PLEASE LOGIN TO KANNADANET.COM FOR REGULAR NEWS-UPDATES

ಕರ್ನಾಟಕದ 21ನೆ ಮುಖ್ಯಮಂತ್ರಿ 
ಬೆಂಗಳೂರು, ಜು.12: ರಾಜ್ಯದ 21ನೆ ಮುಖ್ಯಮಂತ್ರಿಯಾಗಿ ಬಿಜೆಪಿಯ ಜಗದೀಶ್ ಶೆಟ್ಟರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಜಗದೀಶ್ ಶೆಟ್ಟರ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಜಗದೀಶ್ ಶೆಟ್ಟರ್ ಜೊತೆಗೆ ಉಪಮುಖ್ಯಮಂತ್ರಿಗಳಾಗಿ ಕೆ.ಎಸ್.ಈಶ್ವರಪ್ಪಹಾಗೂ ಆರ್. ಅಶೋಕ್ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಮುಖ್ಯಮಂತ್ರಿ ಸೇರಿದಂತೆ 32 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಸಂಪುಟದಲ್ಲಿ ಮಂತ್ರಿಗಳಾಗಿದ್ದ 21 ಮಂದಿಯನ್ನು ಸಂಪುಟದಲ್ಲಿ ಹಾಗೆಯೇ ಮುಂದುವರಿಸಲಾಗಿದೆ. ಉಮೇಶ್ ಕತ್ತಿ, ಗೋವಿಂದ ಕಾರಜೋಳ, ಸುರೇಶ್ ಕುಮಾರ್, ಬೊಮ್ಮಾಯಿ, ಉದಾಸಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಶೋಭಾ ಕರಂದ್ಲಾಜೆ, ಸಿ.ಟಿ ರವಿ, ವಿ.ಸೋಮಣ್ಣ, ರೇಣುಕಾಚಾರ್ಯ, ಸಿ.ಪಿ. ಯೋಗೇಶ್ವರ್, ಬಿ.ಎನ್. ಬಚ್ಚೇಗೌಡ, ಮುರುಗೇಶ್ ನಿರಾಣಿ, ರೇವುನಾಯಕ್ ಬೆಳಮಗಿ, ಆನಂದ್ ಆಸ್ನೋಟಿಕರ್, ಎಸ್.ಎ. ರಾಮದಾಸ್, ಎ.ನಾರಾಯಣ್ ಸ್ವಾಮಿ, ರವೀಂದ್ರನಾಥ್, ಬಾಲಚಂದ್ರ ಜಾರಕಿಹೋಳಿ, ಎಸ್.ಕೆ. ಬೆಳ್ಳುಬ್ಬಿ, ರಾಜುಗೌಡ, ಜೀವರಾಜ್, ವರ್ತೂರ್ ಪ್ರಕಾಶ್, ಸೊಗಡು ಶಿವಣ್ಣಾ, ಆನಂದ್ ಸಿಂಗ್, ಕಳಕಪ್ಪ ಬಂಡಿ, ಬಿ.ಜಿ. ಪುಟ್ಟಸ್ವಾಮಿ, ಅರವಿಂದ್ ಲಿಂಬಾವಳಿ, ಅಪ್ಪಚ್ಚು ರಂಜನ್, ಸುನೀಲ್ ವಲ್ಯಾಪೂರೆ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕೋಟ ಶ್ರೀನಿವಾಸ್ ಪೂಜಾರಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ


ಸ್ವಚ್ಚ, ಪಾರದರ್ಶಕ ಆಡಳಿತಕ್ಕೆ ಒತ್ತು: ಜಗದೀಶ್ ಶೆಟ್ಟರ್

ಬೆಂಗಳೂರು, ಜು.12: ಸ್ವಚ್ಚ, ಪಾರದರ್ಶಕ ಅಡಳಿತಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.
ರಾಜ್ಯದ 21ನೆ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಅವರು, ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದರು.
ಬಿಜೆಪಿಯ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಸ್ವಚ್ಚ, ಪಾರದರ್ಶಕ ಆಡಳಿತ ನಡೆಸುತ್ತೇನೆ. ಸಮಗ್ರ ಕರ್ನಾಟಕದ ಸಮಾನ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮತೋಲನ ಸರಿಪಡಿಸಲು ಹೆಚ್ಚಿನ ಆದ್ಯತೆ ನೀಡುತ್ತೇನೆ. ಬರಗಾಲ ಸಮಸ್ಯೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ತಿಳಿಸಿದರು.
ರಾಜ್ಯದ ಜನತೆಯ, ಪಕ್ಷದ ಹಿರಿಯ ನಾಯಕರ ಆಶೀರ್ವಾದ ಮತ್ತು ಎಲ್ಲಾ ಶಾಸಕರ ಸಹಕಾರದಿಂದ ಮುಖ್ಯಮಂತ್ರಿಯಾಗುವಂತಹ ಸುವರ್ಣಾವಕಾಶ ಒದಗಿ ಬಂದಿದೆ ಎಂದು ತಿಳಿಸಿದ ಅವರು, ಯಡಿಯೂರಪ್ಪನವರ ರೈತ ಪರ ಯೋಜನೆಗಳು ಹಾಗೂ ಡಿ.ವಿ. ಸದಾನಂದ ಗೌಡರ ‘ಸಕಾಲ’ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಜಾಗತಿಕ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಕರ್ನಾಟಕ 79ನೆ ಸ್ಥಾನದಲ್ಲಿರುವುದು ಹಾಗೂ ಬೆಂಗಳೂರು ವಿಶ್ವದಲ್ಲಿ 16ನೆ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು, ಸರಕಾರದ ಕಾರ್ಯನಿರ್ವಹಣೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಆದುದರಿಂದ ಮಾಧ್ಯಮಗಳು ಸಹಕಾರ ನೀಡುವಂತೆ ಕೋರಿದರು.

Advertisement

0 comments:

Post a Comment

 
Top