PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ : ದಿ ೨೪ ರಂದು ನಗರದ ೨೬ ನೇ ವರ್ಡಿನಲ್ಲಿ ೨೦೧೧-೧೨ ರ ಸಾಲಿನಲ್ಲಿ ಮಂಜೂರಾದ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಹಾಗೂ ನಗರ ನೈರಮಲ್ಯ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮಹಿಳಾ ಶಚಾಲಯವನ್ನು ಶಾಸಕರಾದ ಕರಡಿಯವರು ಹಾಗೂ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳರವರು ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಶಾಸಕ ಸಂಗಣ್ಣನವರು ಕೊಪ್ಪಳದಲ್ಲಿ ನೀರಿನ, ರಸ್ತೆ, ಚರಂಡಿವ್ಯವಸ್ಥೇಯ ಸಮಸ್ಯೆಗಳಿದ್ದು. ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆಗಳನ್ನು ಭಗೆಹರಿಸಲಾಗುವದೆಂದು ಹೇಳಿದರು. ಅಧ್ಯಕ್ಷೀಯ ಭಾಷಣ ಮಾಡಿದ ಕೆ. ಬಸವರಾಜ ಹಿಟ್ನಾಳ ಮಾತನಾಡಿ ಕೊಪ್ಪಳ ತಾಲೂಕನ್ನು ಬೆಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಕೊಪ್ಪಳನಗರದ ಜ್ವಲಂತ ಸಮಸ್ಯೆಗಳ ಪರೊಹಾರಕ್ಕೆ ಸರಕಾರ ಮುಂದಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಎಸ್.ಬಿ. ನಾಗರಳ್ಳಿ, ಸುರೇಶ ದೇಸಾಯಿ, ಜುಲ್ಲು ಖಾದರಿ, ಇಂದಿರಾ ಭಾವಿಕಟ್ಟಿ, ಕಾಟನ್ ಪಾಷಾ, ವೀರಣ್ಣ ಹಂಚಿನಾಳ , ಮಾನ್ವಿಪಾಷಾ, ಗವಿಶಿದ್ದಪ್ಪ ಮುದಗಲ್, ನಗರಸಭೆಯ ಆಯುಕ್ತರಾದ ಶ್ರೀಮತಿ ಅಶ್ವೀನಿ, ಹಾಗೂ ವಾರ್ಡಿನ ಅನೇಕಜನರು ಉಪಸ್ಥಿತರಿದ್ದು ವಾರ್ಡಿನ ಸದಸ್ಯರಾದ ಜಾಕೀರ ಹುಸೇನ ಕಿಲ್ಲೆದಾರ ಕಾರ್ಯಕ್ರಮ ನಿರೂಪಿಸಿ, ದುರಗೇಶಪ್ಪ  ವಂದಿಸಿದರು. 

Advertisement

0 comments:

Post a Comment

 
Top