PLEASE LOGIN TO KANNADANET.COM FOR REGULAR NEWS-UPDATES


ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಜಮಿನುಗಳಿಗೆ ಬೇಸಿಗೆ ಬೆಳೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೇಸ್ ಪ್ರತಿಭಟನೆ

ಕೊಪ್ಪಳ : ದಿ ೨೩ ಶಕ್ರವಾರದಂದು ಬೆಳಗ್ಗೆ ೧೧:೦೦ ಘಂಟೆಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಜಮಿನುಗಳಿಗೆ ಬೇಸಿಗೆ ಬೆಳೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಮುನಿರಾಬಾದ್ ನಲ್ಲಿರುವ ತುಂಗಬದ್ರಾ ಕಾಡಾ ಕಛೇರಿಯ ಎದುರು ಕೊಪ್ಪಳ ಲೋಕಸಭಾ ಯುವ ಕಾಂಗ್ರೆಸ ವತಿಯಿಂದ   ಬಸನಗೌಡ ಬಾದರ್ಲಿಯವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಸಾವಿರಾರು ಜನ ರೈತರು ಈ ಪ್ರತಿಭಟನೆಯಲ್ಲಿ ಬಾಗಿಯಾಗಲಿದ್ದಾರೆ ಎಂದು ಕೊಪ್ಪಳ ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ ಉಪಾಧ್ಯಕ್ಷರಾದ ಸುರೇಶ ದಾಸರಡ್ಡಿ   ತಿಳಿಸಿದ್ದಾರೆ.  .

Advertisement

0 comments:

Post a Comment

 
Top