ಕೊಪ್ಪಳ ಸರ್ಕಾರವು ಬಡವರ ಉದ್ದಾರಕ್ಕಾಗಿ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ ವಿತರಣೆ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯಂತಹ ಮಹತ್ತರವಾದ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಕರೆ ನೀಡಿದರು.
ಕೊಪ್ಪಳ ತಾಲೂಕು ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ವಿಶೇಷ ಅನುದಾನದಲ್ಲಿ ೩೦ ಲಕ್ಷ ರೂ.ಗಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಅಳವಂಡಿ ಮತ್ತು ಹಿರೇಸಿಂದೋಗಿ ಹೊಬಳಿಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಸುಮಾರು ೩೦ ಸಾವಿರಕ್ಕೂ ಅಧಿಕ ಭೂಮಿಯು ಹಸಿರಾಗಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆದಷ್ಟು ಬೇಗ ಕಾಮಗಾರಿಗಳು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆಲಾಗುವುದೆಂದು ಮಾತನಾಡಿದರು. ನಮ್ಮ ಸರ್ಕಾರವು ಇಡೀ ರಾಷ್ಟ್ರವೆ ಮೆಚ್ಚುವ ರೀತಿಯಲ್ಲಿ ರೈತರ ಅಭಿವೃದ್ದಿಗಾಗಿ ವಿಶೇಷ ಕೃಷಿ ಬಜೆಟ್ ಮಂಡಣೆ ಮಾಡಿ, ರೈತಗಾಗಿ ಶೇ.೧% ಬಡ್ಡಿದರದಲ್ಲಿ ಸಾಲ, ಅತಿ ಸಣ್ಣ ಹಿಡುವಳಿದಾದದರಿಗೆ ಸುವರ್ಣ ಭೂಮಿಯಲ್ಲಿ ಯೋಜನೆ, ಬಿತ್ತನೆ ಬೀಜಕ್ಕೆ ಸಹಾಯಧನ, ರೈತರಿಗೆ ಕೃಷಿಯಂತ್ರೋಪಕರಣಗಳ ಪೂರೈಕೆ ಮುಂತಾದ ಹಲವಾರು ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದು ಮನವಿ ಮಾಡಿದರು. ಅಲ್ಪ ಸಂಖ್ಯಾರ ಅಭಿವೃದಿಗಾಗಿ ಸ್ವಾಲಂಭನೆ, ಶ್ರಮ ಶಕ್ತಿ ಮತ್ತು ಜನಾಂಗ ಪ್ರತಿಬಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅರಿವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಅಂಬೇಡ್ಕರ ಅಭಿವೃದ್ದಿ ನಿಗಮದಿಂದ ಪರಿಶಿಷ್ಢ ಜಾತಿ ಮತ್ತು ಪರಿಶಿಷ್ಠ ವರ್ಗದವರಿಗೆ ಹೆಚ್ಚುವರಿ ಗಂಗಾ ಕಲ್ಯಾಣ ಯೋಜನೆಯನ್ನು ಮಂಜುರಾತಿ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಗಣ್ಯರಾದ ಪ್ರಸನ್ನ ಗಡಾದ, ಅಂದಪ್ಪ ಡಂಬಳ, ಶರಣಪ್ಪಗೌಡ ಡಂಬಳ, ಪಂಚಯ್ಯ ಹಿರೆಮಠ, ಬಸವರಾಜ ಗಿರಡ್ಡಿ, ಬಸವರಾಜ ಸಂಗರಡ್ಡಿ, ಬಸವರಾಜ ಮುರ್ಲಾಪುರು, ಅಭಿಯಂತರ ಸೆಲ್ವಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಪ್ರೌಢಶಾಲಾ ಕೊಠಡಿಗಳ ನಿರ್ಮಾಣಕ್ಕೆ ೫೫. ೨೭ ಲಕ್ಷ ರೂ. ಅನುದಾನ ಬಿಡುಗಡೆ- ಸಂಗಣ್ಣ ಕರಡಿ
ಕೊಪ್ಪಳ ಕೊಪ್ಪಳ ತಾಲೂಕಿನ ನಾಲ್ಕು ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳಿಗೆ ಹೆಚ್ಚುವರಿಯಾಗಿ ಒಟ್ಟು ೧೧ ಕೊಠಡಿಗಳ ನಿರ್ಮಾಣಕ್ಕಾಗಿ ಸರ್ಕಾರ ೫೫. ೨೭ ಲಕ್ಷ ರೂ.ಗಳನ್ನು ಕಳೆದ ನ. ೨೯ ರಂದು ಬಿಡುಗಡೆ ಮಾಡಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯ ಸರ್ಕಾರಿ ಪ್ರೌಢಶಾಲೆಗೆ ೦೩ ಕೊಠಡಿಗಳ ನಿರ್ಮಾಣಕ್ಕೆ ೧೪. ೮೫ ಲಕ್ಷ ರೂ., ಅಳವಂಡಿಯ ಸರ್ಕಾರಿ ಪ್ರೌಢಶಾಲೆಗೆ ೦೨ ಕೊಠಡಿಗಳ ನಿರ್ಮಾಣಕ್ಕೆ ೧೦. ೭೨ ಲಕ್ಷ ರೂ., ಬೆಟಗೇರಿ ಮತ್ತು ಹಿರೇಬಗನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಗಳಿಗೆ ತಲಾ ೦೩ ಕೊಠಡಿಗಳ ನಿರ್ಮಾಣಕ್ಕೆ ತಲಾ ೧೪. ೮೫ ಲಕ್ಷ ರೂ. ಸೇರಿದಂತೆ ಕೊಪ್ಪಳ ತಾಲೂಕಿನಲ್ಲಿ ಒಟ್ಟು ೧೧ ಕೊಠಡಿಗಳ ನಿರ್ಮಾಣಕ್ಕೆ ೫೫. ೨೭ ಲಕ್ಷ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಸರ್ಕಾರ ತಾಲೂಕಿನ ಪ್ರೌಢಶಾಲೆಗಳ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರಿಗೂ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
koppal mla karadi sanganna
0 comments:
Post a Comment