PLEASE LOGIN TO KANNADANET.COM FOR REGULAR NEWS-UPDATES


 | ಭ್ರಷ್ಟಾಚಾರ: ಯಥಾ ರಾಜಾ ತಥಾ ಪ್ರಜಾ; ಸಿಬಿಐ ನಿರ್ದೇಶಕ ಸಿಂಗ್ ಬಣ್ಣನೆ 

ಹೊಸದಿಲ್ಲಿ,ಫೆ.13:ಭಾರತೀಯರು ವಿದೇಶಿ ಬ್ಯಾಂಕ್‌ಗಳ ಅತಿ ದೊಡ್ಡ ಠೇವಣಿದಾರರಾಗಿದ್ದು, ತೆರಿಗೆ ಸ್ವರ್ಗದಲ್ಲಿ ಅವರು ರಾಶಿ ಹಾಕಿರುವ ಅನಧಿಕೃತ ಸಂಪತ್ತು ಬರೋಬ್ಬರಿ 500ಬಿಲಿಯನ್ ಅಮೆರಿಕನ್ ಡಾಲರ್(ಸುಮಾರು ರೂ.24.5ಲಕ್ಷ ಕೋಟಿ)ಎಂದು ಅಂದಾಜಿಸಲಾಗಿದೆಯೆಂದು ಸಿಬಿಐ ನಿದೇಶಕರು ಇಂದಿಲ್ಲಿ ಹೇಳಿದ್ದಾರೆ.

ಮಾಂಶಸ್,ಸ್ವಿಝರ್ಲೇಂಡ್,ಲಿಚ್ಟೆನ್ ಸ್ಟೀನ್,ಬ್ರಿಟಿಷ್ ವರ್ಜಿನ್ ದ್ವೀಪ ಇತ್ಯಾದಿ ತೆರಿಗೆ ಸ್ವರ್ಗಗಳಿಗೆ ನಿಧಿಯ ಹರಿವಿನಿಂದಾಗಿ ಮುಖ್ಯವಾಗಿ ಭಾರತ ಬಹಳಷ್ಟು ಬಾಧಿತವಾಗಿದೆ.

ಭಾರತೀಯರಿಗೆ ಸೇರಿದ ಸುಮಾರು 500ಬಿಲಿಯ ಡಾಲರ್ ಅನಧಿಕೃತ ಹಣ ವಿದೇಶಗಳ ತೆರಿಗೆ ಸ್ವರ್ಗದಲ್ಲಿ ಠೇವಣಿಯಿರಿಸಲಾಗಿದೆಯೆಂದು ಅಂದಾಜಿಸಲಾಗಿದೆ.ಸ್ವಿಸ್ ಬ್ಯಾಂಕಿನ ಅತಿ ಹೆಚ್ಚು ಠೇವಣಿದಾರರು ಭಾರತೀಯರೇ ಎಂದು ವರದಿಯಾಗಿದೆ ಎಂದು ಭ್ರಷ್ಟಾಚಾರ ತಡೆ ಹಾಗೂ ಆಸ್ತಿ ಶೋಧದ ಕುರಿತಾದ ಮೊದಲ ಇಂಟರ್ಪೋಲ್ ಜಾಗತಿಕ ಕಾರ್ಯಕ್ರಮವೊಂದರ ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ತಿಳಿಸಿದರು.

ಅಂತಹ ಠೇವಣಿಗಳಿರುವ ದೇಶಕ್ಕೆ ನ್ಯಾಯಾಂಗ ಮನವಿಯೊಂದನ್ನು ಕಳುಹಿಸಿ ತನಿಖೆದಾರರು ಪ್ರತಿ ಪದರವನ್ನು ಕೀಳ ಬೇಕಾಗಿರುವುದರಿಂದ ಇದೊಂದು ಸಮಯಾವಕಾಶ ಬೇಡುವ ಪ್ರಕ್ರಿಯೆಯಾಗಿದೆಯೆಂದು ಅವರು ಹೇಳಿದರು.

