PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಡಿ.  ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಒದಗಿಸಲಾಗಿರುವ ಕುಡಿಯುವ ನೀರಿನ ನಳಕ್ಕೆ ಮೋಟಾರು ಅಳವಡಿಸಿಕೊಂಡು ನೀರನ್ನು ಬಳಸುತ್ತಿರುವುದು ಕಂಡುಬಂದಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.
  ಗಂಗಾವತಿ ನಗರಕ್ಕೆ ತುಂಗಭದ್ರಾ ನದಿಯಿಂದ ಹಾಗೂ ಕೊಳವೆ ಬಾವಿಗಳಿಂದ ವಿದ್ಯುತ್ ಯಂತ್ರಗಳ ಮೂಲಕ ಅಪಾರ ಪ್ರಮಾಣದಲ್ಲಿ ನೀರನ್ನು ಪೂರೈಸಲಾಗುತ್ತಿದ್ದರೂ ನಗರದಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತಿದೆ.  ಇದರಿಂದ ನಗರದ ನಾಗರಿಕರಿಗೆ ತೃಪ್ತಿಕರ ನೀರು ಪೂರೈಸುವ ನಗರಸಭೆಯ ಶ್ರಮ ವ್ಯರ್ಥವಾಗುತ್ತಿದೆ.  ಈ ಕುರಿತು ಪರಿಶೀಲಿಸಿದಾಗ ನಗರದ ಕೆಲವು ಪ್ರದೇಶ, ವಾರ್ಡ್‌ಗಳಲ್ಲಿ ನಳದ ಸಂಪರ್ಕಕಕ್ಕೆ ಮೋಟಾರ್ ಹಚ್ಚುವದು ಹಾಗೂ ಅಗತ್ಯಕ್ಕೆ ತಕ್ಕಂತೆ ನೀರು ಸಾಕಾದಾಗ, ನಳದ ನೀರನ್ನು ಚರಂಡಿಗೆ ಬಿಟ್ಟು ವ್ಯರ್ಥ ಪೋಲು ಮಾಡುವುದು ಕಂಡುಬಂದಿದೆ.  ಈ ನಡವಳಿಕೆ ಕರ್ನಾಟಕ ಪುರಸಭೆ ನಿಯಮಕ್ಕೆ ವಿರುದ್ಧವಾಗಿದೆ ಅಲ್ಲದೆ ನಾಗರೀಕರಿಗೆ ನೀರಿನ ಅಭಾವ ಸೃಷ್ಟಿಸುವ, ನಾಗರೀಕರು ನೀರಿನ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.  ನೀರು ಅನ್ಯಥಾ ಪೋಲಾಗುವುದನ್ನು ರಕ್ಷಣೆ ಮಾಡುವುದಲ್ಲದೆ, ವಿದ್ಯುತ್ ಮೋಟಾರುಗಳನ್ನು ಅಳವಡಿಸದಿರಲು ಸೂಚಿಸಲಾಗಿದೆ.  ಇನ್ನು ಮುಂದೆ ಈ ರೀತಿ ಕಂಡುಬಂದಲ್ಲಿ ನಳಕ್ಕೆ ಹಚ್ಚಿದ ಮೋಟಾರನ್ನು ಜಪ್ತಿ ಮಾಡಿ, ಅಂತಹ ಮನೆಗೆ ಶಾಶ್ವತವಾಗಿ ನೀರಿನ ಸಂಪರ್ಕವನ್ನು ರದ್ದು ಮಾಡಲಾಗುವುದಲ್ಲದೆ, ಅಂತಹವರಿಗೆ ಶಿಕ್ಷೆ/ ದಂಡ ವಿಧಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.

Advertisement

0 comments:

Post a Comment

 
Top