PLEASE LOGIN TO KANNADANET.COM FOR REGULAR NEWS-UPDATES




ಮಾರ್ಚ್ 2ರಂದು ಬೆಂಗಳೂರು ನಗರದ ಸಿಟಿ ಸಿವಿಲ್ ಕೊರ್ಟ್ ಆವರಣದಲ್ಲಿ ಬೆಳಗ್ಗೆ 11ರಿಂದ ರಾತ್ರಿ 7ರವರೆಗೆ ನಡೆದ ಘಟನೆ ಯಾವುದೇ ಕಾರಣಕ್ಕೆ ನಡೆದಿದ್ದರೂ,ಜನ ಸಾಮಾನ್ಯರು,ಮಾನವ ಹಕ್ಕುಗಳಲ್ಲಿ ನಂಬಿಕೆ ಹೊಂದಿರುವವರು,ಅದನ್ನು ಖಂಡಿಸಲೇಬೇಕು.ಇದು ನಾನು ಕೇವಲ ಒಬ್ಬ ವಕೀಲನಾಗಿ ಮಾತನಾಡುತ್ತಿಲ್ಲ, ಮಾಧ್ಯಮ ವಿದ್ಯಾರ್ಥಿಗಳಿಗೆ ಪಾಠಮಾಡುವ ಒಬ್ಬ ಶಿಕ್ಷಕನಾಗಿಯೂ,ಮಾನವಹಕ್ಕುಗಳಿಗೆ ಹೋರಾಟ ಮಾಡುತ್ತಿರುವ ವ್ಯಕ್ತಿಯಾಗಿಯೂ,ಈ ಮಾತನ್ನು ಹೇಳ ಬಯಸುತ್ತಿದ್ದೇನೆ.ಮಾರ್ಚ್ 2ರ ಘಟನೆಯನ್ನು ನಾನು ಯಾವುದೇ ರೀತಿಯಲ್ಲಿಯೂ (ವಕೀಲರು, ಪತ್ರಕರ್ತರು, ಪೊಲೀ ಸರು) ಸಮರ್ಥಿಸುತ್ತಿಲ್ಲ.ಯಾರನ್ನು ಸಹ ದೂಷಿಸಲು ಹೊರಟಲ್ಲಿ, ಎಲ್ಲಿಯೋ ಒಂದು ಕಡೆ ನಾವು ದಾರಿ ತಪ್ಪಿದ್ದೇವೆ ಅದು ತಪ್ಪಿದ್ದು ಎಲ್ಲಿ? ಅದು ಬೆಳೆದಿದ್ದು ಎಲ್ಲಿಗೆ? ಎಂಬುದಷ್ಟನ್ನೇ ಇಲ್ಲಿ ಅವಲೋಕಿಸ ಬಯಸುತ್ತೇನೆ.ಅದಕ್ಕೂ ಮೊದಲು ಈ ಘಟನೆಯಿಂದ ಕೇವಲ ಕೆಲ ಪತ್ರಕರ್ತರಷ್ಟೇ ಅಲ್ಲ ನೂರಾರು ವಕೀಲರು ಹಾಗು ಪೊಲೀಸರು ಗಾಯಗೊಂಡಿದ್ದಾರೆ ಎಂಬುದನ್ನು ಪ್ರಸ್ತಾಪಿಸು ವುದು ಸೂಕ್ತವೆಂದು ಬಯಸುತ್ತೇನೆ.
ಮಾರ್ಚ್ 2ರಂದು ಬೆಳಗ್ಗೆ 11ಘಂಟೆಗೆ ನಡೆದ ಘಟನೆಗೂ, ಇಡೀ ದಿನ ವಕೀಲರ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೂ ಆನಂತರ ಬಹುಪಾಲು ಮಾಧ್ಯಮದವರು ಬಳಸಿದ ಅಸಂಬದ್ಧ ಪದಗಳಿಗೂ, ಇಡೀ ವಕೀಲ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೂ, ನನ್ನ ಪ್ರಕಾರ ಯಾವುದೇ ಸಂಬಂಧವಿಲ್ಲ್ಲ.ಘಟನೆ ಪ್ರಾರಂಭವಾದಾಗ ನಾನಿನ್ನು ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದೆ, ಕೆಲ ಸ್ನೇಹಿತರು ಪೋನ್ ಮಾಡಿ ಘಟನೆಯ ವಿಷಯ ತಿಳಿಸಿದರು.ಟಿವಿಯಲ್ಲಿ ನ್ಯೂಸ್ ಬರುತ್ತಿದೆ ನೋಡಿ ಎಂದರು.
