PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ. ೬. ದಲಿತರು ಸಮಾಜದಲ್ಲಿ ತಲೆ ಎತ್ತಿಕೊಂಡು, ಇನ್ನೂ ಜೀವಂತವಾಗಿದ್ದಾರೆ ಎಂದರೆ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಕಾರಣ ಎಂದು ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ನಗರದ ತಾಲೂಕ ಪಂಚಾಯತ ಸಂಕೀರ್ಣದಲ್ಲಿ ಕರ್ನಾಟಕ ವಾಲ್ಮೀಕಿ ಸೇನೆ ಮತ್ತು ಸ್ವರಭಾರತಿ ಗ್ರಾಮೀಣಾಭವೃದ್ಧಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.
     ರಾಜಕೀಯ ಪಕ್ಷಗಳು ದಲಿತರನ್ನು ಕೇವಲ ತಮ್ಮ ಕೆಲಸದವರಂತೆ ನೋಡಿಕೊಂಡರೆ ಮುಂದೆ ತಕ್ಕ ಶಾಸ್ತಿ ಅನುಭವಿಸಲಿದ್ದಾರೆಂದರು. ಅಂಬೇಡ್ಕರ ಆದರ್ಶಗಳನ್ನು ಅಳವಡಿಸಿಕೊಂಡು, ದಲಿತ, ಶೋಷಿತ ಸಮುದಾಯಗಳು ಶಿಕ್ಷಣ ಹೊಂದಬೇಕು, ಶೈಕ್ಷಣಿಕ, ರಾಜಕೀಯವಾಗಿಯು ಮುಂದೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ವೀರ ಕನ್ನಡಿಗ ಸಂಘದ ಶಿವಾನಂದ ಹೊದ್ಲೂರ, ಕರಾಟೆ ಪಟು ಶ್ರೀನಿವಾಸ ಪಂಡಿತ್, ಜೆಡಿಎಸ್ ನಗರ ಎಸ್‌ಸಿ ಘಟಕದ ಅಧ್ಯಕ್ಷ ನಾಗರಾಜ ಚಲುವಾದಿ, ಮುಕ್ತಿಯಾರ ಅಲಿ ಮನಿಯಾರ, ಕಾಂಗ್ರೇಸ್ ಮುಖಂಡ ಶಬ್ಬೀರ್ ಸಿದ್ದಖಿ, ಅಣ್ಣಪ್ಪ ತಳಕಲ್, ಶಂಕ್ರಪ್ಪ ವಾಲ್ಮೀಕಿ, ಬಸವರಾಜ ದೇಸಾಯಿ ಇತರರು ಇದ್ದರು.

Advertisement

0 comments:

Post a Comment

 
Top