ಟ್ರಾನ್ಸ್‌ಪರೆನ್ಸಿ ಇಂಟರ್ನ್ಯಾಶನಲ್ ಇಂಡೆಕ್ಸ್ ಅತಿ ಕಡಿಮೆ ಭ್ರಷ್ಟವೆಂದು ವರದಿ ಮಾಡಿರುವ ಶೇ. 53ರಷ್ಟು ದೇಶಗಳು ಸಾಗರೋತ್ತರ ತೆರಿಗೆ ಸ್ವರ್ಗಗಳಾಗಿದ್ದು, ಹೆಚ್ಚಿನ ಭ್ರಷ್ಟ ಸಂಪತ್ತು ಅಲ್ಲಿಗೆ ಹರಿಯುತ್ತದೆ.ತೆರಿಗೆ ಸ್ವರ್ಗಗಳಾದ ನ್ಯೂಝಿಲೇಂಡ್ ಅತ್ಯಂತ ಕಡಿಮೆ ಭ್ರಷ್ಟ ದೇಶ ಎನ್ನಲಾಗಿದ್ದು, ಸಿಂಗಾಪುರ 5ನೆ ಹಾಗೂ ಸ್ವಿಝರ್ಲೇಂಡ್ 7ನೆ ಸ್ಥಾನಗಳಲ್ಲಿವೆಯೆಂದು ಅಇಂಗ್ ತಿಳಿಸಿದರು.

ಬಡ ದೇಶಗಳಿಂದ ಹರಿದು ಬರುವ ಅನಧಿಕೃತ ಸಂಪತ್ತಿನಿಂದ ತಮ್ಮ ಆರ್ಥಿಕತೆ ಎಷ್ಟು ಪ್ರಗತಿಯಾಗಿದೆಯೆಂಬ ಅರಿವಿರುವುದರಿಂದಾಗಿ,ಈ ದೇಶಗಳು ಅನಧಿಕೃತ ಸಂಪತ್ತಿನ ಬಗ್ಗೆ ಮಾಹಿತಿ ಹಂಚಿಕೊಳ್ಳುವ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುವುದಿಲ್ಲವೆಂದು ಅವರು ಅಭಿಪ್ರಾಯಿಸಿದರು.

ಕಪ್ಪು ಹಣವನ್ನು ಪತ್ತೆ ಹಚ್ಚುವುದು, ಸ್ತಂಭಿಸುವುದು, ಮುಟ್ಟುಗೋಲು ಹಾಕುವುದು ಹಾಗೂ ಮರಳಿ ದೇಶಕ್ಕೆ ತರುವುದು ಒಂದು ಕಾನೂನು ಸವಾಲಾಗಿದ್ದು, ಪರಿಣತಿ ಹಾಗೂ ರಾಜಕೀಯ ಇಚ್ಛಾಶಕ್ತಿ ಬಯಸುವ ಜಟಿಲ ಪ್ರಕ್ರಿಯೆಯಾಗಿದೆಯೆಂದು ಸಿಬಿಐ ನಿರ್ದೇಶಕ ತಿಳಿಸಿದರು.

ಸಂಪತ್ತು ಪತ್ತೆ ಹಚ್ಚುವಿಕೆಗೆ ಅನೇಕ ಅಡೆತಡೆಗಳಿವೆ.ಇದೊಂದು ವಿಳಂಬ ಹಾಗೂ ಅನಿಶ್ಚಿತತೆ ತುಂಬಿರುವ ವಿಶೇಷ ನ್ಯಾಯಾಂಗ ಪ್ರಕ್ರಿಯೆ ಮಾತ್ರವಲ್ಲದೆ,ವಿದೇಶಗಳೊಂದಿಗೆ ಕೆಲಸ ಮಾಡುವಾಗ ಭಾಷಾ ಸಮಸ್ಯೆ ಹಾಗೂ ವಿಶ್ವಾಸದ ಕೊರತೆಯೂ ಇರುತ್ತದೆಂದು ಅವರು ವಿವರಿಸಿದರು.


