PLEASE LOGIN TO KANNADANET.COM FOR REGULAR NEWS-UPDATES

ಸ.ನ.೪೩೮ ರ ಭೂಮಿ ಸ್ಲಂ- ನಿವಾಸಿಗಳು ತಮ್ಮ ಹಕ್ಕುಗಳ ರಕ್ಷಣೆಗಾಗಿ ನಡೆಸಿರುವ ಅರ್ನಿಧಿಷ್ಟಾವಧಿ ಧರಣಿ ಹೋರಾಟ ೭ ನೇ ದಿನದಲ್ಲಿ ಮುಂದುವರೆದಿದೆ. ಇಂದು ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಡಿ.ಎಚ್.ಪೂಜಾರ್ ಟಿಯುಸಿಐ ರಾಜ್ಯಾಧ್ಯಕ್ಷರು  ನಗರದ ೯ ಬಡಾವಣೆಗಳಲ್ಲಿ ಅನರ್ಹ ಫಲಾನುಭವಿಗಳು ನಿವೇಶನ ಹೊಂದಿದ್ದಾರೆಂದು ಆಗಿನ ಸಹಾಯಕ ಆಯುಕ್ತರಾಗಿದ್ದ ಮಾನ್ಯ ಗಂಗೂಬಾಯಿ ಮಾನ್ಕರ ಇವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸ.ನ.೪೩೮ ರ ಬಡವಾಣೆಗಳಲ್ಲಿ ಕೆಲವು ಅನರ್ಹರು ನಿವೇಶನಗಳು ಹೊಂದಿದ್ದರೆ ಅತಂಹವರನ್ನು ನಿರ್ಧಿಷ್ಟವಾಗಿ ಗುರುತಿಸಿ ಕ್ರಮ ಜರುಗಿಸಬೇಕು. ಇದನ್ನು ಮಾಡದೆ ೨೪೯ ನಿವಾಸಿಗಳುನ್ನು ಮನೆಗಳಿಂದ ಎತ್ತಂಗಡಿ ಮಾಡಬೇಕೆನ್ನುವ ಜಿಲ್ಲಾಡಳಿತದ ಉದ್ದೇಶ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು. ಬೆಂಗಳೂರ ಸೇರಿದಂತೆ ರಾಜ್ಯಾಧ್ಯಂತಾ ಲಕ್ಷಾಂತರ ಬಡ ನಿವಾಸಿಗಳು ಕೊಳಗೇರಿ ಇತರ ಜಾಗೆಯಲ್ಲಿ ವಾಸವಾಗಿದ್ದು ಯಾವುದೇ ಅಧಿಕೃತ  ದಾಖಲೆಗಳು ಹೊಂದಿಲ್ಲ, ಕಳೆದ ಮೇ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇತಂಹ ಜನರಿಗೆ ಮನೆಗಳನ್ನು ಖಾಯಂ ಮಾಡಿ ಸರ್ಕಾರಕ್ಕೆ ಶೇ ೨೫ ರಷ್ಟು ಹಣವನ್ನು ಬ್ಯಾಂಕ್ ಸಾಲದ ಮೂಲಕ ಪಡೆಯಬೇಕೆಂದು ಮಾನ್ಯ ವಸತಿ ಸಚಿವ ವಿ.ಸೊಮಣ್ಣ ಹೇಳಿದರು, ಆದರೆ ಸ.ನ. ೪೩೮ ರ ನಿವಾಸಿಗಳು, ತಹಶೀಲ್ದಾರರ ಮತ್ತು ಪೌರಾಯುಕ್ತರ ಜಂಟಿ ಸಹಿ ಮಾಡಿದ ಹಕ್ಕು ಪತ್ರ ಹೊಂದಿದ್ದರು,  ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿರುವದು ಅತ್ಯಂತ ಖಂಡನೀಯ. ನಿವಾಸಿಗಳು ಯಾವ ಕಾರಣಕ್ಕೆ ದೃತಿಗೆಡದೆ ಜಿಲ್ಲಾಡಳಿತ ವಿರುದ್ಧ ರಾಜಿರಹಿತ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