ಕಾಲೇಜಿನಲ್ಲಿ ಟಿವಿ ಸೆಟ್ ಆನ್ ಮಾಡಿ ನ್ಯೂಸ್ ನೋಡಿದ ನನಗೆ ಮಾಧ್ಯಮದವರ ಮೇಲೆ ನಡೆದ ಹಲ್ಲೆಗೆ ನೋವಾಯಿತು, ಮನಸಿನಲ್ಲಿ ನನ್ನ ವಕೀಲ ಬಾಂಧವರನ್ನು ಬೈದು ಈ ಸಮಯದಲ್ಲಿ ಕೋರ್ಟ್‌ಗೆ ಹೋಗುವುದು ಬೇಡವೆಂದು ಕೊಂಡು ಕಾಲೇಜಿನಲ್ಲಿ ನಿಂತೆ.ಮಾಧ್ಯಮ ಆ ವೇಳೆಗಾಗಲೆ ತನ್ನ ಬಾಂಧವರ ಮೇಲೆ ನಡೆದ ಹಲ್ಲೆಯನ್ನು ಪದೇ ಪದೇ ಬಿತ್ತರಿಸಿ ವಕೀಲರನ್ನು ನಿಂದಿಸುತ್ತಿತ್ತು, ಪೊಲೀಸರು ಸತ್ತ ವಿಷಯವನ್ನು ಪ್ಲ್ಯಾಶ್ ಮಾಡುತ್ತಿದ್ದರು, ಆದರೆ ವಕೀಲರ ಮೇಲೆ ಆಗಿರ ಬಹುದಾದ ಹಲ್ಲೆ ಯಾವ ಚಾನಲ್‌ಗಳಲ್ಲಿಯೂ ಬರುತ್ತಿರಲಿಲ್ಲ. ಬಹುಷ ಗಲಾಟೆ ಮುಗಿದಿರಬಹುದು ಎಂದು ಭಾವಿಸಿ, ಮಧ್ಯಾಹ್ನದ ವೇಳೆಗೆ ಕಾಲೇಜಿನಿಂದ ಹೊರಟು ಕೆ.ಅರ್.ಸರ್ಕಲ್ ಬಳಿ ಬಂದು ನೋಡಿದೆ.ನೂರಾರು ಪೊಲೀಸರು, ಮಾಧ್ಯಮದವರು ಅಲ್ಲಿ ಇದ್ದುದು ನನ್ನ ಕಣ್ಣಿಗೆ ಬಿತ್ತು.
