ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಆರ್.ಪಿ./ಸಿ.ಆರ್.ಪಿ ಹುದ್ದೆಗಳಿಗೆ, ಪರೀಕ್ಷೆಯಲ್ಲಿ ಅರ್ಹತೆ ಹೊಂದಿರುವ ಶಿಕ್ಷಕರಿಗೆ ಬ್ಲಾಕ್‌ವಾರು, ಉಪನಿರ್ದೇಶಕರ ಕಚೇರಿಯಲ್ಲಿ ಜು.೦೯ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಕೌನ್ಸಿಲಿಂಗ್‌ನ್ನು ಏರ್ಪಡಿಸಲಾಗಿದೆ.
೩ ವರ್ಷ ಸೇವೆ ಪೂರ್ಣಗೊಳಿಸಿದ ಹಾಗೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವುಗೊಳಿಸಿದ ಪ್ರಕರಣಗಳಲ್ಲಿ ಬಿ.ಆರ್.ಪಿ./ಸಿ.ಆರ್.ಪಿ ಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ೩ ವರ್ಷ ಪೂರ್ಣಗೊಳಿಸಿದ ಹಾಗೂ ಪರೀಕ್ಷೆಗೆ ಹಾಜರಾಗದ ಮತ್ತು ಪರೀಕ್ಷೆಗೆ ಹಾಜರಾಗಿ ಅರ್ಹತೆ ಗಳಿಸದ ಬಿ.ಆರ್.ಪಿ./ಸಿ.ಆರ್.ಪಿ ಗಳನ್ನು ಚಾಲ್ತಿಯಲ್ಲಿರುವ ನಿಯಮಗಳಂತೆ ಆದ್ಯತಾ ಪಟ್ಟಿ ತಯಾರಿಸಿ ಕೌನ್ಸಿಲಿಂಗ್ ಮೂಲಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗುವುದು. ಇಂತವರು ಕೌನ್ಸಿಲಿಂಗ್‌ಗೆ ಹಾಜರಾಗಲು ಸೂಚಿಸಿದೆ. ಕೌನ್ಸಿಲಿಂಗ್‌ಗೆ ಹಾಜರಾಗದಿದ್ದಲ್ಲಿ ಡಮ್ಮಿ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗುವುದು, ಪ್ರಸ್ತುತ ಖಾಲಿಯಿರುವ ಮತ್ತು ಮೇಲಿನಂತೆ ಖಾಲಿಯಾಗಲಿರುವ ಎಲ್ಲಾ ಬಿ.ಆರ್.ಪಿ./ಸಿ.ಆರ್.ಪಿ ಹುದ್ದೆಗಳಿಗೆ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅರ್ಹ ಶಿಕ್ಷಕರಿಗೆ ರ್‍ಯಾಂಕ್ ಪಟ್ಟಿಯ ಪ್ರಕಾರ ಕೌನ್ಸಿಲಿಂಗ್‌ನ್ನು ಇದೇ ದಿನದಂದು ನಡೆಸಲಾಗುತ್ತಿದ್ದು, ಸಂಬಂಧಿಸಿದ ಶಿಕ್ಷಕರು ಹಾಜರಾಗಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ತಿಳಿಸಿದ್ದಾರೆ.
0 comments:
Post a Comment