ಕೊಪ್ಪಳ ಜು. : ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ವರಮಹಾಲಕ್ಷ್ಮಿ ಪೂಜಾ ಹಬ್ಬದ ಅಂಗವಾಗಿ ಜು. ೧೯ ರಿಂದ ೨೧ ರವರೆಗೆ ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಏರ್ಪಡಿಸಿದೆ.
ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆಯನ್ನು ಜು. ೧೯ ರಂದು ಬೆಳಿಗ್ಗೆ ೧೦ ಗಂಟೆಗೆ ಗುಲಬರ್ಗಾ ಪ್ರಾದೇಶಿಕ ಆಯುಕ್ತರಾದ ರತ್ನಪ್ರಭಾ ಅವರು ನೆರವೇರಿಸುವರು. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಇದೇ ಪ್ರಥಮ ಬಾರಿಗೆ ಗಂಗಾವತಿಯಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದು, ಗಂಗಾವತಿಯ ಆನೆಗುಂದಿ ರಸ್ತೆಯಲ್ಲಿರುವ ಸರೋಜಮ್ಮ ಕಲ್ಯಾಣಮಂಟಪದಲ್ಲಿ ಮಾರಾಟ ಮೇಳ ನಡೆಯಲಿದೆ. ವರಮಹಾಲಕ್ಷ್ಮಿ ಪೂಜೆ ಹಬ್ಬದ ಸಡಗರವನ್ನು ಮೈಸೂರು ಸಿಲ್ಕ್ ರೇಷ್ಮೆ ಖರೀದಿಸುವುದರೊಂದಿಗೆ ಆಚರಿಸಲು ಇದು ಉತ್ತಮ ಅವಕಾಶವಾಗಿದ್ದು, ಸರ್ಕಾರಿ ನೌಕರರಿಗೆ ಮೊತ್ತವನ್ನು ೧೦ ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಅರ್ಹ ಸರ್ಕಾರಿ ನೌಕರರು ತಿಂಗಳ ವೇತನದಲ್ಲಿ ಕಂತು ಕಡಿತಗೊಳಿಸುವ ಅಥವಾ ಮುಂದಿನ ದಿನಾಂಕಗಳನ್ನು ನಮೂದಿಸಿದ ೧೦ ಚೆಕ್‌ಗಳನ್ನು ನೀಡುವ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಗಳಲ್ಲದೆ, ಕೆ.ಎಸ್.ಐ.ಸಿ.ಯು ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ ಕ್ರೇಪ್ ಡಿ ಚೈನ್ ಸೀರೆಗಳನ್ನು, ಕಸೂತಿ ಎಂಬ್ರಾಯಿಡರಿ ಸೀರೆಗಳನ್ನು, ಎಲ್.ಪಿ.ಡಿಸೈನ್ ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು, ಟೈಯ್ಸ್, ಸ್ಕಾರ್ಫ್ ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿತಗೊಳಿಸುತ್ತಿದೆ. ಇದಲ್ಲದೆ ನವನವೀನ ವಿವಾಹ ಸಂಗ್ರಹ ಸೀರೆಗಳನ್ನು ಪರಿಚಯಿಸಲಾಗಿದೆ ಹಾಗೂ ಕೆ.ಎಸ್.ಐ.ಸಿ.ಯು ತನ್ನ ಎಲ್ಲಾ ಉತ್ಪನ್ನಗಳ ಮೇಲೆ ಶೇಕಡ ೩೦ ರ ವರೆಗೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಗಿಂತ ಮೈಸೂರ್ ಸಿಲ್ಕ್ ಹೇಗೆ ವಿಭಿನ್ನವಾಗಿದೆ? ಎಂದರೆ! ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಭೌಗೋಳಿಕ ಸುವಾಸನೆಯನ್ನು ನೀಡಿದೆ. ಸಾಂಪ್ರದಾಯಿಕ ರೀತಿಯ ಉತ್ಪಾದನೆ, ಬಟ್ಟೆಯಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ, ಮೈಸೂರ್ ಸಿಲ್ಕ್ ಬಟ್ಟೆಯು ಭಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮವಾಗಿರುವುದಲ್ಲದೆ ಬಟ್ಟೆಗೆ ವಿಶೇಷ ಮೆರುಗನ್ನು ನೀಡಿದೆ. ಮೈಸೂರ್ ಸಿಲ್ಕ್‌ಗೆ ಉಪಯೋಗಿಸಲ್ಪಡುವ ಜರಿಯು ಪರಿಶುದ್ಧ ಚಿನ್ನದ್ದಾಗಿದ್ದು, ಶೇಕಡ ೦.೬೫ ಚಿನ್ನ ಮತ್ತು ಶೇಕಡ ೬೫ ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ. ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನೀಕತೆಯ ಮಿಶ್ರಣವಾಗಿವೆ. .
ಕೆ.ಎಸ್.ಐ.ಸಿ ನಿಗಮಕ್ಕೆ ೨೦೧೦-೧೧ನೇ ಆರ್ಥಿಕ ವರ್ಷದಲ್ಲಿ ಉತ್ಪನ್ನಗಳ ಅತ್ಯುತ್ತಮ ಮಾರಾಟ ನಿರ್ವಹಣೆಗಾಗಿ ಸಾರ್ವಜನಿಕ ಉದ್ದಿಮೆಗಳಿಗೆ ಪ್ರಧಾನ ಮಾಡಲಾಗುವ ಮಾನ್ಯ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ಲಭಿಸಿದೆ ಹಾಗೂ ಈ ವರ್ಷ ಕೆ.ಎಸ್.ಐ.ಸಿ.ಯ ಮೈಸೂರು ರೇಷ್ಮೆ ನೇಯ್ಗೆ ಕಾರ್ಖಾನೆಯು ಶತಮಾನೋತ್ಸವವನ್ನು (೧೯೧೨-೨೦೧೨) ಆಚರಿಸುತ್ತಿದೆ ಕಸೂತಿ ಮೈಸೂರ್ ಸಿಲ್ಕ್ ಸೀರೆಗಳು ಬಹಳ ಮನಮೋಹಕ ಮತ್ತು ಇವುಗಳ ಸೌಂದರ್ಯ ಕಣ್ಸೆಳೆಯುತ್ತವೆ. ಹಿಂದಿನ ಅರಸರು ನಿರ್ಮಿಸಿ ಸಂರಕ್ಷಿಸಲ್ಪಟ್ಟಿದ್ದು, ಸಾಂಪ್ರದಾಯಕ ಶಿಲ್ಪ ವಿನ್ಯಾಸಗಳಿಂದ ಸ್ಫೂರ್ತಿಗೊಂಡ ಮಹಿಳಾ ಕೆಲಸಗಾರರ ಸೂಜಿಯ ಮೊನೆಯಿಂದ ನಿರ್ಮಿಸಲ್ಪಟ್ಟ ಕಸೂತಿ ಕುಸುರಿ ಕೆಲಸ ಮತ್ತು ಮೋಟಿಫ್‌ಗಳಿಂದ ಕೂಡಿವೆ. ಕಸೂತಿ ಕುಸುರಿ ಕೆಲಸವು ಉತ್ತರ ಕರ್ನಾಟಕವು ಸೆರೆಹಿಡಿದ ಅತ್ಯಂತ ಸೂಕ್ಷ್ಮ ವಿವರಗಳ ವಿಸ್ತೀರ್ಣ ಮತ್ತು ಮೋಟಿಫ್‌ಗಳ ಸರಳ ಸ್ಟಿಕ್ಕರ್‌ಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮತಿಳಿಸಿದೆ.
0 comments:
Post a Comment