ಇಂದು ನಾನು ನನ್ನ ಕಾರನ್ನು ತಂದಿರಲಿಲ್ಲ ಹಾಗಾಗಿ ನನ್ನ ಕಾರಿನಲ್ಲಿ ವಕೀಲರ ಸಿಂಬಲ್ ಇರಲಿಲ್ಲ. ಸಾಮಾನ್ಯವಾಗಿ ನಾನು ನನ್ನ ಯೂನಿಫಾರಂ ಆಫೀಸಿನಲ್ಲಿ ಬದಲಿಸುವುದರಿಂದ ನಾನು ಯೂನಿಫಾರಂನಲ್ಲಿಯೂ ಇರಲಿಲ್ಲ. ಇದು ಅಲ್ಲಿ ನೆರೆದಿದ್ದ ಮಾಧ್ಯಮ ಮತ್ತು ಪೊಲೀಸರು ನನ್ನನ್ನು ವಕೀಲನೆಂದು ಗುರುತಿಸಲು ಸಾಧ್ಯವಾಗಲಿಲ್ಲ.ಅಲ್ಲಿಂದ ನಾನು ಸಿಟಿ ಸಿವಿಲ್ ಕೋರ್ಟ್ ಬಳಿಗೆ ಬಂದಾಗ ಕೆಲ ವಕೀಲರು ಗಾಯಾಳುಗಳನ್ನು ಕರೆದು ಕೊಂಡು ಹೋಗುತ್ತಿದ್ದರು.ನಾನು ಸಿಟಿ ಸಿವಿಲ್ ಕೋರ್ಟ್‌ನ ಕಾರುಗಳು ಪ್ರವೇಶಿಸುವ ದ್ವಾರಕ್ಕೆ ಬಂದಾಗ ಅಲ್ಲಿಂದ ಮೈಸೂರು ಬ್ಯಾಂಕ್ ಸರ್ಕಲ್‌ವರೆಗೂ ಅನೇಕ ಪೊಲೀಸರು ನಿಂತಿರು ವುದನ್ನು ಗಮನಿಸಿದೆ.
ಅಲ್ಲಿ ನ್ಯಾಯಾಲಯದ ಕಟ್ಟಡಗಳ ಸಂಕೀರ್ಣದಿಂದ ಹೊರ ಹೋಗುವ ಜನರಲ್ಲಿ ವಕೀಲರನ್ನು ಗುರುತಿಸಿ ಆವರಿಗೆ ಹೊಡೆಯುವುದನ್ನು ನೋಡಿ ತುಂಬಾ ಬೇಸರವಾಯಿತು.ಸದ್ಯಕ್ಕೆ ಅಲ್ಲಿದ್ದವರು ನನ್ನನ್ನು ವಕೀಲ ನೆಂದು ಯಾರೂ ಗುರುತಿಸಲ್ಲಿಲ್ಲ ನಾನು ಬಚಾವ್ ಆದೆ.ಅಲ್ಲಿಂದ ಗಾಂಧೀನಗರಕ್ಕೆ ನನ್ನ ಆಫೀಸ್ ಕಡೆಗೆ ಬಂದಾಗ ಕಂಡಿದ್ದು ಮಾತ್ರ ಮತ್ತ್ತೂ ಭಯಂಕರ. ಆನೇಕ ವಕೀಲರು ಪೋಲಿಸರ ಲಾಠಿ ಏಟಿನ ರುಚಿ ಕಂಡಿದ್ದರು ಕೆಲವರು ಕೈಗಳಲ್ಲಿ ಕಾಲುಗಳಲ್ಲಿ, ತಲೆಯಲ್ಲಿ ರಕ್ತ ಸೋರುತ್ತಿತ್ತು. ಅವರಲ್ಲಿ ಕೆಲವರನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟೆ. ನಂತರ ಕಾರನ್ನು ಆಫೀಸಿನ ಬಳಿ ನಿಲ್ಲಿಸಿ ಮತ್ತೆ ನನ್ನ ಕೆಲ ವಕೀಲ ಸ್ನೇಹಿತರನ್ನು ಕರೆದು ಕೊಂಡು ಸಿಟಿ ಸಿವಿಲ್ ನ್ಯಾಯಾಲಯದ ಎದುರು ಇರುವ ವಿಶ್ವವಿದ್ಯಾಲಯದ ಅವರಣದಲ್ಲಿ ನಿಂತು ಮೂಕ ಪ್ರೇಕ್ಷಕನಂತೆ ಸಂಜೆ 7 ಘಂಟೆಯವರೆಗೂ ಅಸಹಾಯಕನಾಗಿ ನೋಡುತ್ತಾ ನಿಂತೆ.
ಪೊಲೀಸರ, ಮಾಧ್ಯಮದವರ ಅಟ್ಟಹಾಸ ಮುಗಿಲು ಮುಟ್ಟುತ್ತಿತ್ತು.ವಕೀಲರ ಕಾರುಗಳಿಗೆ ಬೆಂಕಿ ಹಾಕಿದ್ದು, ಕಾರು- ಬೈಕುಗಳನ್ನು ಜಖಂಗೊಳಿಸಿದ್ದು.......ಬಹುಪಾಲು ಜನರಿಗೆ ಬೆಳಗ್ಗೆ ನೆಡೆದಿದ್ದು ಮಾತ್ರ ತಿಳಿದಿರುವುದರಿಂದ, ಇಲ್ಲಿ ನಾನು ಕಂಡಿದ್ದನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೇನೆ.
