PLEASE LOGIN TO KANNADANET.COM FOR REGULAR NEWS-UPDATES





ದಿ.೨-೩-೨೦೧೨ ರಂದು ಬೆಂಗಳೂರಿನ ನಗರದ ಕೋರ್ಟ ಆವರಣದಲ್ಲಿ ವಕೀಲರು ಪೋಲೀಸರು ಹಾಗೂ ಮಾಧ್ಯಮದವರ ಮೇಲೆ ನಡೆಸಿದ ಗೂಂಡಾಗಿರಿಯನ್ನು ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್ ಮುಂಡರಗಿ ಭೀಮರಾಯ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ಪತ್ರಕರ್ತರು ಘೋಷಣೆ ಕೂಗುತ್ತಾ ತಹಶೀಲ್ದಾರ ಕಚೇರಿಗೆ ಆಗಮಿಸಿದರು.  ಕೈಗೆ ಕಪ್ಪು ಪಟ್ಟಿಕೊಂಡು ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು.
ವಕೀಲರು ನ್ಯಾಯಾಂಗ ವ್ಯವಸ್ಥೆಯನ್ನೇ ಧಿಕ್ಕರಿಸಿ  ಮಾಧ್ಯಮದವರು ಮತ್ತು ಪೊಲೀಸರ ಹಾಗೂ ಸಾರ್ವಜನಿಕರ ಮೇಲೆ ನಡೆಸುತ್ತಿರುವ ದುರ್ವರ್ತನೆ ಖಂಡನೀಯ. ಮೂರು ತಿಂಗಳ ಹಿಂದೆ ಇದೇ ರೀತಿ ಪೋಲಿಸರ ಮೇಲೆ ಹಲ್ಲೆ ನಡೆಸಿ ಅನಧಿಕೃತವಾಘಿ ಬೆಂಗಳೂರು ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಪ್ರಕರಣ ಇನ್ನೂ ಹಸಿಯಿರುವಾಗಲೇ ಇಂದು ಅದಕ್ಕಿಂತಲೂ ಅಮಾನುಷವಾಗಿ ವರ್ತಿಸಿ ಡಿಸಿಪಿ ತಲೆಯೊಡದದ್ದಲ್ಲದೇ ಸಾಕಷ್ಟು ಪೋಲೀಸರಿಗೆ ಗಾಯಗೊಳಿಸಿ ಮಾಧ್ಯಮವದವರ ಮೇಲೆ ಮತ್ತು ಕ್ಯಾಮರಾಮೆನ್ ಮೇಲೆ ಪೈಶಾಚಿಕವಾಗಿ ವರ್ತಿಸಿ ಇಡೀ ರಾಜ್ಯದ ಜನತೆಯೇ ರೊಚ್ಚಿಗೇಳುವಂತೆ ಮಾಡಿದ್ದಾರೆ. ಕಾಯ್ದೆ ಕಾನೂನು ಕಾಪಾಡಲು ಹೋರಾಡುವ ವಕೀಲರೇ ಈ ರೀತಿ ಆ ಕಾಯ್ದೆಗಳನ್ನು ಮೀರಿ  ತಾಲೀಬಾನಿಗಳಂತೆ ವರ್ತಿಸಿದ್ದು ಜನರಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಕಳೆದ ಬಾರಿಯೇ ಈ ರೀತಿ ವರ್ತಿಸಿದಾಗ ಸರಕಾರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿದ್ದರೆ ಈ ರೀತಿ ಪುನರಾವರ್ತನೆಯಾಗುತ್ತಿರಲಿಲ್ಲ. ಇದರಿಂದ ಸರಕಾರವೇ ದೌರ್ಜನ್ಯಕ್ಕೆ ಬಾಗಿದಂತಾಗಿದೆ. ಇನ್ನಾದರೂ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಇಡೀ ರಾಜ್ಯದ ಜನತೆಯೇ ಎದ್ದು ನಿಂತು ಇಂಥವರಿಗೆ ಬುದ್ದಿಕಲಿಸಲು ಮುಂದಾದರೆ ಅರಾಜಕತೆ ಉಂಟಾಗುತ್ತದೆ. ಅದಕ್ಕೆ ಅವಕಾಶ ಕೊಡದಂತೆ ಕೂಡಲೇ ಸರಕಾರ ಇದೆ ಎನ್ನುವದನ್ನು ಸಾಭೀತು ಪಡಿಸಲಿ  ಎಂದು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಹಿರಿಯ ಪತ್ರಕರ್ತರಾದ ವಿಠ್ಠಪ್ಪ ಗೋರಂಟ್ಲಿ, ಶರಣಪ್ಪ ಬಾಚಲಾಪೂರ, ಬಸವರಾಜ ಶೀಲವಂತರ, ಎನ್.ಎನ್.ಎಂ.ಪ್ಯಾಟಿ ಹಾಗೂ ಮೀಡಿಯಾ ಕ್ಲಬ್ ಅಧ್ಯಕ್ಷರಾದ ಸೋಮರಡ್ಡಿ ಅಳವಂಡಿ ಮಾತನಾಡಿದರು.
ಈ ಸಂದರ್ಭದಲ್ಲಿ  ದೊಡ್ಡೇಶ ಎಲಿಗಾರ, ಹುಸೇನ್ ಪಾಷಾ, ಮಲ್ಲಿಕಾರ್ಜುನ ಸ್ವಾಮಿ, ಗುರುರಾಜ , ರಮೇಶ ತುಪ್ಪದ, ತಿಪ್ಪನಗೌಡ ಪಾಟೀಲ್, ನಾಬೀರಾಜ್ ದಸ್ತೇನವರ, ನಾಗರಾಜ ಎಸ್ ಹಿರೇಮಠ, ಎನ್.ಜಿ.ಬೆಲ್ಲದ್, ಮಾರುತಿ ಕಟ್ಟಿಮನಿ, ಗುರುರಾಜ ಡಂಬಳ, ಅಮಿತ್, ಶರಣಬಸಪ್ಪ ಹುಲಿಹೈದರ್, ಶಂಕರ್, ಗಂಗಾಧರ ಬಂಡಿಹಾಳ, ವಾಸಿಂ ಭಾವಿಮನಿ, ಮೌನೇಶ ಬಡಿಗೇರ, ಜಯಂತ್ ಹಿರೇಮಠ, ಈರಣ್ಣ ಬಡಿಗೇರ, ಸಿರಾಜ್ ಬಿಸರಳ್ಳಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top