ಜಾಗತಿಕ ಆರ್ಥಿಕ ಮಾರುಕಟ್ಟೆಗಳು ಹಣದ ಹರಿವು ತ್ವರಿತವಾಗಿ ನಡೆಯಲು ಅವಕಾಶ ನೀಡುತ್ತವೆ.ಹಾಗೂ ಅದರ ಮೂಲವನ್ನು ಪತ್ತೆ ಹಚ್ಚುವುದನ್ನು ಹೆಚ್ಚು ಕಷ್ಟಕರವಾಗಿಸುತ್ತವೆ. ಅದಕ್ಕಾಗಿ ಇಂಟಪೋಲ್‌ಗೆ ಇಂತಹ ಜಾಗತೀಕ ತರಬೇತಿ ಕಾರ್ಯಕ್ರಮ ಅಗತ್ಯವೆಂದು ಕಂಡುಬಂದಿದೆ. ಇಂತಹ ತರಬೇತಿಯಿಂದ ತನಿಖೆದಾರರಿಗೆ ಭ್ರಷ್ಟ ಹಾಗೂ ಕ್ರಿಮಿನಲ್ ಕೃತ್ಯಗಳ ಮೂಲಕ ಸೃಷ್ಟಿಸಲಾದ ಸಂಪತ್ತನ್ನು ಪತ್ತೆ ಹಚ್ಚುವ ಜ್ಞಾನ ಪ್ರಾಪ್ತವಾಗುತ್ತದೆ ಎಂದು ಸಿಂಗ್ ಹೇಳಿದರು.

ಕ್ರಿಮಿನಲ್‌ಗಳು ತನಿಖೆ ಸಂಸ್ಥೆಗಳ ಪ್ರಾದೇಶಿಕ ಸಮಸ್ಯೆಗಳನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಂಡು ಕನಿಷ್ಠ ಎರಡು ದೇಶಗಳಲ್ಲಿ ತಮ್ಮ ಕ್ರಿಮಿನಲ್ ಚಟುವಟಿಕೆಗಳನ್ನು ಹರಡುತ್ತಾರೆ ಹಾಗೂ ಮೂರನೆಯ ದೇಶದಲ್ಲಿ ಹಣದ ಹೂಡಿಕೆ ಮಾಡುತ್ತಾರೆಂದು ಅವರು ತಿಳಿಸಿದರು.

ಇತ್ತೀಚೆಗೆ ಸಿಬಿಐ ತನಿಖೆ ನಡೆಸಿರುವ 2ಜಿ,ಸಿಡಬ್ಲೂಜಿ ಹಾಗೂ ಮಧುಕೋಡಾ ಪ್ರಕರಣಗಳಂತಹವುಗಳಲ್ಲಿ ಹಣವನ್ನು ದುಬೈ,ಸಿಂಗಾಪುರ,ಮಾರಿಶಸ್‌ಗಳಿಗೆ ಸಾಗಿಸಿ ಅಲ್ಲಿಂದ ಸ್ವಿಝರ್ಲೇಂಡ್ ಅಥವಾ ಇತರ ತೆರಿಗೆ ಸ್ವರ್ಗಗಳಿಗೆ ರವಾನೆಯಾಗಿದೆಯೆಂಬುದು ತನಿಖೆಯಿಂದ ತಿಳಿದು ಬಂದಿದೆಯೆಂದು ಸಿಬಿಐ ನಿರ್ದೇಶಕ ಹೇಳಿದರು.

ಬ್ಯಾಂಕಿಂಗ್ ವ್ಯವಹಾರಕ್ಕೆ ಎಲ್ಲೆಯಿಲ್ಲದಿರುವುದರಿಂದ ಕ್ರಿಮಿನಲ್‌ಗಳು ಕೆಲವು ನಾಮಪತ್ರ ಕಂಪೆನಿಗಳನ್ನು ಸ್ಥಾಪಿಸಿ,ಕೆಲವೇ ತಾಸುಗಳಲ್ಲಿ ಹಂತ ಹಂತವಾಗಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸುತ್ತಾರೆಂದು ಅವರು ಬಹಿರಂಗಪಡಿಸಿದರು.