ಹಿನ್ನೆಲೆ
ಘಟನೆ ಹೇಗಾಯಿತು? ಯಾರು ಕಾರಣ? ಯಾಕೆ ಇದು ಸಂಜೆ 7 ಘಂಟೆಯವರೆಗೂ ನಿರಂತರವಾಗಿ ನಡೆಯಿತು? ಎಂಬುದು ಮುಖ್ಯವಲ್ಲ, ನಾನು ಈಗಾಗಲೇ ತಿಳಿಸಿರುವಂತೆ ಇದು ಬೆಳಗ್ಗೆ ನಡೆದ ಘಟನೆ ಆನಂತರದ ಸನ್ನಿವೇಶಕ್ಕ್ಕೆ ಕಾರಣವಲ್ಲ. ಇದಕ್ಕೆ ಕಾರಣ ಸೆಪ್ಟಂಬರ್ 9, 2011 ಕನ್ನಡ ಚಿತ್ರನಟ ದರ್ಶನ ಹಾಗೂ ಅತನ ಹೆಂಡತಿಯ ಜಗಳ ಹಾಗೂ ದರ್ಶನ್‌ರನ್ನು ಬಂಧಿಸಿದ್ದಂದು ಅತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಮಯದಲ್ಲಿ ಬೆಂಗಳೂರು ಮಾಜಿಸ್ಟ್ರೇಟ್ ಆವರಣದಲ್ಲಿ ನಡೆದ ಒಂದು ಸಣ್ಣ ಘಟನೆ.ಅಂದು ಮಾಧ್ಯಮದವರ ವಾಹನ ವಕೀಲರ ವಾಹನಕ್ಕೆ ಬಡಿದು ತೊಂದರೆ ಯಾಯಿತು ಎಂಬುದು ವಕೀಲರ ವಾದ.ಅನಂತರ ಎಲ್ಲಾ ಮಾಧ್ಯಮದವರ ಓಬಿ ವಾಹನಗಳನ್ನು ನ್ಯಾಯಾಲಯದ ಆವರಣದಿಂದ ಹೊರಹಾಕಲಾಯಿತು, ಅಂದಿನಿಂದಲೂ ವಕೀಲರ ಮೇಲೆ ಮಾಧ್ಯಮದವರ ಅಸಹನೆ ಇತ್ತು ದ್ವೇಷ ಕಾರುತ್ತಿದ್ದರು.
ಜನವರಿ 14ರಂದು ತ್ಯಾಗರಾಜ ನಗರ ಪೊಲೀಸರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಿದಾಗ ಆ ವ್ಯಕ್ತಿ ನಾನು ವಕೀಲನೆಂದು ಪೊಲೀಸರೊಂದಿಗೆ ಜಗಳ ಮಾಡಿದ್ದು ನಂತರ ಪೊಲೀಸರು ಅತನನ್ನು ಠಾಣೆಗೆ ಕರೆದುಕೊಂಡು ಠಾಣೆಯಲ್ಲಿ ಥಳಿಸಿ ನಂತರ ಆತನ ಮೇಲೆ ಕೇಸು ಹಾಕಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ವಿಷಯ ಜನವರಿ 17ರಂದು ವಕೀಲರಿಗೆ ತಿಳಿದಿದೆ. ಇದರ ನಂತರ ಜನವರಿ 17ರಂದು ನ್ಯಾಯಾಲಯ ಬಹಿಷ್ಕರಿಸಿ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಮಧಾಹ್ನ 12ರಿಂದ ಸಂಜೆ 7ರವರೆಗೆ ಧರಣಿ ನಡೆಸಿದ ವಿಷಯವನ್ನು ಮಾಧ್ಯಮದಲ್ಲಿ ಬಹಳ ಕೆಟ್ಟದಾಗಿ ಬಿಂಬಿಸಿದ್ದರು. ಇದು ವಕೀಲರನ್ನು ನಿಜಕ್ಕೂ ಕೆರಳಿಸಿತ್ತು. ಇನ್ನು ಮುಂದೆ ನ್ಯಾಯಾಲಯದ ಆವರಣಕ್ಕೆ ಇವರ ಓಬಿವ್ಯಾನ್ ಗಳನ್ನು ಬಿಡಬಾರದು ಎಂದು ವಕೀಲರು ಸಹ ತೀರ್ಮಾನಿಸಿದ್ದರು. ಅಷ್ಟೇ ಅಲ್ಲ ಈ ಘಟನೆ ಪೊಲೀಸರನ್ನೂ ಸಹ ಕೆರಳಿಸಿತ್ತು.
