PLEASE LOGIN TO KANNADANET.COM FOR REGULAR NEWS-UPDATES


  ಸರ್ಕಾರಿ ಪ್ರೌಢಶಾಲಾ ಸಹಾಯಕ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರುಗಳ ನೇಮಕಾತಿಗಾಗಿ ಜು. ೧೫ ರಿಂದ ೧೮ ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ಹಾಗೂ ಅತ್ಯಂತ ಕಟ್ಟುನಿಟ್ಟಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಪರೀಕ್ಷಾ ಮೇಲ್ವಿಚಾರಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಪರೀಕ್ಷೆಗೆ ಹಾಜರಾಗಲು ಬರುವ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ಸಿಗುವಂತಾಗಬೇಕು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕೊಠಡಿಗಳ ಸಂಖ್ಯೆ, ಕೊಠಡಿಗಳಿಗೆ ಹೋಗುವ ಮಾರ್ಗಗಳ ಬಗ್ಗೆ ಸೂಕ್ತ ಮಾರ್ಗದರ್ಶನ ದೊರೆಯುವಂತೆ ಮಾಡಲು ಅಗತ್ಯ ಮಾಹಿತಿಯನ್ನು ಫಲಕದಲ್ಲಿ ಪ್ರದರ್ಶಿಸಬೇಕು.  ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತೀವ್ರ ನಿಗಾ ವಹಿಸಬೇಕು.  ತಪ್ಪಿದಲ್ಲಿ ಆಯಾ ಪರೀಕ್ಷಾ ಮೇಲ್ವಿಚಾರಕರನ್ನೇ ಹೊಣೆಗಾರರನ್ನಾಗಿಸಲಾಗುವುದು. ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಈಗಾಗಲೆ ಪರೀಕ್ಷಾ ಕೇಂದ್ರದ ಸುತ್ತ ಪರೀಕ್ಷಾ ದಿನದಂದು ನಿಷೇಧಾಜ್ಞೆಯನ್ನು ಜಾರಿಗೊಳಿಸುವ ಆದೇಶವನ್ನು ಜಿಲ್ಲಾಧಿಕಾರಿಗಳು ಮಾಡಿದ್ದಾರೆ.  ಪರೀಕ್ಷಾ ಕೇಂದ್ರದ ಒಳಗೆ ಅಭ್ಯರ್ಥಿಗಳು, ಮೇಲ್ವಿಚಾರಕರು, ಅಲ್ಲದೆ ಅನುಮತಿಸಿದ ಸಿಬ್ಬಂದಿಗಳನ್ನು ಹೊರತುಪಡಿಸಿ ಯಾರನ್ನೂ ಪ್ರವೇಶಿಸಲು ಅವಕಾಶ ಕಲ್ಪಿಸಬಾರದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಸೂಚನೆ ನೀಡಿದರು.
  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿ, ಕಷ್ಟ ಪಟ್ಟ ಅಭ್ಯರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ಪರೀಕ್ಷಾ ಮೇಲ್ವಿಚಾರಕರು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಜು. ೧೫ ರಿಂದ ೧೮ ರವರೆಗೆ ಜಿಲ್ಲೆಯ ಒಟ್ಟು ೫೨ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ.  