PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ,  ಕೇಂದ್ರ ಸರ್ಕಾರದ ಅರೆ ಸೇನಾದಳಗಳಾದ ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್ ಬಿ. ಐಟಿಬಿಪಿಗಳಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮ್ಯಾನ್‌ಗಳ ನೇಮಕಾತಿ -೨೦೧೨ ಕ್ಕೆ ಸಿಬ್ಬಂದಿ ನೇಮಕಾತಿ ಆಯೋಗವು ನೇಮಕಾತಿ ನಡೆಸಲಿದೆ.
೧೫೦೦ ರಿಂದ ೩೦೦೦ ಖಾಲಿ ಹುದ್ದೆಗಳಿಗೆ ಕರ್ನಾಟಕದ ಯುವಕರಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ೧೮ ವರ್ಷಗಳಿಂದ ೨೩ ವರ್ಷ ವಯೋಮೀತಿಯಲ್ಲಿರುವ (೧-೮-೮೯ ರ ನಂತರ ಮತ್ತು ೧-೮-೧೯೯೪ ರ ಮೊದಲು ಹುಟ್ಟಿದವರು) ಮತ್ತು ಅಂಗೀಕೃತ ಮಂಡಳಿ/ ವಿಶ್ವವಿದ್ಯಾಲಯದಿಂದ ೧೦ನೇ ತರಗತಿ ತೇರ್ಗಡೆ ಹೊಂದಿರುವ (೪-೧-೨೦೧೨ ರಂದು) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ದೈಹಿಕ ಕ್ಷಮತೆ: ಎತ್ತರ ೧೭೦ ಸೆಂಮಿ.- ಪುರುಷರು ೧೫೭ ಸೆಂ.ಮಿ.- ಮಹಿಳೆಯರು ಮತ್ತು ಎದೆಯ ಸುತ್ತಳತೆ ಸಂಕುಚಿತ ೮೦ ಸೆಂ.ಮಿ (ಪುರುಷರಿಗೆ) ತೂಕವು ವೈದ್ಯಕೀಯ ನಿಯಮಾನುಸಾರ ಎತ್ತರ ವಯಸ್ಸಿಗನುಗುಣವಾಗಿ ಇರಬೇಕು. ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು (ಉದ್ದಜಿಗಿತದ) ಫಬ್ರವರಿ ಮಾರ್ಚ್ ೨೦೧೨ ರಲ್ಲಿ ನಡೆಸಲಾಗುತ್ತದೆ. ಇದರಲ್ಲಿ ತೇರ್ಗಡೆ ಹೊಂದಿದ ಎಲ್ಲರಿಗೂ ೨೦೧೨ ರ ಏಪ್ರಿಲ್ ೨೨, ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಬಹು ಆಯ್ಕೆ ಮಾದರಿಯ ೧೦೦ ಅಂಕಗಳ ಒಂದು ಪ್ರಶ್ನೆ ಪತ್ರಿಕೆಯಿದ್ದು, ಎಸ್‌ಎಸ್‌ಎಲ್‌ಸಿ ಮಟ್ಟದ ಸಾಮಾನ್ಯ ಬುದ್ದಿವಂತಿಕೆ, ತಾರ್ಕಿಕ ಆಲೋಚನಾ ಸಾಮರ್ಥ್ಯ ಸಮಾನ್ಯ ಜ್ಞಾನ ಮತ್ತು ಪ್ರಾಥಮಿಕ ಶಾಲಾ ಮಟ್ಟದ ಗಣಿತ ಮತ್ತು ಇಂಗ್ಲೀಷ ಅಥವಾ ಹಿಂದಿ ವಿಷಯ ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಜೂನ್-ಜುಲೈ ೨೦೧೨ ರಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸಿ ಆಯ್ಕೆಪಟ್ಟಿ ಸಿದ್ಧಗೊಳಿಸಲಾಗುತ್ತದೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ಬಹುತೇಕ ಆಯಾ ಪ್ರದೇಶದಲ್ಲೇ ಉದ್ಯೋಗ ನೀಡಲಾಗುತ್ತದೆ. ಅಭ್ಯರ್ಥಿಗಳು ಕೇವಲ ಒಂದು ಅರ್ಜಿಯನ್ನಷ್ಠೆ ಕಳುಹಿಸಬೇಕು. ಮತ್ತು ಅರ್ಜಿಯಲ್ಲಿ ತಾವು ಆಯ್ಕೆ ಮಾಡಿಕೊಳ್ಳಲು ಬಯಸುವ ವಿವಿಧ ಪಡೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡಬೇಕು.
ಅರ್ಜಿ ಫಾರಂಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಎಸ್‌ಪಿ ಕಚೇರಿಗಳಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೧-೪-೨೦೧೨ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ವಿಭಾಗೀಯ ನಿರ್ದೇಶಕರು, ಸಿಬ್ಬಂದ ನೇಮಕಾತಿ ಆಯೋಗ (ಕೆಕೆಆರ್) ಮೊದಲನೇ ಮಹಡಿ ಇ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು -೩೪  http://ssconlice.nice.in  CxÀªÁ  cregistration.sifyitest.com  ªÀÄÆ®PÀ Cfð ¸À°è¸À§ºÀÄzÀÄ. Cfð ¥sÁgÀA ªÀÄvÀÄÛ ¥ÀÆtð ªÀiÁ»wAiÀÄ£ÀÄß £ÉêÀÄPÁw DAiÉÆÃUÀzÀ ªÉ¨ï ¸ÉÊmï http://ssc.nic.in  CxÀªÁ http://ssckkr.kar.nic.in 
 ಇಲ್ಲಿಗೆ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು    ಪಡೆಯಬಹುದು  ಅಥವಾ ಸಹಾಯವಾಣಿ ಸಂಖ್ಯೆ:  ೯೪೮೩೮-೬೨೦೧೦, ೯೪೮೩೮-೬೨೦೨೦ ಅನ್ನು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ.



Advertisement

0 comments:

Post a Comment

 
Top