ಪೊಲೀಸರು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು.ಇವರೆಲ್ಲರಿಗೂ ಮಾರ್ಚ್ 2 ಸರಿ ಯಾದ ಸಮಯವಾಗಿತ್ತು. ಪೊಲೀಸರಿಗೆ ತಮ್ಮ ಸೇಡು ತೀರಿಸಿಕೊಳ್ಳಲು ಇಂದು ಅವರ ಮೇಲೆ ಯಾವುದೂ ಆರೋಪಗಳಿರಲಿಲ್ಲ, ಮಾಧ್ಯಮದವರಿಗೂ ವಕೀಲ ರಿಗೂ ಉಂಟಾದ ಘರ್ಷಣೆಯನ್ನು ಸರಿಯಾಗಿ ಉಪಯೋಗಿಸಿದ ಪೊಲೀಸರು ವಕೀಲರ ಮೇಲೆ ಲಾಟಿಯಿಂದ ಒಂದು ಕಡೆ, ಮಾಧ್ಯಮದವರು ಮಾಧ್ಯಮದ ಮುಖಾಂತರ ಮತ್ತೊಂದು ಕಡೆ ಅಷ್ಟೇ ಕೆಟ್ಟದಾಗಿ ವಕೀಲರನ್ನು ಜನಸಾಮಾನ್ಯರ ಮುಂದೆ ಬಿತ್ತರಿಸಿದವು.

ವೃತ್ತಿ ಧರ್ಮ ಮರೆತವರು:ವಕೀಲರಾಗಿ ವಕೀಲರು, ಪತ್ರಕರ್ತರಾಗಿ ಪತ್ರಕರ್ತರು, ಪೊಲೀಸರಾಗಿ ಪೊಲೀಸರು ಎಲ್ಲರೂ ತಮ್ಮ ವೃತ್ತಿ ಧರ್ಮವನ್ನು ಮರೆತಿದ್ದಾರೆ. ಒಂದು ವೇಳೆ ಪತ್ರಕರ್ತರು ವಕೀಲರನ್ನು ನಿಂದನೆ ಮಾಡಿದ್ದರೆ, ಅದಕ್ಕೆ ತಕ್ಕ ಉತ್ತರವನ್ನು ತಮ್ಮ ಕರಿಕೋಟಿನಲ್ಲಿರುವ ಲೇಖನಿಯಿಂದಲೆ ವಕೀಲರು ಉತ್ತರಕೊಡಬಹುದಿತ್ತು. ಅವರಿಗೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಅಥವ ಸಂಬಂಧ ಪಟ್ಟ ಪೋರಂಗಳಲ್ಲಿ ತಮ್ಮ ವಾದವನ್ನು ಮಂಡಿಸಿ ತಮಗಾದ ತೊಂದರೆ ಯನ್ನು ಬಗೆಹರಿಸಬಹುದಿತ್ತು.ಆದೇ ರೀತಿ ಜನವರಿ 14ರಂದು ಪೊಲೀಸರು ವಕೀಲರ ಮೇಲೆ ನಡೆಸಿದ ದೌರ್ಜನ್ಯವನ್ನು ನ್ಯಾಯಾಲಯದ ಮುಂದೆ ವಿವರಿಸಬಹುದಿತ್ತು. ಫೊಲೀಸರ ಮೇಲೆ ಕೇಸು ದಾಖಲು ಮಾಡಬಹುದಿತ್ತು. ಮಾನವ ಹಕ್ಕುಗಳ ಆಯೋಗಕ್ಕೆ ಈ ವಿಷಯ ವನ್ನು ತರಬಹುದಿತ್ತು.

