ಕೊಪ್ಪಳ,ಜು.೦೨ : ಸೈಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ.ಸೈಯ್ಯದರವರ ೩೧ನೇ ಜನ್ಮ ದಿನದ ಪ್ರಯುಕ್ತ ರವಿವಾರ ಕೊಪ್ಪಳ ನಗರದ ಅವರ ನಿವಾಸದಲ್ಲಿ ಸೈಯ್ಯದ್ ಫೌಂಡೇಶನ್ ಪದಾಧಿಕಾರಿಗಳು ೧೦ ಜನ ಯುವ ಕಾರ್ಯಕರ್ತರು ರಕ್ತದಾನ ಮಾಡಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿದರು.
ನಂತರ ಭಾಗ್ಯನಗರ ರಸ್ತೆಯಲ್ಲಿರುವ ಬಾಲಮಂದಿರದಲ್ಲಿರುವ ಅನಾಥ ಮಕ್ಕಳೊಂದಿಗೆ ಸೇರಿ ಕೆ.ಎಂ.ಸೈಯ್ಯದ್‌ರವರು ತಮ್ಮ ಜನ್ಮ ದಿನಾಚರಣೆಯನ್ನು ಕೇಕ್ ಕಟ್ಟು ಮಾಡುವುದರ ಮೂಲಕ ಮತ್ತು ಅನಾಥ ಮಕ್ಕಳಿಗೆ ತಿನಿಸಿ ಅವರಿಗೆ ಸಮವಸ್ತ್ರ, ಪಠ್ಯ ಪುಸ್ತಕ, ನೀರಿನ ಪಿಲ್ಟರ್ ಟ್ಯಾಂಕ್ ಕೊಡುಗೆಯಾಗಿ ತಮ್ಮ ಫೌಂಡೇಶನ್‌ವತಿಯಿಂದ ನೀಡಿ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡರು. ವಿಶೇಷವಾಗಿ ಅದೇ ಬಾಲ ಮಂದಿರದ ಲತೀಫಪೀರ ಗಂಗಾವತಿ ಎಂಬ ಅನಾಥ ಮಗುವಿನ ಜನ್ಮ ದಿನ ಕೂಡ ಇಂದೇ ಇರುವುದರಿಂದ ಅದೇ ಮಗುವಿನೊಂದಿಗೆ ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಿಕೊಂಡರು. ನಗರದ ಮ್ಯಾದರ ಓಣಿಯಲ್ಲಿ ಮಹಿಳೆಯರು ಸೈಯ್ಯದ್‌ರವರಿಗೆ ಆರತಿ ಎತ್ತುವುದರ ಮೂಲಕ ಶುಭ ಹಾರೈಸಿದರು.
ಸೈಯ್ಯದ್ ಫೌಂಡೇಶನ್ ಪದಾಧಿಕಾರಿಗಳು ಕೊಪ್ಪಳ ನಗರದ ವಿವಿಧ ಬಡಾವಣೆಯಲ್ಲಿ ಅಲ್ಲದೇ ತಾಲೂಕಿನ ಹಲಗೇರಿ, ಮೊರನಾಳ, ಅಳವಂಡಿ, ಕವಲೂರು, ಚಿಲವಾಡಗಿ, ಹುಲಗಿ, ಬಂಡಿಹರ್ಲಾಪುರ ಸೇರಿದಂತೆ ಸುಮಾರು ೩೦ ಕ್ಕೂ ಅಧೀಕ ಕಡೆಗಳಲ್ಲಿ ಅವರ ಅಭಿಮಾನಿಗಳು ಕೇಕ್ ಕಟ್ಟು ಮಾಡುವುದರ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಿದ್ದು, ಒಂದೇಡೆಯಾದರೇ ಕೆಲ ಅಭಿಮಾನಿಗಳು ಅವರನ್ನು ಸನ್ಮಾನಿಸಿ ಜನ್ಮ ದಿನಾಚರಣೆಯನ್ನು ಆಚರಿಸಿದರು. ನಗರದ ಯೂಸುಪಿಯಾ ಮಸೀದಿಯ ಆವರಣದಲ್ಲಿ ಕೂಡ ಪಂಚ್ ಕಮೀಟಿಯವರು, ಮಸೀದಿ ಕಮೀಟಿಯವರು ಸನ್ಮಾನಿಸಿದರು. ಒಟ್ಟಾರೆ ಕೊಪ್ಪಳ ನಗರ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶ ಸೇರಿದಂತೆ ಗಂಗಾವತಿ, ಕಾರಟಗಿ, ಕುಷ್ಟಗಿಯಲ್ಲಿಯೂ ಕೂಡ ಅವರ ಅಭಿಮಾನಿಗಳು ಜನ್ಮ ದಿನಾಚರಣೆ ವಿವಿಧ ರೀತಿಯ ಸಾಮಾಜಿಕ ಸೇವೆಯ ಮೂಲಕ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಕೆ.ಎಂ.ಸೈಯ್ಯದ್ ಸೇರಿದಂತೆ ಶ್ಯಾಮೀದ್ ಸಾಬ ಕಿಲ್ಲೇದಾರ, ಗುಡದಪ್ಪ ಹಲಗೇರಿ, ಅಬ್ದುಲ್ ಅಜೀಜ್, ಎಂ.ಡಿ.ಆಸೀಪ್ ಕರ್ಕಿಹಳ್ಳಿ, ಬಸನಗೌಡ ಡಿ.ಪಾಟೀಲ್ ಹಲಗೇರಿ, ದೇವಪ್ಪ ಮಾಗಳದ್, ಎಚ್ಚಿರೇಶ್ವರ ಶಾಸ್ತ್ರಿ ಅಳವಂಡಿ, ಮಾರುತಿ ಮಾಗಳದ್, ವಸೀಮ್ ಹುಲಗೇರಿ, ಗೌಸ್ ಲಕ್ಕುಂಡಿ, ಅಜ್ಮೀರ್ ಬಂಡಿ ಹರ್ಲಾಪುರ ಅಲ್ಲದೇ ಕೆ.ಎಂ.ಸೈಯ್ಯದ್‌ರವರ ತಂದೆಯವರಾದ ಹಾಜಿ ಮೈಬೂಬ ಅಲಿ ಮತ್ತು ಅವರ ಕುಟುಂಬ ವರ್ಗ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಡ ನಿರ್ಗತಿಕರಿಗೆ ವಿವಿಧ ರೀತಿಯ ಸಹಾಯ, ಸೌಕರ್ಯಗಳನ್ನು ಒದಗಿಸುವುದರ ಮೂಲಕ ವಿನೂತನ ಮಾದರಿಯ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡರು. ನಂತರ ಸಂಜೆ ಅವರ ನಿವಾಸದಲ್ಲಿ ಬಹಿರಂಗ ಕಾರ್ಯಕ್ರಮ ಜರುಗಿತು. ಕೇಕ್ ಕಟ್ಟು ಮಾಡುವುದರ ಮೂಲಕ ತಮ್ಮ ೩೧ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು.
0 comments:
Post a Comment