PLEASE LOGIN TO KANNADANET.COM FOR REGULAR NEWS-UPDATES


 :ಇಷ್ಠಲಿಂಗ ಮಹಾಪೂಜಾ, ಚನ್ನಮ್ಮನ ಬಳಗ ಮತ್ತು ಪುರವಂತರ ಸಮಾವೇಶ
ಕೊಪ್ಪಳ, ಜು.೨೬: ಶ್ರೀ ಕೂಡಲ ಸಂಗಮದಲ್ಲಿ ಲಿಂಗಾಯತ ಪಂಚಮಸಾಲಿ ಗುರು ಮಹಾ ಪೀಠದ ಆಶ್ರಯದಲ್ಲಿ ಬಸವಣ್ಣ ನವರ ೮೩೭ನೇ ಲಿಂಗೈಕ್ಯ ಶರಣೋತ್ಸವ ಪ್ರಯುಕ್ತ ೩ನೇಯ ಬಸವ ಪಂಚಮ ಹಾಗೂ ಇಷ್ಠಲಿಂಗ ಮಹಾ ಪೂಜಾ ಸಮಾರಂಭವನ್ನು ಜು. ೨೯ ಭಾನುಮಾರ ಬೇಳಿಗ್ಗೆ೭.೩೦ ಗಂಟೆಗೆ ಹಾಗೂ ೧೧-೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಪಂಚ್ಯ ಸೈನ್ಯ ಲಿಂಗಾಯತ ವಿದ್ಯಾರ್ಥಿ ಪರಿಷತ್, ಚನ್ನಮ್ಮನ ಬಳಗ ಹಾಗೂ ಪುರವಂತರ ಸಮಾವೇ ವನ್ನು ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯು ಂಜಯ ಮಹಾಸ್ವಾಮಿಗಳು ಇವರ ಸಾನಿಧ್ಯದಲ್ಲಿ ಏರ್ಪಡಿ ಸಲಾಯಿತು.
ಈ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು, ಸಮಾಜದ ಮುಂಖಡರು ಜಿಲ್ಲಾ ಘಟಕದ ಹಾಗೂ ತಾಲೂಕ ಘಟಕದ ಪದಾದಿ ಕಾರಿಗಳು ಹಾಗೂ ಪಂಚಮ ಸಾಲಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶ್ವಸಿಗೊಳಿಸುವಂತೆ ಎಂದು ಅ.ಭಾ.ಲಿಂ.ಪಂ. ಟ್ರಸ್ಟ್ ತಾಲೂಕ ಘಟಕದ ಅಧ್ಯಕ್ಷ ದೇವರಾಜ ವಿ. ಹಾಲಸಮುದ್ರ  ಕೋರಿದ್ದಾರೆ.

Advertisement

0 comments:

Post a Comment

 
Top