 ಮಲೆನಾಡು ಪ್ರದೇಶದಲ್ಲಿ ಲಕ್ಷಾಂತರ ಕಾಫಿ ತೋಟ ಹೊಂದಿರುವ ರಾಜಕಾರಣಿಗಳು ಮತ್ತು ಬಲಿಷ್ಟರು  ರಾಜ್ಯಾಧ್ಯಂತ ಸಾವಿರಾರು ಎಕರೆ ಸರ್ಕಾರಿ ಭೂಮಿ-ಕೋಟ್ಯಾಂತರ ಬೆಲೆ ಬಾಳುವ ನಿವೇಶನ ಹೊಂದಿದ್ದಾರೆ. ಮತ್ತು ಕೊಪ್ಪಳ ನಗರದಲ್ಲಿ ಬರಿಗೈಲಿ ರಾಜಕೀಯಕ್ಕೆ ಬಂದವರು ನೂರಾರು ಕೋಟಿ ಸಂಪತ್ತನ್ನು ಬೇನಾಮಿ ಹೆಸರಿನಲ್ಲಿ ಹೊಂದಿದ್ದಾರೆ. ಈ ಕುರಿತು ಪ್ರಶ್ನೆ ಮಾಡದಿರುವದು ಅತ್ಯಂತ ಖಂಡನೀಯ. ಗುಬ್ಬಿ ಮೇಲೆ ಭ್ರಮಸ್ತರ ಎನ್ನುವಂತೆ ಅತ್ಯಂತ ಬಡವರು ವಾಸಿಸುವ ಸ.ನ. ೪೩೮ ರ ನಿವಾಸಿಗಳ ಮೇಲೆ ರಾಜಕೀಯ ದುರುದ್ದೇಶ ಸಾದಿಸಲು ಮುಂದಾಗಿರುವುದನ್ನು ಪ್ರಜ್ಞಾವಂತರೆಲ್ಲರು ಖಂಡಿಸಬೇಕಾಗಿದೆ. ಕಳೆದ ೬ ವರ್ಷಗಳಿಂದ ವಾಸಿಸುವ  ನಿವಾಸಿಗಳು ಮೇಲೆ ನಡೆದಿರುವ ಈ ರಾಜಕೀಯ ದಾಳಿ ವಿರುದ್ಧ ಸುತ್ತಲಿನ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿ ಜನರ ನೈತಿಕ ಬೆಂಬಲ ಪಡೆಯುವ ಕಾರ್ಯ ಯೋಜನೆಗೆ ಮುಂದಾಗಿ ಬಿಜೆಪಿ ಇತರ  ಕೋಮುವಾದಿಗಳ ಮುಂಖಡರಿಗೆ ಮುಂದಿನ ಚನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕೆಂದು ಕರೆ ನೀಡಿದರು.
   ಸಿಪಿಐ (ಎಂಎಲ್) ಜಿಲ್ಲಾ ಕಾರ್ಯದರ್ಶಿ ಕೆ ಬಿ ಗೋನಾಳ ಮಾತನಾಡಿ ಬಳ್ಳಾರಿ ಉಸ್ತುವಾರಿ ಮಂತ್ರಿ ಆನಂದ ಸಿಂಗ್ ಹಾಗೂ ಶಾಸಕರಾದ ಸಂಗಣ್ಣ ಕರಡಿ ನಿನ್ನೆ ದಿನ ಧರಣಿ ಸ್ಥಳಕ್ಕೆ ಬಂದು ನಿವಾಸಗಳಿಗೆ ಬೇರೆ ಕಡೆ ನಿವೇಶನ, ಮನೆ ನಿರ್ಮಿಸಿಕೊಡುತ್ತನೆ ಎಂದು ನೇರವಾಗಿ ಹೇಳಿರುವುದು ಖಂಡನೀಯ. ನಗರದ ೯ ಬಡಾವಣೆಗಳ ನಿವೇಶನಗಳಲ್ಲಿ ಆಕ್ರಮ ನಡೆಯುಲು ಶಾಸಕರಾದ ಸಂಗಣ್ಣ ಕರಡಿಯವರೆ ಮುಖ್ಯ ಪಾತ್ರ ವಹಿಸಿದ್ದಾರೆ. ಈಗಲೂ ಖಾಲಿ ಹಕ್ಕು ಪತ್ರ ಬಾಡ್‌ಗಳಲ್ಲಿ ತಹಶೀಲ್ದಾರರು ಮತ್ತು ಪೌರಾಯುಕ್ತರಿಂದ ಸಹಿ ಮಾಡಿದ ಖಾಲಿ ಹಕ್ಕು ಪತ್ರಗಳನ್ನಿಟ್ಟುಕೊಂಡು ತಮ್ಮ ಹಿಂಬಾಲಕರ ಹೆಸರು ಬರೆದುಕೊಡುವ ಪದ್ದತಿ ಮುಂದುವರೆಸಿದ್ದಾರೆ.