ಗುಲಬರ್ಗಾ ವಿಭಾಗದಲ್ಲಿ ಒಟ್ಟು ೯೬೪ ಹುದ್ದೆಗಳಿಗಾಗಿ ಪರೀಕ್ಷೆ ನಡೆಯಲಿದ್ದು ಈ ಪೈಕಿ ಕೊಪ್ಪಳ ಜಿಲ್ಲೆಯಲ್ಲಿ ೧೪೪ ಹುದ್ದೆಗಳಿವೆ.  ಗುಲಬರ್ಗಾ ವಿಭಾಗದ ಹುದ್ದೆಗಳಿಗಾಗಿ ಒಟ್ಟು ೬೮೪೦೪ ಅರ್ಜಿಗಳು ಸ್ವೀಕೃತವಾಗಿದ್ದು, ಆ ಪೈಕಿ ಕೊಪ್ಪಳ ಜಿಲ್ಲೆಯಲ್ಲಿ ೧೨೩೩೫ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.  ಕೊಪ್ಪಳ ತಾಲೂಕಿನಲ್ಲಿ ೧೬, ಗಂಗಾವತಿ- ೨೪, ಯಲಬುರ್ಗಾ- ೦೬ ಹಾಗೂ ಕುಷ್ಟಗಿ ತಾಲೂಕಿನಲ್ಲಿ ೦೬ ಸೇರಿದಂತೆ ಒಟ್ಟು ೫೨ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.
ವೇಳಾಪಟ್ಟಿ : ಜು. ೧೫ ರಂದು ಬೆಳಿಗ್ಗೆ ೧೦ ರಿಂದ ೧೨ ರವರೆಗೆ ಸಾಮಾನ್ಯ ಪತ್ರಿಕೆ-೧, ಮಧ್ಯಾಹ್ನ ೨ ರಿಂದ ೦೪ ಗಂಟೆಯವರೆಗೆ ಕಲಾ ಶಿಕ್ಷಕ ಪತ್ರಿಕೆ-೨.  ಜು. ೧೬ ರಂದು ಬೆಳಿಗ್ಗೆ ದೈಹಿಕ ಶಿಕ್ಷಕರ ಗ್ರೇಡ್-೧ ಪತ್ರಿಕೆ, ಮಧ್ಯಾಹ್ನ ಭೌತವಿಜ್ಞಾನ/ಜೀವವಿಜ್ಞಾನ ಪತ್ರಿಕೆ.  ಜು. ೧೭ ರಂದು ಬೆಳಿಗ್ಗೆ ಕನ್ನಡ ಭಾಷಾ ಪತ್ರಿಕೆ-೨, ಮಧ್ಯಾಹ್ನ ಆಂಗ್ಲಭಾಷಾ ಪತ್ರಿಕೆ-೨.  ಜು. ೧೮ ರಂದು ಬೆಳಿಗ್ಗೆ ಹಿಂದಿ ಭಾಷಾ ಪತ್ರಿಕೆ-೨, ಮಧ್ಯಾಹ್ನ ಉರ್ದು/ಸಂಸ್ಕೃತ/ತಮಿಳು/ಮರಾಠಿ ಪತ್ರಿಕೆ-೨ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷಾ ಕೇಂದ್ರಗಳು : ಕೊಪ್ಪಳ ತಾಲೂಕಿನಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಗವಿಸಿದ್ದೇಶ್ವರ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ಎಸ್‌ಎಫ್‌ಎಸ್ ಶಾಲೆ, ಆರ್‌ಡಿಟಿಇ ಗುಳಗಣ್ಣವರ್ ಇನ್ಸ್‌ಟಿಟ್ಯೂಟ್ ಆಫ್ ಕಾಮರ್‍ಸ್, ದದೇಗಲ್, ಮಿಲೇನಿಯಂ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ದದೇಗಲ್, ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಕಾಲೇಜು, ಬಿ.ಎನ್.ಆರ್.ಕೆ ಪ.ಪೂ. ಕಾಲೇಜು.  ಸರ್ಕಾರಿ ಪಾಲಿಟೆಕ್ನಿಕ್, ಕಾಳಿದಾಸ ಪ್ರೌಢಶಾಲೆ, ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆ, ದಕ್ಷಿಣಭಾರತ ಹಿಂದಿ ಪ್ರಚಾರ ಸಭಾ ಕಾನೂನು ಕಾಲೇಜು, ಸರ್ಕಾರಿ ಪ.ಪೂ. ಕಾಲೇಜು ಭಾಗ್ಯನಗರ, ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮಹಾವಿದ್ಯಾಲಯ.
