PLEASE LOGIN TO KANNADANET.COM FOR REGULAR NEWS-UPDATES

 ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಹಂಪಿ ಉತ್ಸವ ಬರುವ ಜನವರಿ ೧೮, ೧೯ ಮತ್ತು ೨೦ ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಅವರು ಹೇಳಿದರು.
     ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದ ಅವರು, ಈ ಬಾರಿಯ ಹಂಪಿ ಉತ್ಸವವನ್ನು ಜ. ೧೮ ರಿಂದ ಮೂರು ದಿನಗಳ ಕಾಲ ವೈಭವಯುತವಾಗಿ ನೆರವೇರಿಸಲಾಗುವುದು.  ಅದೇ ರೀತಿ ಆನೆಗೊಂದಿ ಉತ್ಸವವನ್ನು ಸಹ ಆಚರಿಸಲು ನಿರ್ಧರಿಸಲಾಗಿದ್ದು, ಆನೆಗೊಂದಿ ಉತ್ಸವ ಆಚರಣೆಗೆ ಸೂಕ್ತ ದಿನಾಂಕವನ್ನು ಸದ್ಯದಲ್ಲೆ ನಿಗದಿಪಡಿಸಲಾಗುವುದು ಎಂದರು.
     ರಾಜ್ಯದ ಪ್ರವಾಸೋದ್ಯಮ ಇಲಾಖೆಯಲ್ಲಿ ಸದ್ಯ ಸಿಬ್ಬಂದಿ ಕೊರತೆ ಇದೆ.  ಮುಂಬರುವ ದಿನಗಳಲ್ಲಿ ಈ ಕೊರತೆ ನೀಗಿಸಲು ಯತ್ನಿಸಲಾಗುವುದು.  ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ಕಾರ್ಯ ನಿರ್ವಹಿಸುವಂತೆ ಕ್ರಮ ವಹಿಸಲಾಗುವುದು.  ಪ್ರವಾಸೋದ್ಯಮ ಇಲಾಖೆಗೆ ೨೦೦೮-೦೯ ರಲ್ಲಿ ೯೦ ಕೋಟಿ ರೂ. ಗಳಷ್ಟು ಇದ್ದ ಬಜೆಟ್ ಅನ್ನು ೨೦೧೨-೧೩ ರಲ್ಲಿ ೨೪೫ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.  ರಾಜ್ಯದ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಮುಂಬರುವ ವರ್ಷಗಳಲ್ಲಿ ಕನಿಷ್ಟ ೧೦೦೦ ಕೋಟಿ ರೂ. ಅನುದಾನ ಮೀಸಲಿರಿಸುವ ಅಗತ್ಯವಿದೆ.  ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇತರೆ ರಾಜ್ಯಗಳೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದ್ದು, ಇದಕ್ಕಾಗಿ ಹೆಚ್ಚಿನ ಅನುದಾನದ ಅಗತ್ಯವಿದೆ.  ಹೆಲಿ ಟೂರಿಸಂ ಯೋಜನೆ ಜಾರಿಯಲ್ಲಿ ವಿಳಂಬವಾಗಿದ್ದು, ಈ ಯೋಜನೆ ಸದ್ಯ ಕೇಂದ್ರ ಸರ್ಕಾರದ ಮಟ್ಟದಲ್ಲಿದೆ.  ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ದೊರತಲ್ಲಿ ಕೂಡಲೆ ಪ್ರಾರಂಬಿಸಲು ಕ್ರಮ ಜರುಗಿಸಲಾಗುವುದು ಎಂದರು.
     ಕೊಪ್ಪಳ ಶಾಸಕ ಸಂಗಣ್ಣ ಕರಡಿ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top