  ನಗರದಿಂದ ೮ ಕೀ.ಮಿ ದೂರದಲ್ಲಿರುವ ಗುನ್ನಾಳ ಗ್ರಾಮದಲ್ಲಿ ಕಳೆದ ವರ್ಷ ಭೂಮಿಯನ್ನು ಖರೀದಿಸಿ ಬಾರಿ ವಂಚನೆ ಮಾಡಿದಲ್ಲದೆ ಈ ಭೂಮಿಯನ್ನು ನಗರದ ನಿವಾಸಿಗಳಿಗೆ ಹಂಚುವುದಾಗಿ ರಾಜಕೀಯ ಅಮೀಷ ಹೊಡ್ಡುವ ಕಾರ್ಯ ಮುಂದುವರೆಸಿದ್ದಾರೆ. ಆದರೆ ನಗರದ ಜನರು ಈ ನಿವೇಶನಕ್ಕೆ ಹೋಗಲು ನಿರಾಕರಿದ್ದರಿಂದ ಈ ಭೂಮಿ ಆಗೆ ಬಿದ್ದಿದೆ. ಶಾಸಕರು ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರ, ಬೇನಾಮಿ ಹೆಸರಿನಲ್ಲಿ ಗಳಿಕೆ ಮಾಡಿರುವ ಆಸ್ತಿ ತನಿಖೆಗಾಗಿ ಹೋರಾಟ ರೊಪಿಸುತ್ತೆವೆಂದು ಕರೆ ಘೋಷಿಸಿದರು. ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಬುನ್ನಟ್ಟ ಮಾತಾನಾಡಿ ಜಿಲ್ಲೆಯ ರೈತ ಸಂಘದ ಸದಸ್ಯರು ಸಮಯ ಬಂದರೆ ೪ ತಾಲೂಕಿನಲ್ಲಿ ನಿಮ್ಮನ್ನು ಬೆಂಬಲಿಸಿ ಹೋರಾಡಲು ಕರೆ ಕೊಡಲಾಗುತ್ತದೆ ಎಂದರು. ಕಳೆದ ೭ ದಿನಗಳಿಂದ ನಿವಾಸಿಗಳ ಹೋರಾಟಕ್ಕೆ ಬೆನ್ನಲಬಾಗಿ ನಿಂತಿರುವ ಅಖಿಲ ಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘನೆ ಜಿಲ್ಲಾಧ್ಯಕ್ಷರಾದ ಹನುಮೇಶ.ಪೂಜಾರ್ ಪ್ರಾಸ್ತವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಮದ್ಯೆ ಬಡವರ ಮೇಲೆ ನಡೆದಿರುವ ಈ ರಾಜಕೀಯ ದಾಳಿಯ ವಿರುದ್ಧ ಪ್ರಚಾರ ಮಾಡಿ ವಿದ್ಯಾರ್ಥಿಗಳ ಬೆಂಬಲ ಕೊರಲಾಗುವುದು ಎಂದರು. ಶ್ಯಾಮೀದ ಸಾಬ ಮಣೆದಾಳ,ಟಿಯುಸಿಐ ಬಸವರಾಜ ನರೇಗಲ್ ಜಿಲ್ಲಾಧ್ಯಕ್ಷರು ಮಾತನಾಡಿ ಟಿಯುಸಿಐ ಜಿಲ್ಲಾ ಸಮಿತಿಯು ಯಾವುದೇ ಸಂಧರ್ಭಕ್ಕೆ ನಿಮ್ಮಗೆ ಬೇನೆಲಬಾಗಿರುತ್ತದೆ ಎಂದು ಘೋಷಿಸಿದರು.

Advertisement

0 comments:

Post a Comment

 
Top