  ಗಂಗಾವತಿ ತಾಲೂಕಿನಲ್ಲಿ ಗಂಗಾವತಿಯ ಎಂಎನ್‌ಎಂ ಬಾಲಕಿಯರ ಪ.ಪೂ. ಕಾಲೇಜು, ಜೆಎಸ್‌ಎಸ್ ಪ್ರೌಢಶಾಲೆ, ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ಬೇಥಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೊಟ್ಟೂರೇಶ್ವರ ಪ.ಪೂ. ಕಾಲೇಜು, ವಿಶ್ವಭಾರತಿ ವಿದ್ಯಾಕೇಂದ್ರ ಪ್ರೌಢಶಾಲೆ, ಸೇಂಟ್‌ಪಾಲ್ಸ್ ಪ್ರೌಢಶಾಲೆ, ವಿವೇಕಭಾರತಿ ಪ್ರೌಢಶಾಲೆ, ಕಲ್ಮಠ ಚನ್ನಬಸವಸ್ವಾಮಿ ಮಹಿಳಾ ಪದವಿ ಕಾಲೇಜು, ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಚ್.ಆರ್. ಶ್ರೀರಾಮುಲು ಪದವಿ ಕಾಲೇಜು. ಟಿಎಂಎಇ ಸೊಸೈಟಿ ಬಿ.ಇಡಿ ಕಾಲೇಜು, ಕೆಎಲ್‌ಇ ಸೊಸೈಟಿಸ್ ಪ.ಪೂ. ಕಾಲೇಜು, ವಡ್ಡರಹಟ್ಟಿ. ಲಿಟ್ಲ್ ಹಾರ್ಟ್ ಪ್ರೌಢಶಾಲೆ, ಹೆಚ್.ಆರ್. ಸರೋಜಮ್ಮ ಪ.ಪೂ. ಕಆಲೇಜು, ಎಂಎನ್‌ಎಂ ಪ್ರೌಢಶಾಲೆ, ಲಯನ್ಸ್ ಕ್ಲಬ್ ಪ್ರೌಢಶಾಲೆ, ಎ.ಕೆ.ಆರ್ ದೇವಿ ಪ.ಪೂ. ಕಾಲೇಜು ಶ್ರೀರಾಮನಗರ.  ಸರ್ಕಾರಿ ಪ.ಪೂ. ಕಾಲೇಜು ಶ್ರೀರಾಮನಗರ.  ಬಸವ ಕೋಟೇಶ್ವರರಾವ್ ಪಬ್ಲಿಕ್ ಸ್ಕೂಲ್ ಶ್ರೀರಾಮನಗರ.   ಯಲಬುರ್ಗಾ ತಾಲೂಕಿನಲ್ಲಿ ಯಲಬುರ್ಗಾದ ಮಂಜುನಾಥೇಶ್ವರ ಪ್ರೌಢಶಾಲೆ, ಸಿದ್ದರಾಮೇಶ್ವರ ಡಿ.ಇಡಿ ಕಾಲೇಜು.  ಕಿತ್ತೂರು ರಾಣಿ ಚೆನ್ನಮ್ಮ ಪ.ಪೂ. ಕಾಲೇಜು.  ಬಾಲಕರ ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬಾಲಕಿಯರ ಸರ್ಕಾರಿ ಪ್ರೌಢಶಾಲೆ.  ಕುಷ್ಟಗಿ ತಾಲೂಕಿನಲ್ಲಿ ವಿಜಯ ಚಂದ್ರಶೇಖರ ಪ್ರೌಢಶಾಲೆ, ಕ್ರೈಸ್ತ ದಿ ಕಿಂಗ್ ಪ್ರೌಢಶಾಲೆ, ಬಾಲಕರ ಸರ್ಕಾರಿ ಜೂನಿಯರ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು.  ಸರ್ಕಾರಿ ಪ್ರಥಮ ದರ್ಜೆ ಕಾಲೇಜು.  ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜು.  ಕುಷ್ಟಗಿ.
  ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಡದಾನಿ ಅವರು ಪರೀಕ್ಷೆಯಲ್ಲಿ ಮೇಲ್ವಿಚಾರಕರು ಕೈಗೊಳ್ಳಬೇಕಾದ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಣೆ ನೀಡಿದರು.  ಸಭೆಯಲ್ಲಿ ಪರೀಕ್ಷಾ ಕೇಂದ್ರಗಳ ಶಾಲಾ, ಕಾಲೇಜುಗಳ ಮುಖ್ಯಸ್ಥರು ಭಾಗವಹಿಸಿದ್ದರು.

Advertisement

0 comments:

Post a Comment

 
Top