ಕ್ರಿಮಿನಲ್ ಚಟುವಟಿಕೆ ಹಾಗೂ ತೆರಿಗೆಗಳ್ಳತನದಿಂದ ಗಡಿಯಾಚೆ ಹರಿಯುವ ಹಣ ಸುಮಾರು. 1.5ಟ್ರಿಲಿಯನ್ ಅಮೆರಿಕನ್ ಡಾಲರ್(1.5ಲಕ್ಷಕೋಟಿ ಡಾ.)ಎಂದು ವಿಶ್ವಬ್ಯಾಂಕ್ ಅಂದಾಜಿಸಿದ್ದು,ಇದರಲ್ಲಿ 40ಶತಕೋಟಿ ಡಾಲರ್‌ಗಳನ್ನು ಅಭಿವೃದ್ಧಿಶೀಲ ದೇಶಗಳ ಸರಕಾರಿ ನೌಕರರಿಗೆ ಲಂಚವಾಗಿ ನೀಡಲಾಗಿದೆಯೆಂದು ಸಂಗ್ ತಿಳಿಸಿದರು.

ಕಳೆದ 15ವರ್ಷಗಳಲ್ಲಿ ಈ ಹಣದಿಂದ ಕೇವಲ 5ಶತಕೋಟಿ ಡಾಲರ್‌ಗಳನ್ನಷ್ಟೆ ಸ್ವದೇಶಕ್ಕೆ ತರಲಾಗಿದೆಯೆಂಬ ವರದಿಯನ್ನು ಅವರು ಉಲ್ಲೇಖಿಸಿದರು.

ಭ್ರಷ್ಟಾಚಾರ: ಯಥಾ ರಾಜಾ ತಥಾ ಪ್ರಜಾ; ಸಿಬಿಐ ನಿರ್ದೇಶಕ ಸಿಂಗ್ ಬಣ್ಣನೆ


ಭ್ರಷ್ಟಾಚಾರ: ಯಥಾ ರಾಜಾ ತಥಾ ಪ್ರಜಾ; ಸಿಬಿಐ ನಿರ್ದೇಶಕ ಸಿಂಗ್ ಬಣ್ಣನೆ

ಹೊಸದಿಲ್ಲಿ,:ಭ್ರಷ್ಟಾಚಾರ ಆಡಳಿತದ ಪ್ರಮುಖ ಮತ್ತು ಗಂಭೀರ ವಿಚಾರವೆಂದಿರುವ ಸಿಬಿಐ ನಿರ್ದೇಶಕ ಎ.ಪಿ.ಸಿಂಗ್,ಭಾರತೀಯ ಧರ್ಮಗ್ರಂಥದಲ್ಲಿ ಉಲ್ಲೇಖಿಸಿರುದಂತೆ ಅದು ‘ಯಥಾ ರಾಜಾ ತಥಾ ಪ್ರಜಾ’ ಎಂದು ಬಣ್ಣಿಸಿದ್ದಾರೆ.
ಯಾವುದೇ ಸಮಾಜದಲ್ಲಿ ಆಡಳಿತದಲ್ಲಿನ ನೈತಿಕತೆ ಉತ್ತಮ ಆಡಳಿತದ ಪ್ರಮುಖ ಕೀಲಿಯಾಗಿರುತ್ತದೆ,ಹಾಗಾಗಿ ರಾಜನ ಆಡಳಿತ ಹೇಗಿರುತ್ತದೋ ಹಾಗೆಯೇ ಪ್ರಜೆಗಳು ನಡೆದುಕೊಳ್ಳುತ್ತಾರೆ ಎಂದರು.

ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಮತ್ತು ಆಸ್ತಿ ವಶಗಳ ಮೇಲಿನ ಮೊದಲ ಇಂಟರ್‌ಪೋಲ್ ಜಾಗತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿಂದು ಮಾತನಾಡುತ್ತಿದ್ದ ಅವರು,ಭ್ರಷ್ಟಾಚಾರ ಆಡಳಿತದ ಪ್ರಮುಖ ವಿಷಯವಾಗಿದ್ದು,ಅದರ ವಿರುದ್ಧ ಹೋರಾಡಲು ಯಾವುದೇ ಒಂದು ಪರಿಹಾರವಿಲ್ಲ.ಹಾಗಾಗಿ ಅದರ ವಿರುದ್ಧ ಹಲವಾರು ಹಂತಗಳಲ್ಲಿ ಹೋರಾಟ ಮಾಡಬೇಕಿದೆ ಎಂದರು.

ಆಡಳಿತಾತ್ಮಕ ವ್ಯವಸ್ಥೆ ಮತ್ತು ಕಾರ್ಯವಿಧಾನಗಳು ಅಪಾರದರ್ಶಕತೆ,ಸಂಕೀರ್ಣ ಕೇಂದ್ರೀಕೃತ ವಾಗಿರುವುದರಿಂದ ಭ್ರಷ್ಟಾಚಾರ ಬೆಳೆಯಲು ಫಲವತ್ತಾಗಿದೆ.ಆದುದರಿಂದ ಅಭಿವೃದ್ಧಿ ಯೋಜನೆಗಳ ವಿನ್ಯಾಸಗಳಲ್ಲಿ ಹೆಚ್ಚು ಪಾರದರ್ಶಕವಾಗಿ ಮತ್ತು ಹೊಣೆಗಾರಿಕೆ ಇರುವಂತೆ ಮಾಡಬೇಕಿದೆ ಎಂದರು.

ಹಣ ಹರಿವಿನ ಹೊಸ ವಿಧಾನಗಳು ಮತ್ತು ಸಂಪರ್ಕ ತಂತ್ರಜ್ಞಾನಗಳು ಭ್ರಷ್ಟರಿಗೆ ತಮ್ಮ ಕದ್ದ ಸಂಪತ್ತನ್ನು ಭದ್ರಪಡಿಸಲು ಸುಲಭವಾಗಿರುವುದು ಒಂದೆಡೆಯಾದರೆ,ಮತ್ತೊಂದು ಕಡೆ ಕಾನೂನು ವ್ಯವಸ್ಥೆಯಲ್ಲಿನ ಭಿನ್ನಾಭಿಪ್ರಾಯಗಳು,ತನಿಖೆಯಲ್ಲಿನ ಸಮನ್ವಯತೆ ಕೊರತೆ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಕವಾಗಿರದ ಸಹಕಾರ ಹಾಗೂ ಬ್ಯಾಂಕುಗಳ ಗೌಪ್ಯತೆ ಮೊದಲಾದವುಗಳು ಭ್ರಷ್ಟಾಚಾರ ವಿರೋಧಿ ಪ್ರಾಧಿಕಾರಗಳಿಗೆ ಕಠಿಣ ಸವಾಲಾಗಿದೆ ಎಂದರು.

ಕದ್ದ ಸಂಪತ್ತುಗಳನ್ನು ಪತ್ತೆ ಮಾಡುವುದು,ಪರಿಶೀಲಿಸುವುದು,ಮುಟ್ಟುಗೋಲು ಹಾಕುವುದು ಮತ್ತು ಅದನ್ನು ತರವುದು ಬಹುದೊಡ್ಡ ಕಾನೂನು ಸವಾಲಾಗಿದೆ,ಆಸ್ತಿ ವಶಪಡಿಸಿಕೊಳ್ಳುವ ತನಿಖೆ ಸಂಕೀರ್ಣತೆಯಿಂದ ಕೂಡಿದ್ದು,ಇವುಗಳಿಗೆ ಸಾಕಷ್ಟು ಸಮಯ ಮತ್ತು ಹಣ ವ್ಯಯವಾಗುತ್ತದೆ. ಹಾಗಾಗಿ ಇವುಗಳನ್ನು ಹೋಗಲಾಡಿ ಸಲು ತಜ್ಞತೆ ಮತ್ತು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂದು ಸಿಂಗ್ ಅಭಿಪ್ರಾಯಿಸಿದರು

Advertisement

0 comments:

Post a Comment

 
Top