ಕೊಪ್ಪಳ ತಾಲೂಕಿನ ಇರಕಲ್‌ಗಡಾ ಗ್ರಾಮದಲ್ಲಿ ದಿ.೨೨/೧೧/೨೦೧೨ ರಂದು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ೬ ಸ್ವ ಸಹಾಯ ಸಂಘಗಳ ೬೦ ಸದಸ್ಯರು ಭಾಗವಹಿಸಿದ್ದರು. "ಪ್ರಕೃತಿ" ಜ್ಞಾನ ವಿಕಾಸ ಕೇಂದ್ರವನ್ನು ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಅವರು ಉದ್ಘಾಟಿಸಿ ಮಾತನಾಡಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಸ್ವಾವಲಂಭನೆಯ, ಆರೋಗ್ಯದ, ಅಭಿವೃದ್ದಿಗಾಗಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಕಲ್ಪನೆಯಂತೆ ಕಾರ್ಯಕ್ರಮದ ವಿಶೇಷತೆಯನ್ನು ಮತ್ತು ನಿರ್ವಹಣೆಯ ಬಗ್ಗೆ ಅರ್ಥ ಪೂರ್ಣವಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷಿಣಿಯಾದ ಶೇಖಮ್ಮನವರು ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಇರಕಲ್‌ಗಡಾ ಮುಖ್ಯ ಆರೋಗ್ಯ ಸಹಾಯಕಿ ಶ್ರೀಮತಿ ಕವಿತಾ ರವರು ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ತಾಲೂಕಿನ ಯೋಜನಾ ಅಧಿಕಾರಿಗಳಾದ ಧರಣಪ್ಪ ಮೂಲ್ಯ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಸುಮಾ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ಥಳೀಯ ಸೇವಾ ಪ್ರತಿನಿಧಿ ಶ್ರೀಮತಿ ಕವಿತಾ.ಪಿ.ಪಟ್ಟಣಶೆಟ್ಟಿ ನಿರೂಪಣೆ ಮಾಡಿದರು, ವಲಯದ ಮೇಲ್ವಿಚಾರಕರಾದ ರಾಘವೇಂದ್ರ ರವರು ಸ್ವಾಗತಿಸಿ ವಂಧಿಸಿದರು.

0 comments:
Post a Comment