ಹಾಗೂ ವಕೀಲರ ಸಂಘದಲ್ಲಿ ಈ ವಿಷಯವನ್ನು ಚರ್ಚಿಸಿ ವಕೀಲರ ಸಂಘದ ಪದಾಧಿಕಾರಿಗಳು ಮಾನ್ಯ ಗೃಹ ಮಂತ್ರಿಗಳೊಂದಿಗೆ ಮಾತನಾಡಿ ಸಂಬಂಧ ಪಟ್ಟ ಪೊಲೀಸರನ್ನು ಅಮಾನತ್ತಿನಲ್ಲಿಡಲು ಸೂಚಿಸಬಹುದಿತ್ತು, ಇದಕ್ಕೆ ಸುಮಾರು 7 ಘಂಟೆಗಳ ಸಮಯ ರಸ್ತೆ ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ. ಕೇವಲ ಒಬ್ಬ ಪೋಲಿಸ್ ಪೇದೆಯನ್ನು ಅಮಾನತ್ತು ಮಾಡಿಸಲು ಇಷ್ಟೊಂದು ಜನಸಾಗರ ಬೀದಿಗಿಳಿಯುವ ಪರಿಸ್ಥಿತಿ ನಮ್ಮ ವಕೀಲ ಸಂಘಕ್ಕೆ ಬರಬಾರದಿತ್ತು. ನನ್ನ ಮಟ್ಟಿಗೆ ಇದು ಒಬ್ಬ ಗೃಹ ಮಂತ್ರಿಯನ್ನೋ, ಮುಖ್ಯ ಮಂತ್ರಿಯನ್ನೋ, ಪದಚ್ಯುತಿಗೊಳಿಸಲು ಮಾಡ ಬಹುದಾದ ಹೋರಾಟ.
ಅಷ್ಟೇ ಅಲ್ಲ ಜನವರಿ 17ರ ಘಟನೆ ವಕೀಲರ ಸಂಘ ಏಷ್ಟು ಅಶಕ್ತವಾಗಿದೆ ಎಂಬುದನ್ನು ಸೂಚಿಸುತ್ತದೆಯೇ ಹೊರೆತು ಬೇರೆನನ್ನೂ ಅಲ್ಲ.ಇದಕ್ಕೂ ಮುಖ್ಯವಾಗಿ ವಕೀಲಿ ವೃತ್ತಿ ಮಾಡುತ್ತಿರುವ ವಕೀಲ ತನಗೆ ಪೋಲಿಸರಿಂದ ನಡೆದ ದೌರ್ಜನ್ಯವನ್ನು ನ್ಯಾಯಾದೀಶರ ಮುಂದೆ ತನ್ನನ್ನು ಹಾಜರು ಪಡಿಸಿದಾಗ ಹೇಳದೇ ಇರುವುದು ಮತ್ತೊಂದು ವಿಪರ್ಯಾಸ. ಇದು ಅವರು ಅವರ ವೃತ್ತಿ ಧರ್ಮಕ್ಕೇ ಮಾಡಿದ ಅವಮಾನ. ಈ ಎಲ್ಲಾ ಘಟನೆಗಳನ್ನು ರಾಜ್ಯ ವಕೀಲರ ಪರಿಷದ್ ತಮಗೆ ಸಂಬಂಧವೇ ಇಲ್ಲವೆಂದು ಸುಮ್ಮನೇ ಕುಳಿತಿರುವುದು ಸಹ ಮಾರ್ಚ್ 2ರ ಘಟನೆ ನೆಡೆಯಲು ಕಾರಣವಾಯಿತು.
