ಜಿಲ್ಲಾ ಪಂಚಾಯತಿ ಹಿರೇವಂಕಲಕುಂಟಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದ ಜು. ೨೩ ರಂದು ೦೮ ಅಭ್ಯರ್ಥಿಗಳಿಂದ ಒಟ್ಟು ೨೩ ನಾಮಪತ್ರ ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಶರಣಬಸಪ್ಪ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದವರ ವಿವರ ಇಂತಿದೆ. ದಮ್ಮೂರು ಗ್ರಾಮದ ಶರೀಫ್‌ಸಾಬ್ ತಂದೆ ಸಣ್ಣ ಹುಚ್ಚಸಾಬ ವಾಲಿಕಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ೦೧ ನಾಮಪತ್ರ ಸಲ್ಲಿಸಿದ್ದಾರೆ. ಹುಣಸಿಹಾಳ ಗ್ರಾಮದ ಅರವಿಂದ ಶಿವಶರಣಪ್ಪ ಗೌಡ ಪಾಟೀಲ- ಬಿಜೆಪಿ (೦೨), ತಾಳಕೇರಿ ಗ್ರಾಮದ ದುರುಗಪ್ಪ ಅಯ್ಯಪ್ಪ- ಪಕ್ಷೇತರ (೦೪), ಗಾಣದಾಳ ಗ್ರಾಮದ ಶಂಕ್ರಪ್ಪ ಹನುಮಂತಪ್ಪ ಸುರಪುರ- ಕಾಂಗ್ರೇಸ್ (೦೪), ಹಿರೇವಂಕಲಕುಂಟಾ ಗ್ರಾಮದ ಮಲ್ಲಿಕಾರ್ಜುನಪ್ಪ ವಿರುಪಾಕ್ಷಪ್ಪ ಹರ್ಲಾಪುರ- ಪಕ್ಷೇತರ (೦೪), ತಾಳಕೇರಿ ಗ್ರಾಮದ ಭೀಮನಗೌಡ ದೇವೇಂದ್ರಗೌಡ ಗೌಡರ- ಪಕ್ಷೇತರ (೦೪), ಗಾಣದಾಳ ಗ್ರಾಮದ ಹನುಮಪ್ಪ ಯಂಕಪ್ಪ ನಾಗರಾಳ- ಪಕ್ಷೇತರ (೦೩), ಹಾಗೂ ಹುಣಸಿಹಾಳ ಗ್ರಾಮದ ಬುಡ್ಡಪ್ಪ ಓಂಕಾರಪ್ಪ ತಳವಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ೦೧ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಒಟ್ಟು ೦೮ ಅಭ್ಯರ್ಥಿಗಳಿಂದ ೨೩ ನಾಮಪತ್ರ ಸಲ್ಲಿಕೆಯಾದಂತಾಗಿದೆ. ಜು. ೨೪ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಜು. ೨೬ ಕೊನೆಯ ದಿನಾಂಕವಾಗಿದ್ದು, ಮತದಾನದ ಅಗತ್ಯಬಿದ್ದಲ್ಲಿ, ಆಗಸ್ಟ್ ೫ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆ ಆಗಸ್ಟ್ ೮ ರಂದು ಬೆಳಿಗ್ಗೆ ೮ ಗಂಟೆಯಿಂದ ಯಲಬುರ್ಗಾದಲ್ಲಿ ನಡೆಯುವುದು. ಆಗಸ್ಟ್ ೯ ರ ಒಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಶರಣಬಸಪ್ಪ ಅವರು ತಿಳಿಸಿದ್ದಾರೆ.
0 comments:
Post a Comment