PLEASE LOGIN TO KANNADANET.COM FOR REGULAR NEWS-UPDATES

        ಕೊಪ್ಪಳ : ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಬುಧವಾರ ಅಲ್ಲಿನ ಸಿಪಿಐ ಶಂಕರಗೌಡ ಪಾಟೀಲ್ ಮಾಧ್ಯಮದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೇ ಬೆದರಿಕೆ ಹಾಕಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ಘಟನೆಯನ್ನು ಖಂಡಿಸಿರುವ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾಧ್ಯಮದವರು ಮುಕ್ತವಾಗಿ ಕಾರ್ಯನಿರ್ವಹಿಸುವಂಥ ವಾತಾವರಣ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕೋರಿದರು.
        ಇತ್ತಿಚೆಗೆ ಮಾಧ್ಯಮದವರ ಮೇಲೆ ಹಲ್ಲೆ, ಬೆದರಿಕೆಯಂಥ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುವವರು ಸ್ವ ಹಿತಾಸಕ್ತಿಯಿಂದ ಯಾರೂ ಸುದ್ದಿಯನ್ನು ಬರೆಯುವುದಿಲ್ಲ. ಹಾಗೂ ಬಿಂಬಿಸುವುದೂ ಇಲ್ಲ. ಉತ್ತಮ ಸಮಾಜ ನಿರ್ಮಾಣದ ಸದುದ್ದೇಶದಿಂದ ವರದಿಗಳು ಮಾಧ್ಯಮದಲ್ಲಿ ಬರುತ್ತವೆ. ಅಽಕಾರಿ ವರ್ಗದವರು ಹಾಗೂ ರಾಜಕಾರಣಿಗಳು ಇದನ್ನು ಅರ್ಥೈಸಿಕೊಂಡು ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡಬಾರದು ಎಂದು ಕೊಪ್ಪಳ ಮೀಡಿಯಾ ಕ್ಲಬ್‌ನ ಸದಸ್ಯರು ಆಗ್ರಹಿಸಿದರು.
        ಮಾಧ್ಯಮದವರ ಮೇಲೆ ಹಲ್ಲೆ ನಡೆಸುವ ಹಾಗೂ ಜೀವ ಬೆದರಿಕೆ ಹಾಕುವ ವ್ಯಕ್ತಿಗಳ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಜರುಗಿಸಿ ಮಾಧ್ಯಮ ಪ್ರತಿನಿಧಿಗಳು ಸ್ವತಂತ್ರವಾಗಿ ಕೆಲಸ ಮಾಡಲು ಸಹಕರಿಸಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಬೆಳವಣಿಗೆಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
        ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಭೀಮಸೇನ ಚಳಗೇರಿ, ದೊಡ್ಡೇಶ್ ಯಲಿಗಾರ, ಹುಸೇನ್ ಪಾಷಾ, ಶಂಕರ ಕೊಪ್ಪದ, ಬಸವರಾಜ ಕರುಗಲ್, ಗಂಗಾಧರ ಬಂಡಿಹಾಳ, ನಾಗರಾಜ ಹಿರೇಮಠ, ಶ್ರೀಪಾದ ಅಯಾಚಿತ್, ಶರಣಬಸವ ಹುಲಿಹೈದರ್, ತಿಪ್ಪನಗೌಡ ಮಾಲೀಪಾಟೀಲ್, ವಿಠ್ಠಪ್ಪ ಗೋರಂಟ್ಲಿ, ದತ್ತಪ್ಪ, ಜಯಂತ್.ಸಿ.ಎಂ., ಮೌನೇಶ್ ಬಡಿಗೇರ ಮತ್ತಿತರರು ಇದ್ದರು.

Advertisement

0 comments:

Post a Comment

 
Top