ಇನ್ನು ಪರ್ತಕರ್ತರು, ಅವರ ಬಗ್ಗೆ ನನಗೆ ಹೆಚ್ಚಿಗೆ ಎನನ್ನು ಹೇಳಲು ಬಯಸುವುದಿಲ್ಲ ಕಾರಣ ಸಪ್ಟಂಬರ್ 9ರ ಘಟನೆಯನ್ನು ಮನಸ್ಸಿನಲ್ಲಿ ಇಟ್ಟು ಕೊಂಡು ಜನವರಿ 17ರಂದು ವಕೀಲರ ವಿರುದ್ದ ಏನೆಲ್ಲಾ ಬರೆದಿದ್ದು, ಹೆಳೀದ್ದು ಅವರು ಅವರ ವೃತ್ತಿಧರ್ಮವನ್ನು ಮರೆತಿರುವುದನ್ನು ತೊರಿಸುತ್ತದೆ.ಅದರೆ ಜೊತೆಗೆ ಹಿಂಸೆಯನ್ನೇ ಬಂಡವಾಳ,ಸರಕಾರದ ಜಾಹಿರಾತುಗಳೂ,ಸೌಲಭ್ಯಗಳನ್ನೇ ಅದಾರವಾಗಿ ಹಿಟ್ಟುಕೊಂಡಿರುವ ಮಾಧ್ಯಮ ನಡೆದು ಕೊಂಡ ರೀತಿ ಕಿಂಚಿತ್ತೂ ಸರಿ ಇಲ್ಲ. ಕೇವಲ 4 ಜನ ವಕೀಲರು ಒಬ್ಬ ಪತ್ರಕರ್ತನನ್ನು ಥಳಿಸಿದ್ದು ಮಾತ್ರ ಸುಮಾರು 4 ದಿನಗಳ ಸಮಯ ತೋರಿಸಿದ ಇವರು, ಈ ಘಟನೆಗೂ ಮುಂಚೆ ಅಥವ ನಂತರದ ಯಾವ ಬೆಳವಣಿಗೆಯನ್ನು ಸಹ ಅವರು ಜನರ ಮುಂದಿಡದೆ ಅಪರಾಧವನ್ನು ಮಾಡಿದ್ದಾರೆ.ಅಷ್ಟೇ ಅಲ್ಲದೆ, ಸುಳ್ಳು ಸುದ್ದಿಯನ್ನು, ನಿಜವೆಂದು ಬಿತ್ತರಿಸಿ ಪೊಲೀಸರು ಉದ್ವೇಗಗೊಂಡು ವಕೀಲರನ್ನು ರಾತ್ರಿ 7 ಘಂಟೆಯವರೆಗೂ ಥಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
false reportage, fuelling rumours ಮತ್ತು provocative headlinesಗಳ ಮೂಲಕ ಹೇಟ್ ಸ್ಫೀಚ್ ಮಾಡಿ Rule 6 and Rule 7 of the Cable Television Network Rules, 1994 (Rule 6(i)-“criticises, maligns or slanders any individual in person or certain groups, segments of  social, public and moral life of the country”, and Rule 7(2) (ii)  -“tends to incite people to crime, cause disorder or violence or breach of law or glorifies violence or obscenity in any way”) ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅಷ್ಟೇ ಅಲ್ಲದೆ Norms of Journalistic Conduct, 1996 issued by the Press Council of India (constituted under the Press of India Act, 1978)  ಸಹ ಗಾಳಿಗೆ ತೂರಿದ್ದಾರೆ.
