೆಗಳಿಸಲು ಸಾಧ್ಯವಿದೆ ಎಂದರು.
ಕೊಪ್ಪಳದ ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಚಾರ್ಯ ಎ.ಆರ್. ಶಿವಕುಮಾರ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಜೆ. ಕೊಂಡಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರುಗಳಾದ ಬಸವರಾಜ ಬಂಡಿಹಾಳ, ದೇವೇಂದ್ರಪ್ಪ ಹೊಸಮನಿ, ಪಾಲಿಟೆಕ್ನಿಕ್ನ ವಾದಿರಾಜ ಮಠದ್, ಸಮುದಾಯ ಪಾಲಿಟೆಕ್ನಿಕ್ನ ನಾಸಿರುದ್ದೀನ್, ಮುಂತಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಶಿಬಿರಾರ್ಥಿಗಳಾಗಿ ಸರ್ಕಾರಿ ಪಾಲಿಟೆಕ್ನಿಕ್ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯುವರಾಜ್ ಸ್ವಾಗತಿಸಿದರು, ರೋಹಿಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ನಾಗರತ್ನ ವಂದಿಸಿದರು.
0 comments:
Post a Comment