PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ, ದಿ ೭ರಂದು ಬಾಲಿಕೆಯರ ಸ.ಪ.ಪೂ ಕಾಲೇಜಿನ ೨೦೧೨-೧೩ ನೇ ಸಾಲಿನ ರಾ.ಸೇ.ಯೊ. ಘಟಕದ ಕಾರ್ಯಕ್ರಮಗಳ ಉದ್ಘಟನಾ ಸಮಾರಂಬ ನರೆವೇರಿತು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಮತ್ತು ರಾ.ಸೇ.ಯೋ.ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಉಪನ್ಯಾಸಕರಾದ ಶ್ರೀ ವೀರನಗೌಡ ಸ್ವಾಗತಿಸಿದರು   ಎಸ್.ಡಿ. ಹಿರೇಮಠರವರು ಪ್ರಾಸ್ತಾವಿಕವಾಗಿಮಾತನಾಡಿ ರಾ.ಸೇ ಯೋಜನೆ ರಾಷ್ಟ್ರಪಿತ ಮಹತ್ಮಾ ಗಾಂಧೀಜಿಯವರ ಕನಸಿನ ಕೂಸು ಎಂದು ಯೋಜನೆಯ ಅನುಷ್ಠಾನದ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಆಗಮಿಸಿದ ಡಾ|| ಮಹಾತೇಂಶ ಮಲ್ಲನಗೌಡರ ಇವರು ಮಾತನಾಡಿ ಇಂದಿನ ವಿಧ್ಯಾರ್ಥಿಗಳು  ನೈತಿಕತೆ ಶಿಸ್ತು, ಸಂಯಮ ಗುಣಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಇಂಥ ಸೇವಾ ಘಟಕಗಳಲ್ಲಿ ಭಾಗವಹಿಸುವದರಿಂದ ಇದು ಸಾಧ್ಯ ಎಂದು ನುಡಿದರು ಹಾಗೂ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ|| ವ್ಹಿ.ಬಿ.ರಡ್ಡೇರ್ ರವರು ಮಾತನಾಡಿ ರಾ.ಸೇ.ಯೋ ಮುಖ್ಯ ಧ್ಯೇಯೋದ್ದೇಶಗಳನ್ನು ವಿಧ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. 
ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾದ  ಎಸ್.ಎನ್.ಕಡಪಟ್ಟಿಯವರು, ಪ್ರಾಚಾರ್ಯರಾದ ಎಮ್.ಶಂಶುದ್ದೀನ್,ವ್ಹಿ.ಹೆಚ್. ಮಂಡಸೋಪ್ಪಿ, ಹಳ್ಳೂರ್ ರವಿ ಹಿರಿಯ ಉಪನ್ಯಾಸಕರಾದ ಎಮ್.ಭೂಸನೂರಮಠ, ಶಿಬಿರಾಧಿಕಾರಿಗಳಾದ ಶ್ರೀಮತಿ ಲಲಿತಾ ಅಂಗಡಿ ಸಹ ಶಿಬಿರಾಧಿಕಾರಿಗಳಾದ ಎಸ್.ಡಿ.ಹಿರೇಮಠರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು ಉದ್ಘಾಟನೆಯ ನಂತರ ಕನ್ನಡ ಉಪನ್ಯಾಸಕರಾದ  ಲಿಂಗಣ್ಣ ಮೇಟಿ ಇವರ ರಾ.ಸೇ.ಯೋಜನೆಯ ಪ್ರಮಾಣ ವಚನ ಭೋದಿಸಿದರು ನಂತರ ಕಾಲೇಜಿನ ಉಪನ್ಯಾಸಕರಾದ ಅನ್ವರ ಹುಸೇನ, ಎಸ್.ಎಮ್.ಅಂಗಡಿ, ಶ್ರೀ ಸೋಮನಗೌಡ ಫಾಟೀಲ, ನೃಪತುಂಗ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಸಂಧ್ಯಾ, ಪೂರ್ಣಿಮಾ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕರಾದ  ಎಸ್.ವಿ.ಮೇಳಿ, ಯವರು ಕಾರ್ಯಕ್ರಮವನ್ನು ನಿರೂಪಿಸಿದರು, ಬಸವನಗೌಡ ಪಾಟೀಲ ವಂದಿಸಿದರು.

Advertisement

0 comments:

Post a Comment

 
Top