ಜೊತೆಗೆ ಭಾರತೀಯ ದಂಡ ಸಂಹಿತೆ 153(ಅ) , ಹಾಗು 505 ರಡಿಯಲ್ಲಿ ಅಪರಾಧಗಳನ್ನು ಮಾಡಿದ್ದಾರೆ, ಜನತೆಗೆ ತಪ್ಪು ಸಂದೇಶವನ್ನು ನೀಡಿದ್ದಾರೆ ಜನರಿಗೆ ಅನ್ಯಾಯ ಮಾಡಿದ್ದಾರೆ.ಇನ್ನು ಯಾವುದೋ ಮಾಧ್ಯಮದಲ್ಲಿ ಪ್ರಸಾರವಾದ ಪೊಲೀಸ್ ಪೇದೆ ಸಾವು, ಪೊಲೀಸರನ್ನು ವಕೀಲರು ಅಪಹರಿಸಿದ್ದಾರೆ, ಅಥವಾ ಪೊಲೀಸರ ಕಣ್ಣುಗಳನ್ನು ಕಿತ್ತು ಹಾಕಿದ್ದಾರೆ ಎಂಬ ಕೇವಲ ಸುಳ್ಳು ಸುದ್ದಿಯನ್ನು ನಿಜವೆಂದು ನಂಬಿ ಅದನ್ನೇ ಅಸ್ತ್ರವಾಗಿ ಉಪಯೋಗಿಸಿ ವಕೀಲರ ಮೇಲೆ, ನ್ಯಾಯಾದೀಶರ ಮೇಲೆ ನೆಡೆಸಿದ ಹಲ್ಲೆ ಖಂಡಿತವಾಗಿಯೂ ಅನವಶ್ಯಕ, ಹಾಗೆಯೇ ವಕೀಲರ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವುದನ್ನು, ವಾಹನಗಳ ಮೇಲೆ ಪೋಲಿಸರ ದಾಳಿಗಳನ್ನು ನಗರ ಪೋಲಿಸ್ ಅಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹಾಗು ಉಪ ಅಯುಕ್ತ ಸುನೀಲ್ ಕುಮಾರ್ ನನ್ನಂತೆಯೇ ಮೂಕಪ್ರೇಕ್ಷಕರಾದರೆ ವರೆತು ಅದನ್ನು ತಡೆಯುವ ಗೋಜಿಗೂ ಹೋಗಲಿಲ್ಲ ಎಂಬುದು ವಿಪರ್ಯಾಸ.

ಈ ರಾಜ್ಯದಲ್ಲಿ ಸರಕಾರ ನಿಜಕ್ಕೂ ಇದೆಯೇ ಎಂಬ ಪ್ರಶ್ನೇ ನಿಜಕ್ಕೂ ನನ್ನನ್ನೂ ಸೇರಿದಂತೆ ಅನೇಕರಿಗೆ ಕಾಡುತ್ತಿದೆ ಎಂದು ನಾನು ಭಾವಿಸುತ್ತೇನೆ. ಎಕೆಂದರೆ ಈ ಸರಕಾರಕ್ಕೆ ಸಮಸ್ಯೆಯನ್ನು ಬಗೆಹರಿಸುವ ಬಗೆಯೇ ತಿಳಿದಂತಿಲ್ಲ. ಸಪ್ಟೆಂಬರ್‌ನಿಂದ ಇಂದಿನವರೆಗೂ ಸರಕಾರ ಈ ಸಮಸ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಸುಮ್ಮನೆ ಕುಳಿತಿತ್ತು. ಅದು ಜನವರಿ 17ರ ಘಟನೆ ನಡೆದ ನಂತರವೇ ಈ ಸಮಸ್ಯೆಯನ್ನು ಬಗೆ ಹರಿಸಬೇಕಿತ್ತು ಅದರೆ ತಮ್ಮ ರಾಜಕೀಯ ಒಳಜಗಳದಲ್ಲಿ ನಿರತರಾಗಿರುವ ರಾಜಕಾರಣಿಗಳು ಈ ಯಾವುದರ ಗೋಜಿಗೂ ಹೋಗಲಿಲ್ಲ. ಅದೇನೆ ಇರಲಿ ಈಗಲಾದರೂ ಈ ಮೂರು ಸಮುದಾಯಗಳು ಎಚ್ಚೆತ್ತು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ನೆಡೆಯುವ ಅವಶ್ಯಕತೆ ಇದೆ  varthabharati   ಬ್ಯಾತ ಎನ್. ಜಗದೀಶ

Advertisement

0 comments:

Post a Comment

 
Top